alex Certify
ಕನ್ನಡ ದುನಿಯಾ       Mobile App
       

Kannada Duniya

ಧನ ವೃದ್ಧಿಗೆ ಕೃಷ್ಣ ಜನ್ಮಾಷ್ಠಮಿಯಂದು ಅರ್ಪಿಸಿ ಈ ವಸ್ತು

ಹಣಕಾಸಿನ ಸಮಸ್ಯೆ ಹೆಚ್ಚಿದ್ದು, ಜೀವನದಲ್ಲಿ ಆರ್ಥಿಕ ಸಂಘರ್ಷ ಎದುರಿಸುತ್ತಿದ್ದರೆ ಈ ಬಾರಿಯ ಕೃಷ್ಣ ಜನ್ಮಾಷ್ಠಮಿ ನಿಮ್ಮ ಅದೃಷ್ಟ ಬದಲಿಸಬಹುದು. ಕೃಷ್ಣ ಜನ್ಮಾಷ್ಠಮಿಯಂದು ಗೋಪಾಲನಿಗೆ 5 ವಸ್ತುಗಳನ್ನು ಅರ್ಪಿಸಿದ್ರೆ ಜೀವನದಲ್ಲಿ ಶೀಘ್ರವೇ ಪ್ರಗತಿ ಸಿಗಲಿದೆ.

ಭಗವಂತ ಕೃಷ್ಣ ತುಳಸಿ ಪ್ರಿಯ. ಹಾಗಾಗಿ ಪೂಜೆ ವೇಳೆ ತುಳಸಿಯನ್ನು ಅವಶ್ಯವಾಗಿ ಅರ್ಪಿಸಿ.

ಬೆಣ್ಣೆ ಎಂದ್ರೆ ಗೋಪಾಲ ಎಂದರ್ಥ. ಕೃಷ್ಣನಿಗೆ ಅತಿ ಇಷ್ಟದ ತಿಂಡಿ ಬೆಣ್ಣೆ. ಹಾಗಾಗಿ ಬೆಣ್ಣೆಯಿಂದ ಮಾಡಿದ ಮಿಠಾಯಿಯನ್ನು ಕೃಷ್ಣನಿಗೆ ಅರ್ಪಿಸಲು ಮರೆಯಬೇಡಿ.

ಹಳದಿ ಬಣ್ಣದ ಹಣ್ಣನ್ನು ಕೃಷ್ಣನಿಗೆ ಅರ್ಪಿಸಬೇಕು. ಹಳದಿ ಬಣ್ಣದ ಹಣ್ಣನ್ನು ಕೃಷ್ಣನಿಗೆ ಅರ್ಪಣೆ ಮಾಡುವುದ್ರಿಂದ ಧನ-ಸಂಪತ್ತಿನ ಪ್ರಾಪ್ತಿಯಾಗಲಿದೆ. ಭಗವಂತ ಕೃಷ್ಣ ಪ್ರಸನ್ನನಾಗ್ತಾನೆ.

ನವಿಲು ಗರಿಯನ್ನು ಕೃಷ್ಣನ ಮುಕುಟಕ್ಕೆ ಅವಶ್ಯವಾಗಿ ಇರಿಸಿ. ಕೃಷ್ಣನ ವಿಶೇಷ ಕೃಪೆ ನಿಮ್ಮ ಮೇಲೆ ಬೀಳಲಿದೆ.

ಹಳದಿ ಉಡುಪು ಕೃಷ್ಣನಿಗೆ ತುಂಬಾ ಇಷ್ಟ. ಹಾಗಾಗಿ ಪೂಜೆ ವೇಳೆ ಕೃಷ್ಣನಿಗೆ ಅವಶ್ಯವಾಗಿ ಹಳದಿ ಬಟ್ಟೆಯನ್ನು ಅರ್ಪಿಸಿ. ಇದ್ರಿಂದ ನಿಮ್ಮ ಬಯಕೆಗಳು ಈಡೇರಲಿವೆ. ನಿಮ್ಮ ದೇವರ ಮನೆಯಲ್ಲಿರುವ ಕೃಷ್ಣನಿಗೆ ಅಥವಾ ಕೃಷ್ಣಾಷ್ಠಮಿಯನ್ನು ಭಯ-ಭಕ್ತಿಯಿಂದ ಆಚರಿಸುವ ದೇವಸ್ಥಾನಕ್ಕೆ ಹೋಗಿ ಈ ವಸ್ತುಗಳನ್ನು ಅರ್ಪಿಸಿ.

ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿದ ಮೇಲೆ ಶ್ರೀಕೃಷ್ಣನ ಮೂರ್ತಿಯನ್ನು ಸ್ಪರ್ಶಿಸಿ.

ಶ್ರೀಕೃಷ್ಣನಿಗೆ ಅರ್ಪಿಸುವ ಪ್ರತಿಯೊಂದು ವಸ್ತುವಿಗೂ ಮೊದಲು ಗಂಗಾ ಜಲವನ್ನು ಹಾಕಿ.

ತುಳಸಿ ಮಾಲೆ, ಬೆಣ್ಣೆ ಮಿಠಾಯಿ, ಹಳದಿ ಹಣ್ಣು ಹಾಗೂ ಹಳದಿ ಬಟ್ಟೆಯನ್ನು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ನೀಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...