alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ದಿನವಿಡೀ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಮಾನಸಿಕ ಮತ್ತು ಶಾರೀರಿಕವಾಗಿ ಅಸ್ವಸ್ಥತೆಯ ಅನುಭವವಾಗಲಿದೆ. ವ್ಯರ್ಥ ಖರ್ಚಿನ ಪ್ರಮಾಣ ಅಧಿಕವಾಗಲಿದೆ.

ವೃಷಭ ರಾಶಿ

ಇವತ್ತಿನ ದಿನವನ್ನು ಸಂತೋಷವಾಗಿ ಕಳೆಯಲಿದ್ದೀರಿ. ಲಕ್ಷ್ಮಿಯ ಕೃಪೆಯಿಂದ ವ್ಯಾಪಾರದಲ್ಲಿ ಆದಾಯ ವೃದ್ಧಿಯಾಗಲಿದೆ. ಮನೆಯಲ್ಲಿ ಮೋಜು-ಮಸ್ತಿ ವಾತಾವರಣವಿರುತ್ತದೆ.

ಮಿಥುನ ರಾಶಿ

ದಿನವಿಡೀ ದೈಹಿಕ ಮತ್ತು ಮಾನಸಿಕವಾಗಿ ಪ್ರಸನ್ನರಾಗಿರುತ್ತೀರಾ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ಇದರಿಂದ ಕೆಲಸದಲ್ಲಿ ಉತ್ಸಾಹವೂ ಹೆಚ್ಚಲಿದೆ.

ಕರ್ಕ ರಾಶಿ

ಇವತ್ತು ಭಾಗ್ಯವೃದ್ಧಿ ಯೋಗವಿದೆ. ವಿದೇಶದಿಂದ ಶುಭ ಸಮಾಚಾರ ಬರಲಿದೆ. ಧಾರ್ಮಿಕ ಯಾತ್ರೆಗಳನ್ನು ಕೈಗೊಳ್ಳುವುದು ಒಳಿತು. ಅದರಿಂದ ಮನಸ್ಸು ಪ್ರಸನ್ನವಾಗಲಿದೆ.

ಸಿಂಹ ರಾಶಿ

ಆರೋಗ್ಯದ ಕಡೆಗೆ ಇಂದು ಹೆಚ್ಚಿನ ಗಮನ ಹರಿಸಿ. ಆರೋಗ್ಯಕ್ಕಾಗಿ ಹಣ ಖರ್ಚುಮಾಡಬೇಕಾಗಿ ಬರುತ್ತದೆ. ಮನೆಯಲ್ಲೇ ಊಟ ತಿಂಡಿ ಮಾಡುವುದು ಒಳಿತು.

ಕನ್ಯಾ ರಾಶಿ

ಇವತ್ತು ನಿಮಗೆ ಶುಭ ದಿನ. ಯಶಸ್ಸು ಮತ್ತು ಕೀರ್ತಿ ಪ್ರಾಪ್ತಿಯಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಪಾಲುದಾರಿಕೆ ಮತ್ತು ಸಂಬಂಧಗಳಲ್ಲಿ ನಕಾರಾತ್ಮಕತೆ ಹೆಚ್ಚಾಗುವ ಸಾಧ್ಯತೆ ಇದೆ.

ತುಲಾ ರಾಶಿ

ಇವತ್ತು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ವೃಶ್ಚಿಕ ರಾಶಿ

ಇವತ್ತು ಯಾವುದೇ ರೀತಿಯ ವಾದ-ವಿವಾದದಲ್ಲಿ ತೊಡಗಿಕೊಳ್ಳಬೇಡಿ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ. ಓದಿನಲ್ಲಿ ಯಶಸ್ಸು ದೊರೆಯುತ್ತದೆ. ಉತ್ಸಾಹ ವೃದ್ಧಿಸಲಿದೆ.

ಧನು ರಾಶಿ

ಇವತ್ತು ಉತ್ಸಾಹದ ಕೊರತೆ ಕಾಡುತ್ತದೆ. ಇದರಿಂದ ಮನಸ್ಸು ಅಂಶಾಂತಿಯಿಂದಿರುತ್ತದೆ. ಮನೆಯಲ್ಲಿ ಕ್ಲೇಶದ ವಾತಾವರಣವಿರುತ್ತದೆ. ಧನಹಾನಿ ಆಗುವ ಸಾಧ್ಯತೆ ಇದೆ.

ಮಕರ ರಾಶಿ

ಮಿತ್ರರು ಮತ್ತು ಸಂಬಂಧಿಕರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿದೆ.

ಕುಂಭ ರಾಶಿ

ಮನಸ್ಸಿನ ಗೊಂದಲದಿಂದಾಗಿ ಯಾವುದೇ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅನಾವಶ್ಯಕ ಖರ್ಚಿನಿಂದ ದೂರವಿರಿ. ಮಾತಿನ ಮೇಲೆ ಸಂಯಮವಿರಲಿ.

ಮೀನ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯಲ್ಲೂ ಉತ್ಸಾಹಪೂರ್ಣ ವಾತಾವರಣ ಇರುತ್ತದೆ. ಹೊಸ ಕಾರ್ಯ ಆರಂಭಿಸಲು ಪ್ರೇರಣೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...