alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗೆ ನಾಮಕರಣ ಮಾಡುವ ಮೊದಲು ಈ ವಿಷಯ ತಿಳಿದಿರಲಿ

namkaran_04_05_2017

ಹೆಸರಿನಲ್ಲೇನಿದೆ? ಹೂವೊಂದನ್ನು ಬೇರೆ ಹೆಸರಿನಿಂದ ಕರೆದರೂ ಅದ್ರ ವಾಸನೆ, ಬಣ್ಣ ಬದಲಾಗುವುದಿಲ್ಲ. ಹೆಸರು ಕೇವಲ ನಾಮಕಾವಸ್ತೆ ಎನ್ನುವವರು ಅನೇಕ ಮಂದಿ. ಆದ್ರೆ ಪುರಾಣಗಳಲ್ಲಿ ಹೆಸರಿಗೆ ಬಹಳ ಮಹತ್ವ ನೀಡಲಾಗಿದೆ. ಹೆಸರೊಂದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಹೊಂದಿದೆ.

ತ್ರೇತಾಯುಗದಲ್ಲಿ ಶ್ರೀರಾಮನಿಗೆ ಋಷಿಗಳು ಹೆಸರಿಟ್ಟಿದ್ದರು. ಶ್ರೀಕೃಷ್ಣನಿಗೆ ಹೆಸರಿಡುವಾಗಲೂ ಸಾಕಷ್ಟು ಆಲೋಚನೆಗಳನ್ನು ಮಾಡಲಾಗಿತ್ತು. ಜಾತಕದ ಪ್ರಕಾರ ಹೆಸರಿಟ್ಟರೆ ಭಾಗ್ಯದ ಬಾಗಿಲು ಆದಷ್ಟು ಬೇಗ ತೆರೆಯುತ್ತದೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಮಕ್ಕಳಿಗೆ ದೇವಾನುದೇವತೆಗಳ ಹೆಸರಿಡಲಾಗುತ್ತದೆ. ರಾವಣ, ವಿಭೀಷಣ, ಕುಂಭಕರ್ಣನಂತಹ ರಾಕ್ಷಸರ ಹೆಸರನ್ನು ಇಡುವುದಿಲ್ಲ.

ಮಕ್ಕಳು ಜನಿಸಿದ ನಂತ್ರವೇ ಮಕ್ಕಳಿಗೆ ಹೆಸರಿಡಬೇಕು. ಆಲೋಚನೆ ಮಾಡಿಯೇ ಮಕ್ಕಳಿಗೆ ಹೆಸರಿಡಬೇಕು.

ಹೆಸರು ಸರಳವಾಗಿರುವಂತೆ ನೋಡಿಕೊಳ್ಳಿ. ಸುಲಭವಾಗಿ ಉಚ್ಛರಿಸುವಂತ ಹೆಸರನ್ನಿಡಿ. ಅಪೂರ್ಣ ಪದಗಳ ಬಳಕೆ ಬೇಡ.

ಇತ್ತೀಚಿನ ದಿನಗಳಲ್ಲಿ ದಂಪತಿ ತಮ್ಮಿಬ್ಬರ ಹೆಸರಿನ ಒಂದೊಂದು ಅಕ್ಷರವನ್ನು ಸೇರಿಸಿ ಮಗುವಿಗೆ ಹೆಸರಿಡ್ತಾರೆ. ಇದೊಂದು ಉತ್ತಮ ವಿಧಾನವೆಂದ್ರೆ ತಪ್ಪಾಗಲಾರದು.

ಮಕ್ಕಳಿಗೆ ವರ್ಣಮಾಲೆಯ ಮೊದಲ ಹಾಗೂ ಎರಡನೇ ಅಕ್ಷರವನ್ನಿಟ್ಟರೆ ಒಳ್ಳೆಯದು. ಉಳಿದ ಅಕ್ಷರವನ್ನು ಆದಷ್ಟು ಕಡಿಮೆ ಬಳಸಿದ್ರೆ ಉತ್ತಮ.

ನಾಮಕರಣಕ್ಕೂ ಮೊದಲು ನೀವು ಮಗುವಿಗಿಡುವ ಶಬ್ಧದ ಅರ್ಥ ಹಾಗೂ ಮಹತ್ವವನ್ನು ತಿಳಿದುಕೊಳ್ಳಿ. ಕೆಲವೊಂದು ಹೆಸರು ಕೇಳಲು ಹಿತವೆನಿಸುತ್ತದೆ. ಆದ್ರೆ ಇದರ ಅರ್ಥ ಕೆಟ್ಟದಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...