alex Certify
ಕನ್ನಡ ದುನಿಯಾ       Mobile App
       

Kannada Duniya

ಜುಲೈ 2 ರೊಳಗೆ ಅವಶ್ಯವಾಗಿ ಮಾಡಿ ಈ ಕೆಲಸ

2017_6image_13_10_211456430poverty-ll

ಜೂನ್ 24ರಿಂದ ಗುಪ್ತ ನವರಾತ್ರಿ ಶುರುವಾಗಿದ್ದು, ಜುಲೈ ಎರಡರವರೆಗೆ ಈ ನವರಾತ್ರಿ ಆಚರಿಸಲಾಗುವುದು. ಈ ದಿನಗಳಲ್ಲಿ ಕೆಲವೊಂದು ವಿಶೇಷ ಕಾರ್ಯಗಳನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಗುಪ್ತ ನವರಾತ್ರಿ ಮುಗಿಯುವ ಮೊದಲು ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನು ಹೊರಗೆ ಹಾಕಬೇಕು. ಈ ವಸ್ತುಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ. ತಾಯಿ ಲಕ್ಷ್ಮಿ ಹಾಗೂ ದುರ್ಗೆಯ ಕೃಪೆ ಲಭ್ಯವಾಗುವುದಿಲ್ಲ.

ಮನೆಯಲ್ಲಿ ಒಡೆದ ಹಾಗೂ ಹಾಳಾಗಿರುವ ಪಾತ್ರೆಗಳು ಇರಬಾರದು. ಇದ್ರಿಂದ ಮನೆಯಲ್ಲಿ ವಾಸ್ತುದೋಷ ಹಾಗೂ ಗಲಾಟೆ-ಜಗಳ ಹೆಚ್ಚಾಗುತ್ತದೆ. ಜುಲೈ ಎರಡರೊಳಗೆ ಆ ಪಾತ್ರೆಗಳನ್ನು ಮನೆಯಿಂದ ಹೊರಗೆಹಾಕಿ.

ಒಡೆದಿರುವ ಗ್ಲಾಸುಗಳನ್ನು ಮನೆಯಲ್ಲಿಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಕುಟುಂಬದ ಸದಸ್ಯರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪತಿ-ಪತ್ನಿ ಮಲಗುವ ಹಾಸಿಗೆ ಹರಿದಿದ್ದರೆ ಇಂದೇ ಬದಲಾಯಿಸಿ. ಇದ್ರಿಂದ ವೈವಾಹಿಕ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ.

ನಿಂತಿರುವ ಹಾಗೂ ಹಾಳಾದ ಗಡಿಯಾರವನ್ನು ಮನೆಯಿಂದ ಹೊರಗೆ ಬಿಸಾಕಿ. ಈ ಗಡಿಯಾರಗಳು ಕುಟುಂಬ ಸದಸ್ಯರಲ್ಲಿ ಸಮಸ್ಯೆ ತಂದೊಡ್ಡುತ್ತದೆ.

ಮನೆಯ ಬಾಗಿಲುಗಳು ಹಾಳಾಗಿದ್ದರೆ ಅದನ್ನು ಜುಲೈ ಎರಡರೊಳಗೆ ದುರಸ್ಥಿ ಮಾಡಿಸಿ. ಹಾಳಾದ, ಮುರಿದ ಖುರ್ಚಿಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ಕಾರಣವಾಗುತ್ತವೆ.

ಮನೆಯಲ್ಲಿ ಹಾಳಾಗಿರುವ ಫೋಟೋವನ್ನು ಹಾಕಬೇಡಿ. ಇದು ವಾಸ್ತುದೋಷಕ್ಕೆ ಕಾರಣವಾಗುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...