alex Certify
ಕನ್ನಡ ದುನಿಯಾ       Mobile App
       

Kannada Duniya

ಈ 9 ಪದಾರ್ಥದಿಂದ 9 ದಿನ ಮಾಡಿ ತಾಯಿ ಪೂಜೆ

ತಾಯಿ ದುರ್ಗೆಯ ಪೂಜೆಗೆ ಭಕ್ತರು ಸಿದ್ಧರಾಗ್ತಿದ್ದಾರೆ. ಸೆಪ್ಟೆಂಬರ್ 21ರಿಂದ ನವರಾತ್ರಿ ಶುರುವಾಗ್ತಿದೆ. 9 ದಿನಗಳ ಕಾಲ ನಡೆಯುವ ಈ ದುರ್ಗಾ ಪೂಜೆಯಲ್ಲಿ 9 ವಸ್ತುಗಳಿಂದ ತಾಯಿಯ ಆರಾಧನೆ ಮಾಡಿದ್ರೆ ಎಲ್ಲ ಬಯಕೆ ಈಡೇರಲಿದೆ.

ನವರಾತ್ರಿಯ ಮೊದಲ ದಿನ ಆಕಳ ತುಪ್ಪವನ್ನು ತಾಯಿಗೆ ಅರ್ಪಿಸಿ. ಇದ್ರಿಂದ ಆರೋಗ್ಯ ವೃದ್ಧಿಯಾಗಲಿದೆ.

ನವರಾತ್ರಿಯ ಎರಡನೇ ದಿನ ಸಕ್ಕರೆಯನ್ನು ದಾನ ಮಾಡಿ. ಸಕ್ಕರೆ ದೀರ್ಘಾಯುಷ್ಯದ ಸಂಕೇತ.

ತೃತೀಯ ದಿನ ಹಾಲು ಪ್ರಮುಖ ದಾತುವಾಗಿರುತ್ತದೆ. ಪೂಜೆಗೆ ಹಾಲನ್ನು ಬಳಸಬೇಕು. ಈ ಹಾಲನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು. ಹಾಲನ್ನು ತಾಯಿಗೆ ಅರ್ಪಿಸಿ ದಾನ ಮಾಡುವುದ್ರಿಂದ ದುಃಖ ದೂರವಾಗುತ್ತದೆ.

ನಾಲ್ಕನೇ ದಿನ ಮಾಲ್ಪುವಾವನ್ನು ತಯಾರಿಸಿ ತಾಯಿಗೆ ಅರ್ಪಿಸಿ. ಈ ಪ್ರಸಾದವನ್ನು ಬ್ರಾಹ್ಮಣರಿಗೆ ನೀಡಿ. ಇದ್ರಿಂದ ಬುದ್ದಿ ವಿಕಾಸವಾಗುವ ಜೊತೆಗೆ ನಿರ್ಣಯ ಶಕ್ತಿಯಲ್ಲಿ ಬೆಳವಣಿಗೆಯಾಗುತ್ತದೆ.

ನವರಾತ್ರಿಯ ಐದನೇ ದಿನ ಬಾಳೆಹಣ್ಣನ್ನು ನೈವೇದ್ಯ ಮಾಡಬೇಕು. ನಂತ್ರ ಪ್ರಸಾದವನ್ನು ಬ್ರಾಹ್ಮಣರಿಗೆ ನೀಡಬೇಕು. ಇದು ಬುದ್ದಿ ಶಕ್ತಿಯನ್ನು ಹೆಚ್ಚಿಸುತ್ತದೆ.

ನವರಾತ್ರಿಯ ಆರನೇ ದಿನ ಜೇನು ತುಪ್ಪಕ್ಕೆ ವಿಶೇಷ ಮಹತ್ವವಿದೆ. ಜೇನುತುಪ್ಪವನ್ನು ತಾಯಿಗೆ ಅರ್ಪಿಸಿ ನಂತ್ರ ದಾನ ಮಾಡಬೇಕು. ಇದ್ರಿಂದ ಆಂತರಿಕ ಹಾಗೂ ಬಾಹ್ಯ ಸೌಂದರ್ಯದಲ್ಲಿ ವೃದ್ಧಿಯಾಗುತ್ತದೆ.

ಏಳನೇ ದಿನ ಬೆಲ್ಲವನ್ನು ತಾಯಿಗೆ ಅರ್ಪಿಸಬೇಕು. ಅದನ್ನು ಬ್ರಾಹ್ಮಣರಿಗೆ ದಾನ ನೀಡಬೇಕು. ಇದು ದುಃಖ ದೂರ ಮಾಡುವ ಜೊತೆಗೆ ಆಕಸ್ಮಿಕ ವಿಪತ್ತಿನಿಂದ ರಕ್ಷಣೆ ನೀಡುತ್ತದೆ.

ಅಷ್ಠಮಿಯಂದು ತೆಂಗಿನ ಕಾಯಿಯನ್ನು ತಾಯಿಗೆ ನೈವೇದ್ಯ ಮಾಡುವ ಜೊತೆಗೆ ತೆಂಗಿನ ಕಾಯಿಯನ್ನು ದಾನ ಮಾಡಬೇಕು. ಎಲ್ಲ ರೀತಿಯ ನೋವು ನಿವಾರಣೆಯಾಗುತ್ತದೆ.

ನವಮಿಯಂದು ಹೊದ್ಲನ್ನು ತಾಯಿಗೆ ನೀಡಬೇಕು. ಭತ್ತವನ್ನು ದಾನವಾಗಿ ನೀಡುವುದ್ರಿಂದ ಸಂತೋಷ ಪ್ರಾಪ್ತಿಯಾಗುತ್ತದೆ. ಕಪ್ಪು ಎಳ್ಳನ್ನು ದಾನವಾಗಿ ನೀಡುವುದ್ರಿಂದ ಭಯ ದೂರವಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...