alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಜೇಬು ತುಂಬಿಸುವ ಕೆಲಸ ಮಾಡುತ್ತೆ ನವಿಲುಗರಿ

download-3

ಶ್ರೀಕೃಷ್ಣನ ಹುಟ್ಟುಹಬ್ಬ ಬರ್ತಿದೆ. ಕೃಷ್ಣಜನ್ಮಾಷ್ಠಮಿಯ ರಾತ್ರಿ ಭಕ್ತರು ಹಬ್ಬ ಆಚರಿಸ್ತಾರೆ. ಶ್ರೀಕೃಷ್ಣನನ್ನು ಖುಷಿಪಡಿಸಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಕೃಷ್ಣನ ಜನ್ಮ ದಿನ ಬಂತೆಂದ್ರೆ ಕೃಷ್ಣನ ಮುಕುಟದಲ್ಲಿರುವ ನವಿಲು ಗರಿ ನೆನಪಿಗೆ ಬರುತ್ತದೆ. ನವಿಲುಗರಿ 9 ಗ್ರಹಗಳನ್ನು ಪ್ರತಿನಿಧಿಸುತ್ತದೆ. ಕೃಷ್ಣಜನ್ಮಾಷ್ಠಮಿಯ ದಿನ ರಾತ್ರಿ ನೀವು ಮಾಡುವ ಸಣ್ಣ ಕೆಲಸದಿಂದ ನಿಮ್ಮೆಲ್ಲ ಸಂಕಷ್ಟ ದೂರವಾಗುತ್ತದೆ.

ಧನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಪ್ರಗತಿಗೆ, ಪ್ರಖ್ಯಾತಿಗೆ ಅಡ್ಡಿಯಾಗುವ ಸಮಸ್ಯೆ ಕಾಡುತ್ತಿದ್ದರೆ ನವಿಲುಗರಿ ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ. ಜನ್ಮಾಷ್ಠಮಿಯ ದಿನದಂದು ರಾಧಾಕೃಷ್ಣನ ಮಂದಿರಕ್ಕೆ ಹೋಗಿ ಶ್ರೀಕೃಷ್ಣನ ಮುಕುಟಕ್ಕೆ ನವಿಲುಗರಿಯನ್ನು ಅರ್ಪಿಸಿ. 40 ದಿನಗಳ ನಂತ್ರ ಈ ನವಿಲುಗರಿಯನ್ನು ಮನೆಗೆ ತಂದು ಹಣವಿಡುವ ಸ್ಥಳದಲ್ಲಿಡಿ. ನಂತ್ರ ಚಮತ್ಕಾರ ನೋಡಿ.

ಶತ್ರುಗಳು ನಿಮ್ಮನ್ನು ಬೆಂಬಿಡದೆ ಕಾಡುತ್ತಿದ್ದರೆ ಒಂದು ನವಿಲುಗರಿಯ ಮೇಲೆ ನಿಮ್ಮ ಶತ್ರುವಿನ ಹೆಸರನ್ನು ಬರೆಯಿರಿ. ನಂತ್ರ ಜನ್ಮಾಷ್ಠಮಿಯ  ರಾತ್ರಿ ಪೂರ್ತಿ ಕೃಷ್ಣನ ಮಂದಿರದಲ್ಲಿ ಗರಿಯನ್ನು ಇಡಿ. ಬೆಳಿಗ್ಗೆ ಸ್ನಾನ ಮಾಡದೆ, ಯಾರ ಬಳಿಯೂ ಮಾತನಾಡದೆ ನವಿಲುಗರಿಯನ್ನು ನೀರಿಗೆ ಬಿಡಿ. ನೀರಿಗೆ ಬಿಡಲು ಸಾಧ್ಯವಾಗದೆ ಹೋದಲ್ಲಿ ಮರದ ಕೆಳಗೆ ಇಡಿ. ಹೀಗೆ ಮಾಡುವುದರಿಂದ ನಿಮ್ಮ ಶತ್ರುಗಳು ಮಿತ್ರರಾಗ್ತಾರೆ.

ಕಾಳ ಸರ್ಪ ದೋಷ ಅಥವಾ ಜಾತಕದಲ್ಲಿ ಬೇರೆ ಯಾವುದೇ ರೀತಿಯ ದೋಷವಿದ್ದರೆ ಅದನ್ನು ನವಿಲುಗರಿ ಪರಿಹರಿಸುತ್ತದೆ. ಜನ್ಮಾಷ್ಠಮಿಯ ದಿನದಂದು ರಾತ್ರಿ ಏಳು ನವಿಲುಗರಿಯನ್ನು ನಿಮ್ಮ ದಿಂಬಿನ ಬಳಿ ಇಟ್ಟು ಮಲಗಿ.

11 ನವಿಲುಗರಿಗಳಿಂದ ಮಾಡಿದ ಬೀಸಣಿಕೆಯನ್ನು ಮಲಗುವ ಕೋಣೆಯಲ್ಲಿಡಿ. ದಿನಕ್ಕೊಂದು ಬಾರಿ ಇದ್ರಿಂದ ಗಾಳಿ ಬೀಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...