alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ವಿಳಂಬವಾಗ್ತಿದ್ದರೆ ಅಕ್ಷಯ ತೃತೀಯದಂದು ಈ ಉಪಾಯ ಮಾಡಿ

images-3

ಮದುವೆ ವಿಳಂಬವಾಗ್ತಿದ್ದರೆ ಅಥವ ಕೊನೆ ಹಂತಕ್ಕೆ ಬಂದು ಮದುವೆ ಮುರಿದು ಬೀಳ್ತಾ ಇದ್ದರೆ ಬರುವ ಅಕ್ಷಯ ತೃತೀಯದಂದು ಗ್ರಹಶಾಂತಿ ಮಾಡಿಸಿ. ಮದುವೆ ವಿಳಂಬಕ್ಕೆ ಗ್ರಹಗತಿಗಳು ಮುಖ್ಯ ಕಾರಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ, ಶನಿ ಹಾಗೂ ಗುರು ಮದುವೆ ವಿಳಂಬವಾಗಲು ಮುಖ್ಯ ಕಾರಣ. ಜಾತಕದ 7ನೇ ಸ್ಥಾನ ಜೀವನ ಸಂಗಾತಿಗೆ ಮೀಸಲಿರುತ್ತದೆ. ಒಂದು ವೇಳೆ ಈ ಜಾಗದಲ್ಲಿ ಗುರುವಿದ್ದರೆ 30 ವರ್ಷದವರೆಗೆ ಮದುವೆ ಭಾಗ್ಯವಿರುವುದಿಲ್ಲ. ಒಂದು ವೇಳೆ 30 ವರ್ಷಕ್ಕಿಂತ ಮೊದಲೇ ಈ ವ್ಯಕ್ತಿಗೆ ಮದುವೆಯಾದ್ರೆ ಮದುವೆ ಸಂಬಂಧ ಗಟ್ಟಿಯಾಗಿರುವುದಿಲ್ಲ.

ಜಾತಕದ ಮೊದಲ, ನಾಲ್ಕನೇಯ,  ಏಳನೇಯ ಹಾಗೂ ಹತ್ತನೇಯ ಸ್ಥಾನದಲ್ಲಿ ಮಂಗಳವಿದ್ದಲ್ಲಿ ಜಾತಕ ಮಂಗಳಕರವಾಗಿರುತ್ತದೆ. ಇಂತ ವ್ಯಕ್ತಿಗಳ ಮದುವೆ ಕೂಡ 30 ವರ್ಷದ ನಂತ್ರವೇ ಆಗುತ್ತೆ.

ಶನಿಯ ಕಾರಣಕ್ಕೂ ಮದುವೆ ತಡವಾಗುತ್ತದೆ. ಮೊದಲ, ನಾಲ್ಕನೇಯ, ಏಳನೇಯ ಹಾಗೂ ಹತ್ತನೇಯ ಮತ್ತು ಹನ್ನೆರಡನೇಯ ಸ್ಥಾನದಲ್ಲಿ ಶನಿ ಕುಳಿತಿದ್ದರೆ ಜಾತಕವನ್ನು ಶನಿಗ್ರಸ್ತವೆಂದು ಪರಿಗಣಿಸಲಾಗುತ್ತದೆ. ಇಂತ ವ್ಯಕ್ತಿಯ ವಿವಾಹದಲ್ಲಿ 35 ವರ್ಷದವರೆಗೆ ಅಡ್ಡಿಗಳು ಬರುತ್ತಿರುತ್ತವೆ.

ಅಕ್ಷಯ ತೃತೀಯ ದಿನದಂದು ಕೈನಲ್ಲಿ ತೆಂಗಿನ ಕಾಯಿಯನ್ನು ಹಿಡಿದು ನಿಮ್ಮ ಹೆಸರನ್ನು ಹೇಳಿ ಅಶ್ವತ್ಥ ಮರವನ್ನು 7 ಬಾರಿ ಪ್ರದಕ್ಷಿಣೆ ಹಾಕಿ ಮರದ ಕೆಳಗೆ ತೆಂಗಿನ ಕಾಯಿಯನ್ನಿಡಿ. ಇದ್ರಿಂದ ಮದುವೆಗೆ ಬಂದಿರುವ ಅಡೆತಡೆ ದೂರವಾಗುತ್ತದೆ.

ಈ ದಿನ ಶಿವ ದೇವಾಲಯಕ್ಕೆ ಮಣ್ಣಿನ ಮಡಿಕೆಯನ್ನು ದಾನವಾಗಿ ನೀಡಿ, ಶಿವ-ಪಾರ್ವತಿಯ ರುದ್ರಾಭಿಷೇಕ ಮಾಡಿ.

ಅಕ್ಷಯ ತೃತೀಯದಂದು ಮಂಗಳ, ಶನಿ, ಗುರುವಿನ ಪೂಜೆ ಆರಾಧನೆ ಮಾಡೋದನ್ನು ಮರೆಯಬೇಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...