alex Certify
ಕನ್ನಡ ದುನಿಯಾ       Mobile App
       

Kannada Duniya

ಸುಖ-ಶಾಂತಿಗೆ ಕಾರಣವಾಗುತ್ತೆ ಮನೆಯಲ್ಲಿರುವ ಈ ಪೀಠೋಪಕರಣ

ಪೀಠೋಪಕರಣ ಪ್ರತಿ ಮನೆಯ ಅಗತ್ಯತೆಗಳಲ್ಲಿ ಒಂದು. ಮನೆಯ ಸೌಂದರ್ಯವನ್ನೂ ಇದು ಹೆಚ್ಚಿಸುತ್ತದೆ. ಹಾಗಾಗಿ ಜನರು ಮನೆಗೆ ಬೇರೆ ಬೇರೆ ಸುಂದರ ಪೀಠೋಪಕರಣಗಳನ್ನು ತರ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮರದ ಪೀಠೋಪಕರಣ ಮನೆಯ ಖುಷಿ-ಸಮೃದ್ಧಿಯನ್ನು ಹೆಚ್ಚಿಸುತ್ತದೆಯಂತೆ.

ಪೀಠೋಪಕರಣವನ್ನು ಮನೆಗೆ ತರುವಾಗ ವಾಸ್ತುಶಾಸ್ತ್ರದ ಬಗ್ಗೆಯೂ ಗಮನ ನೀಡಬೇಕು. ವಾಸ್ತುಶಾಸ್ತ್ರದ ವಿರುದ್ಧವಾಗಿ ಮನೆಗೆ ಪೀಠೋಪಕರಣ ತಂದಲ್ಲಿ ಖುಷಿ ಹೆಚ್ಚಾಗುವ ಬದಲು ಸಮಸ್ಯೆ ಜಾಸ್ತಿಯಾಗುತ್ತದೆ.

ಪೀಠೋಪಕರಣವನ್ನು ಶುಭ ದಿನದಂದು ಖರೀದಿ ಮಾಡಬೇಕು. ಶನಿವಾರ, ಮಂಗಳವಾರ, ಅಮವಾಸ್ಯೆಯಂದು ಪೀಠೋಪಕರಣವನ್ನು ಎಂದೂ ಖರೀದಿ ಮಾಡಬೇಡಿ. ಇದು ಶುಭ-ಶಾಂತಿಗೆ ಭಂಗವುಂಟು ಮಾಡುತ್ತದೆ.

ಯಾವ ಮರದಿಂದ ಪೀಠೋಪಕರಣ ಮಾಡಲಾಗಿದೆ ಎಂಬುದನ್ನು ವಿಚಾರಿಸಿ. ಗಂಧ, ಸಾಗವಾನಿ, ಬೇವು, ಅಶೋಕ ಮರದಿಂದ ಮಾಡಿದ ಪೀಠೋಪಕರಣ ಮನೆಯ ಖುಷಿಯನ್ನು ಹೆಚ್ಚಿಸುತ್ತದೆ.

ಮನೆಯಲ್ಲಿ ಮರದ ಕೆಲಸ ಮಾಡುವುದಾದ್ರೆ ಯಾವಾಗ್ಲೂ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಿಂದಲೇ ಶುರು ಮಾಡಿ. ಇದು ಮನೆ ಅಭಿವೃದ್ಧಿಗೆ ಒಳ್ಳೆಯದು. ಪೀಠೋಪಕರಣ ತಯಾರಿ ವೇಳೆ ಮಂಗಳಕರ ದಿನವನ್ನು ನೋಡಬೇಕು.

ಆರ್ಥಿಕ ನಷ್ಟ ತಪ್ಪಿಸಲು ಪೀಠೋಪಕರಣವನ್ನು ಈಶಾನ್ಯ ದಿಕ್ಕಿಗೆ ಅಳವಡಿಸಿ. ಅಗತ್ಯಕ್ಕಿಂತ ಹೆಚ್ಚು ಕೋನದ ಪೀಠೋಪಕರಣ ಶುಭಕರವೆಂದು ಪರಿಗಣಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...