alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ಎಲ್ಲಾ ವ್ಯವಹಾರಗಳನ್ನು ಸಮಾಧಾನವಾಗಿ ಮಾಡಿ. ಕುಟುಂಬ ಸದಸ್ಯರೊಂದಿಗೆ ವಾದ-ವಿವಾದ ಬೇಡ. ಮಾತು ಮತ್ತು ಕೋಪದ ಮೇಲೆ ನಿಯಂತ್ರಣವಿರಲಿ.

ವೃಷಭ ರಾಶಿ

ಇವತ್ತಿನ ದಿನ ನಿಮಗೆ ಶುಭ ಫಲವಿದೆ. ನಿಗದಿತ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಅಪೂರ್ಣ ಕಾರ್ಯಗಳನ್ನು ಪೂರ್ತಿ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ.

ಮಿಥುನ ರಾಶಿ

ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಖ್ಯಾತಿ ದೊರೆಯುತ್ತದೆ. ಸ್ತ್ರೀಯರಿಂದ ವಿಶೇಷ ಲಾಭವಿದೆ. ದಾಂಪತ್ಯ ಜೀವನದಲ್ಲಿ ಸುಖದ ಅನುಭವವಾಗಲಿದೆ. ಪಾಲುದಾರರಿಗೆ ಸಮಯ ಅನುಕೂಲಕರವಾಗಿದೆ.

ಕರ್ಕ ರಾಶಿ

ದಿನದ ಆರಂಭದಲ್ಲಿ ಸ್ಪೂರ್ತಿಯ ಅನುಭವವಾಗಲಿದೆ. ಭಾಗ್ಯವೃದ್ಧಿಯ ಅವಕಾಶಗಳು ಸಿಗುತ್ತವೆ. ಮಿತ್ರರು, ಸಂಬಂಧಿಕರು, ನೆರಹೊರೆಯವರೊಂದಿಗೆ ಸೌಹಾರ್ದಮಯ ಸಂಬಂಧವಿರುತ್ತದೆ.

ಸಿಂಹ ರಾಶಿ

ಕಾರ್ಯಸಫಲತೆ, ಆರ್ಥಿಕ ವೃದ್ಧಿ ಮತ್ತು ಭಾಗ್ಯವೃದ್ಧಿ ಯೋಗವಿದೆ. ಮಿತ್ರರು ಮತ್ತು ಒಡಹುಟ್ಟಿದವರಿಂದ ಲಾಭ ನಿರೀಕ್ಷಿಸಬಹುದು. ಆಧ್ಯಾತ್ಮಿಕ ಮತ್ತು ರಹಸ್ಯ ವಿದ್ಯೆ ಬಗ್ಗೆ ಆಸಕ್ತಿ ಮೂಡಲಿದೆ.

ಕನ್ಯಾ ರಾಶಿ

ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ಮಕ್ಕಳ ಬಗೆಗಿನ ಸಮಸ್ಯೆಯಿಂದ ಚಿಂತಿತರಾಗಲಿದ್ದೀರಿ. ಯಾತ್ರೆ ಅಥವಾ ಪ್ರವಾಸವನ್ನು ಮುಂದೂಡಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಯಶಸ್ಸು ಸಿಗುತ್ತದೆ.

ತುಲಾ ರಾಶಿ

ಇವತ್ತು ಸುಖವಾಗಿ ದಿನ ಕಳೆಯಲಿದ್ದೀರಿ. ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ. ಮನಸ್ಸು ಪ್ರಸನ್ನವಾಗಿರುತ್ತದೆ. ವ್ಯಾಪಾರ-ದಂಧೆಯಲ್ಲಿ ಲಾಭ ಪ್ರಾಪ್ತಿಯಾಗಲಿದೆ.

ವೃಶ್ಚಿಕ ರಾಶಿ

ಲೋಭ ಮತ್ತು ಅತಿಯಾಸೆಯಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಏಕಾಗ್ರತೆಯ ಕೊರತೆಯಾಗುತ್ತದೆ.

ಧನು ರಾಶಿ

ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡ್ರೆ ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವಾದ-ವಿವಾದದಲ್ಲಿ ತೊಡಗಿಕೊಳ್ಳಬೇಡಿ. ಅನಾವಶ್ಯಕ ಖರ್ಚಿಗೆ ಅಂಕುಶ ಹಾಕಿ. ಕೆಲಸದಲ್ಲಿ ಹೆಚ್ಚಿನ ಯಶಸ್ಸು ಸಿಗುವುದಿಲ್ಲ.

ಮಕರ ರಾಶಿ

ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಲಾಭ ಮತ್ತು ಯಶಸ್ಸು ಸಿಗುತ್ತದೆ. ಪಾಲುದಾರಿಕೆಗೆ ಸಮಯ ಅನುಕೂಲಕರವಾಗಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಕುಂಭ ರಾಶಿ

ತನು-ಮನದಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ. ಮನೆಯ ವಾತಾವರಣ ಕೂಡ ಕಲುಷಿತವಾಗಿರುತ್ತದೆ. ನಿದ್ರಾಹೀನತೆ ಮತ್ತು ಸಮಯಕ್ಕೆ ಸರಿಯಾಗಿ ಭೋಜನ ಸಿಗದೆ ತೊಂದರೆ ಅನುಭವಿಸಬೇಕಾಗಬಹುದು.

ಮೀನ ರಾಶಿ

ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಆಕಸ್ಮಿಕವಾಗಿ ಹಣ ಖರ್ಚಾಗಬಹುದು. ಉಳಿದ ಕೆಲಸಗಳಲ್ಲೂ ವಿಘ್ನಗಳು ಎದುರಾಗಬಹುದು. ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...