alex Certify ಮಲಗುವಾಗ ಈ ನಿಯಮ ಅನುಸರಿಸಿ ಸಮಸ್ಯೆಗಳಿಂದ ಹೊಂದಿ ಮುಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಗುವಾಗ ಈ ನಿಯಮ ಅನುಸರಿಸಿ ಸಮಸ್ಯೆಗಳಿಂದ ಹೊಂದಿ ಮುಕ್ತಿ

Vastu Tips: Do not keep these things at your head while sleeping, they invite trouble|Vastu Tips: सोते समय इन चीजों को भूलकर भी न रखें सिरहाने, संकट को देती हैं निमंत्रण |

ಸುಖ, ಶಾಂತಿ, ಆರ್ಥಿಕ ಹಾಗೂ ಆರೋಗ್ಯ ಸ್ಥಿತಿಯಲ್ಲಿ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಮನೆಯ ಪ್ರತಿಯೊಂದು ವಾಸ್ತುವೂ ನಮ್ಮ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಸರಿಯಲ್ಲದ ವೇಳೆ ನಕಾರಾತ್ಮಕ ಶಕ್ತಿಗಳು ಬಲ ಪಡೆಯುತ್ತವೆ. ನಾವು ಮಲಗುವ ಹಾಸಿಗೆ ಹಾಗೂ ಬೆಡ್ ರೂಂ ನಲ್ಲಿರುವ ಪ್ರತಿಯೊಂದು ವಸ್ತುವೂ ವಾಸ್ತು ಪ್ರಕಾರವಿದ್ದರೆ ಒಳ್ಳೆಯದು.

ಈ ಹಿಂದೆ ಬೆಡ್ ರೂಂ ನಲ್ಲಿ ಯಾವೆಲ್ಲ ವಸ್ತುಗಳನ್ನು ಇಡಬಾರದು ಅಂತಾ ನಾವು ಹೇಳಿದ್ದೇವೆ. ಇನ್ನೂ ಕೆಲವೊಂದು ವಸ್ತುಗಳು ಬೆಡ್ ರೂಂ ನಲ್ಲಿದ್ದರೆ ಏನೆಲ್ಲ ಸಮಸ್ಯೆ ಆಗುತ್ತದೆ ಎಂಬುದನ್ನು ಈಗ ಹೇಳ್ತೇವೆ ಕೇಳಿ.

ನಿಮ್ಮ ಹಾಸಿಗೆಯ ಮಧ್ಯದಲ್ಲಿ ಫ್ಯಾನ್, ಬೆಡ್ ಲ್ಯಾಂಪ್ ಸೇರಿದಂತೆ ಯಾವುದೇ ಇಲೆಕ್ಟ್ರಿಕಲ್ ವಸ್ತುಗಳನ್ನು ಇಡಬೇಡಿ. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

ಗಡಿಯಾರವನ್ನು ಎಂದೂ ನಿಮ್ಮ ತಲೆ ಹಿಂದಿಟ್ಟು ಮಲಗಬೇಡಿ. ಹಾಗಂತ ಹಾಸಿಗೆಯ ಮುಂದೆ ಗಡಿಯಾರ ಇಡುವುದು ಒಳ್ಳೆಯದಲ್ಲ. ಎಡ ಅಥವಾ ಬಲ ಭಾಗದಲ್ಲಿ ಗಡಿಯಾರ ಇಡುವುದು ಒಳ್ಳೆಯದು. ಇಲ್ಲವಾದ್ರೆ ಮಾನಸಿಕ ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಹಾಸಿಗೆಯ ಮೇಲೆ ಅತ್ಯಾಕರ್ಷಕ ಬಣ್ಣದ, ಬಹಳ ಡಿಸೈನ್ ಇರುವ ಬೆಡ್ ಶೀಟ್ ಹಾಗೂ ತಲೆದಿಂಬನ್ನು ಇಡಬಾರದು.

ಬೆಡ್ ರೂಂ ನಲ್ಲಿ ಹಿರಿಯರ ಹಾಗೂ ದೇವರ ಚಿತ್ರವನ್ನು ನೇತು ಹಾಕಬೇಡಿ.

ಯುದ್ಧ, ಹಿಂಸೆಯ ಫೋಟೋ, ಸಿಂಹದಂತ ಕ್ರೂರ ಪ್ರಾಣಿಯ ಚಿತ್ರವನ್ನೂ ಅಂಟಿಸಬೇಡಿ. ಸರಳ ಹಾಗೂ ಸಾಧು ಪ್ರಾಣಿಗಳ ಚಿತ್ರ ಒಳ್ಳೆಯದು.

ಬೆಡ್ ರೂಂ ನ ಬಾಗಿಲಿಗೆ ಕಾಲು ಬರುವಂತೆ ಮಲಗುವುದು ವಾಸ್ತು ಪ್ರಕಾರ ಒಳ್ಳೆಯದಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...