alex Certify
ಕನ್ನಡ ದುನಿಯಾ       Mobile App
       

Kannada Duniya

ಬುಧವಾರ ಈ ಕೆಲಸ ಮಾಡಿದ್ರೆ ಬದಲಾಗಲಿದೆ ಅದೃಷ್ಟ

2017_2image_09_18_203790644lordshivshankar-ll

ಫೆಬ್ರವರಿ 8, ಮಾಘ ಮಾಸದ ಶುಕ್ಲ ಪಕ್ಷದ ದ್ವಾದಶಿಯಾಗಿದ್ದು, ಭಗವಂತ ಶಿವನಿಗೆ ಅರ್ಪಿತವಾದ ಪ್ರದೋಷ ವೃತ. ಬುಧವಾರ ಬಂದಿರುವುದರಿಂದ ಅದನ್ನು ಬುಧ ಪ್ರದೋಷ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಸಮಸ್ಯೆಯನ್ನು ನಾಶ ಮಾಡುವುದೇ ಪ್ರದೋಷದ ಅರ್ಥ. ಧನ ಸಂಬಂಧಿ ಸಮಸ್ಯೆಯನ್ನು ಹೋಗಲಾಡಿಸಲು ಇದು ಒಳ್ಳೆಯ ದಿನ.

ಜೀವನದಲ್ಲಿ ಪ್ರತಿಯೊಂದು ಕೆಲಸಕ್ಕೂ ಬುದ್ಧಿಯ ಅವಶ್ಯಕತೆ ಇದೆ. ಬುದ್ಧಿ ಹೀನ ವ್ಯಕ್ತಿ ದುಃಖ, ಬಡತನ, ದುರ್ಭಾಗ್ಯದಿಂದ ನರಳುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುದ್ಧಿಗೂ ಬುಧಗ್ರಹಕ್ಕೂ ಸಂಬಂಧವಿದೆ. ಮಿಥುನ ಹಾಗೂ ಕನ್ಯಾ ರಾಶಿಯ ಮೇಲೆ ಬುದನ ಪ್ರಭಾವ ಹೆಚ್ಚಿರುತ್ತದೆ. ಬುಧ ಗ್ರಹದ ಕೆಟ್ಟ ಪ್ರಭಾವದಿಂದ ತಪ್ಪಿಸಿಕೊಳ್ಳಲು ಫೆಬ್ರವರಿ 8 ರಿಂದ ಪ್ರತಿದಿನ ಗಾಯತ್ರಿ ಮಂತ್ರವನ್ನು ಜಪಿಸಬೇಕು.

ಇಂದು ಯಾರ ಜನ್ಮದಿನವಿದೆಯೋ ಅವರು ಗಣೇಶ ದೇವಾಲಯಕ್ಕೆ ಹೋಗಿ ದರ್ಬೆಯನ್ನು ಅರ್ಪಿಸಿ.

ಮದುವೆ ವಾರ್ಷಿಕೋತ್ಸವದ ಖುಷಿಯಲ್ಲಿರುವವರು ಸತತ ಏಳು ಬುಧವಾರ ಕಪ್ಪು ಹಸುವಿಗೆ ಪಾಲಕ್ ತಿನ್ನಿಸಿ.

ಪ್ರದೋಷ ಪೂಜೆಯ ಸಮಯ : 20:6 -22:20

ಮೇಷ ರಾಶಿಯವರು ತುಳಸಿಗೆ 5 ಅಕ್ಕಿ ಕಾಳನ್ನು ಅರ್ಪಿಸಿ.

ವೃಷಭ ರಾಶಿಯವರು ಗಣೇಶನಿಗೆ ಅರ್ಪಣೆ ಮಾಡಿದ ಏಲಕ್ಕಿಯನ್ನು ಕಪಾಟಿನಲ್ಲಿಡಿ.

ಮಿಥುನ ರಾಶಿಯವರು ಸಿಹಿ ಅಡಿಕೆ ತಿನ್ನಿ.

ಕರ್ಕ ರಾಶಿಯವರು ಹಕ್ಕಿಗಳಿಗಾಗಿ ಹೆಸರುಕಾಳನ್ನು ಇಡಿ.

ಸಿಂಹ ರಾಶಿಯವರು ಅಡಿಕೆಗೆ ಅತ್ರ ಸಿಂಪಡಿಸಿ ಕಪಾಟಿನಲ್ಲಿಡಿ.

ಕನ್ಯಾ ರಾಶಿಯವರು ಸಿಹಿ ಪಾನ್ ಸೇವನೆ ಮಾಡಿ.

ತುಲಾ ರಾಶಿಯವರು ದುರ್ಗಾ ದೇವಿಯ ಚಿತ್ರಕ್ಕೆ 5 ರೂಪಾಯಿ ನಾಣ್ಯವನ್ನು ಇಡಿ.

ವೃಶ್ಚಿಕ ರಾಶಿಯವರು ಹಸಿರು ಗಿಡದ ಕೆಳಗೆ ಕರ್ಪೂರ ಹಚ್ಚಿ.

ಧನು ರಾಶಿಯವರು ವಿವಾಹಿತ ಮಹಿಳೆಗೆ ಕೊತ್ತಂಬರಿ ಬೀಜವನ್ನು ನೀಡಿ.

ಮಕರ ರಾಶಿಯವರು ಗಣೇಶನ ಚಿತ್ರಕ್ಕೆ ಪಾಲಕ್ ಅರ್ಪಿಸಿ.

ಕುಂಭ ರಾಶಿಯವರು ಬಡ ಮಕ್ಕಳಿಗೆ ಸಿಹಿ ಹಂಚಿ.

ಮೀನ ರಾಶಿಯವರು ಪೂಜಾ ಸ್ಥಳದಲ್ಲಿ ಮೆಹಂದಿ ಪುಡಿಯನ್ನು ಇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...