alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಮನೆ ನಿರ್ಮಾಣದ ವೇಳೆ ವಾಸ್ತು ಬಗ್ಗೆ ಗಮನವಿರಲಿ

2016_12image_11_35_176257199lordshivtemple-ll

ಮನೆ ನಿರ್ಮಾಣದ ವೇಳೆ ಯಾವ ದಿಕ್ಕಿನಲ್ಲಿ, ಎಲ್ಲಿ ದೇವರ ಮನೆ ಮಾಡಬೇಕೆನ್ನುವ ಚಿಂತೆ ಕಾಡುತ್ತದೆ. ವಾಸ್ತುಶಾಸ್ತ್ರದ ಜ್ಞಾನ ಇಲ್ಲದವರು ತಪ್ಪು ಜಾಗದಲ್ಲಿ ದೇವರ ಮನೆ ನಿರ್ಮಾಣ ಮಾಡಿ ಪಶ್ಚಾತಾಪ ಪಡ್ತಾರೆ. ಶೇಕಡಾ 90ರಷ್ಟು ಮಂದಿ ದೇವರ ಮನೆಯನ್ನು ತಪ್ಪು ದಿಕ್ಕಿನಲ್ಲಿ ನಿರ್ಮಾಣ ಮಾಡಿ, ನಂತ್ರ ತೊಂದರೆ ಅನುಭವಿಸ್ತಾರೆ.

ಭಕ್ತಿ ಭಾವದಿಂದ ದೇವರ ಪೂಜೆ ಮಾಡುವ ವ್ಯಕ್ತಿಗೆ ಪ್ರಸನ್ನನಾಗುವ ದೇವರು ಕೈಬಿಚ್ಚಿ ಕೊಡ್ತಾನೆ. ದೇವರ ಮುಂದೆ ಶ್ರದ್ಧೆ ಬಹಳ ಮುಖ್ಯ. ಆದ್ರೆ ಶ್ರದ್ಧೆ, ಭಕ್ತಿ ಮೇಲೆ ವಾಸ್ತುವಿನ ಪ್ರಭಾವ ಬೀರುತ್ತದೆ. ವಾಸ್ತು ಪ್ರಕಾರ ನಿರ್ಮಾಣವಾಗಿರದ ದೇವರ ಮನೆಯಲ್ಲಿ ಶ್ರದ್ಧೆ, ಭಕ್ತಿಯ ಕೊರತೆ ಕಾಡುತ್ತದೆ.

ಒಂದು ಮನೆಯಲ್ಲಿ ಒಂದೇ ದೇವರ ಮನೆ ಇರಬೇಕು. ಕೆಲವು ಮನೆಗಳಲ್ಲಿ ಅಜ್ಜಿ ಕೋಣೆಯಲ್ಲೊಂದು ದೇವರು, ಮನೆ ಯಜಮಾನನ ಕೋಣೆಯಲ್ಲೊಂದು ಹಾಗೂ ಮನೆಯ ಮಕ್ಕಳಿಗೆ ಇನ್ನೊಂದು ದೇವರ ಮನೆ ಕಟ್ಟಿ ಪೂಜೆ ಮಾಡ್ತಾರೆ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಹಾಗಾಗಿ ಮನೆಯಲ್ಲಿ ಒಂದೇ ದೇವರ ಮನೆಯಿದ್ದು, ಒಂದು ಸ್ಥಳದಲ್ಲಿ ಮಾತ್ರ ಪೂಜೆ ನಡೆಯಬೇಕು. ಹಾಗೆ ಮನೆಯ ವಿವಿಧ ಸ್ಥಳಗಳಲ್ಲಿ ದೇವರ ಫೋಟೋವನ್ನು ಹಾಕಬಾರದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...