alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಕುಟುಂಬಸ್ಥರೊಂದಿಗೆ ತೀವ್ರ ವಾದ-ವಿವಾದ ನಡೆಯುವ ಸಾಧ್ಯತೆ ಇದೆ. ಮನಸ್ಸಿಗೆ ವ್ಯಗ್ರತೆಯ ಅನುಭವವಾಗಲಿದೆ. ನಿರರ್ಥಕ ಖರ್ಚು ಹೆಚ್ಚಾಗಲಿದೆ. ಮನಸ್ಸು ಚಿಂತೆಯ ಗೂಡಾಗುತ್ತದೆ.

ವೃಷಭ ರಾಶಿ

ಇಂದು ನಿಮಗೆ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗುತ್ತದೆ. ಪ್ರತಿಸ್ಪರ್ಧಿಗಳೆದುರು ಜಯ ನಿಮ್ಮದೇ. ಸಮಾಜದಲ್ಲಿ ಗೌರವ ದೊರೆಯುತ್ತದೆ. ಮಧ್ಯಾಹ್ನದ ನಂತರ ಜಗಳದ ವಾತಾವರಣ ಏರ್ಪಡುವ ಸಾಧ್ಯತೆ ಇದೆ.

ಮಿಥುನ ರಾಶಿ

ಇಂದು ಬೆಳಗ್ಗೆಯಿಂದ್ಲೇ ಮನಸ್ಸಿನಲ್ಲಿ ಕೋಪ ಆವರಿಸಿರುತ್ತದೆ. ವ್ಯರ್ಥವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶ ದೊರೆಯುತ್ತದೆ.

ಕರ್ಕ ರಾಶಿ

ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಅಧಿಕ ಸಂವೇದನಾಶೀಲತೆ ಇರುತ್ತದೆ. ಶಾರೀರಿಕ ಮತ್ತು ಮಾನಸಿಕ ಸುಖ ಲಭ್ಯವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ.

ಸಿಂಹ ರಾಶಿ

ಇಂದು ಮಾತಿನ ಮೇಲೆ ಸಂಯಮ ಇರಲಿ. ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಮನಸ್ಸಿನ ಭ್ರಾಂತಿಗೆ ತಿಲಾಂಜಲಿ ನೀಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ ರಾಶಿ

ನಿಮಗೆ ವಿಭಿನ್ನ ಕ್ಷೇತ್ರಗಳಿಂದ ಲಾಭ ದೊರೆಯುತ್ತದೆ. ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ಸಿಗಲಿದೆ. ಮಿತ್ರರಿಗಾಗಿ ಹಣ ಖರ್ಚು ಮಾಡಬೇಕಾಗಿ ಬರುತ್ತದೆ. ಅದರಿಂದ ನಿಮಗೆ ಲಾಭವಾಗುತ್ತದೆ.

ತುಲಾ ರಾಶಿ

ಇವತ್ತು ನಿಮಗೆ ಅತ್ಯಂತ ಶುಭದಿನ. ಧಾರ್ಮಿಕ ಕಾರ್ಯಗಳ ಬಗ್ಗೆ ಆಸಕ್ತಿ ಮೂಡಲಿದೆ. ವಿವಿಧ ಕ್ಷೇತ್ರಗಳಲ್ಲಿ ಲಾಭ ಸಿಗುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ದೊರೆಯುತ್ತದೆ.

ವೃಶ್ಚಿಕ ರಾಶಿ

ಇವತ್ತು ನಿಮಗೆ ಶುಭದಿನ. ಧಾರ್ಮಿಕ ಯಾತ್ರೆಯಿಂದ ಲಾಭವಾಗಲಿದೆ. ವಿವಿಧ ಕ್ಷೇತ್ರಗಳಲ್ಲೂ ಲಾಭದ ಸಾಧ್ಯತೆ ಇದೆ. ವಿದೇಶ ಪ್ರವಾಸದ ಯೋಗವೂ ಇದೆ.

ಧನು ರಾಶಿ

ಇಂದು ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಹತಾಶೆಯ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಕೋಪವನ್ನು ನಿಯಂತ್ರಿಸಿಕೊಳ್ಳಿ. ಕುಟುಂಬದವರೊಂದಿಗೆ ವಾದ-ವಿವಾದ ಬೇಡ.

ಮಕರ ರಾಶಿ

ಇಂದು ಮಿತ್ರರು ಮತ್ತು ಸಂಬಂಧಿಕರೊಂದಿಗೆ ಸಂತೋಷವಾಗಿ ಕಾಲ ಕಳೆಯಲಿದ್ದೀರಿ. ಪಾಲುದಾರಿಕೆಯಿಂದ ಲಾಭವಿದೆ. ವ್ಯಾಪಾರ ಕ್ಷೇತ್ರದಲ್ಲೂ ನಿಮಗೆ ಯಶಸ್ಸು ಸಿಗುತ್ತದೆ.

ಕುಂಭ ರಾಶಿ

ಇವತ್ತು ನಿಮಗೆ ಅತ್ಯಂತ ಶುಭ ದಿನ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಾ. ದಿನವಿಡೀ ನೀವು ಮನರಂಜನೆಯಲ್ಲಿ ತೊಡಗಿಕೊಳ್ಳುತ್ತೀರಿ.

ಮೀನ ರಾಶಿ

ಅಶಾಂತಿ ಮತ್ತು ಉದ್ವೇಗ ನಿಮ್ಮ ಮನಸ್ಸನ್ನು ಆವರಿಸಿರುತ್ತದೆ. ಆಕಸ್ಮಿಕವಾಗಿ ಹಣ ಖರ್ಚಾಗಬಹುದು. ಶಾರೀರಿಕ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಮನೆಯಲ್ಲಿ ಖುಷಿ ಮತ್ತು ನೆಮ್ಮದಿ ತುಂಬಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...