alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ನಿಮ್ಮ ಯೋಜನೆಗಳಿಗೆ ಸರ್ಕಾರದ ನೆರವು ಸಿಗಲಿದೆ. ಕಚೇರಿಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೀರಿ. ಕೆಲಸದ ನಿಮಿತ್ತ  ಪ್ರಯಾಣ ಮಾಡಬೇಕಾಗುತ್ತದೆ.

ವೃಷಭ ರಾಶಿ

ವಿದೇಶಕ್ಕೆ ತೆರಳುವ ಅವಕಾಶ ದೊರೆಯಲಿದೆ. ವಿದೇಶದಲ್ಲಿ ನೆಲೆಸಿರುವ ಮಿತ್ರರಿಂದ ಶುಭ ಸಮಾಚಾರ ಸಿಗುತ್ತದೆ. ವ್ಯಾಪಾರದಲ್ಲಿ ಲಾಭವಿದೆ. ಹೊಸ ಯೋಜನೆ ಕೈಗೆತ್ತಿಕೊಳ್ಳಲಿದ್ದೀರಿ.

ಮಿಥುನ ರಾಶಿ

ಖರ್ಚು ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಮತ್ತು ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ಭಿನ್ನಾಭಿಪ್ರಾಯ ಮೂಡಬಹುದು. ಇದರಿಂದ ಮನಸ್ಸು ಖಿನ್ನವಾಗುತ್ತದೆ.

ಕರ್ಕ ರಾಶಿ

ಇವತ್ತು ಸಾಮಾಜಿಕ ಮತ್ತು ವ್ಯಾವಹಾರಿಕ ಕ್ಷೇತ್ರದಲ್ಲಿ ಲಾಭವಾಗಲಿದೆ. ಮೋಜು ಮಸ್ತಿಗೆ ಅವಕಾಶ ಸಿಗಲಿದೆ. ಉತ್ತಮ ವಸ್ತ್ರಾಭರಣ ಹಾಗೂ ವಾಹನ ಖರೀದಿ ಯೋಗವಿದೆ.

ಸಿಂಹ ರಾಶಿ

ನಿಮ್ಮಲ್ಲಿ ಉದಾಸೀನತೆ ಮತ್ತು ಸಂದೇಹ ಪ್ರವೃತ್ತಿ ಹೆಚ್ಚಾಗಿರುತ್ತದೆ. ಆದ್ರೂ ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ. ದೈನಂದಿನ ಕೆಲಸಗಳಲ್ಲಿ ವಿಘ್ನಗಳು ಎದರಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಇವತ್ತು ಒಂದಿಲ್ಲೊಂದು ಕಾರಣಕ್ಕೆ ಮನಸ್ಸು ಚಿಂತಿತವಾಗಿರುತ್ತದೆ. ಮಕ್ಕಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಲಿವೆ. ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತೊಡಕುಂಟಾಗುತ್ತದೆ.

ತುಲಾ ರಾಶಿ

ಇಂದು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗಲಿದ್ದೀರಿ. ಇದರಿಂದ ಮಾನಸಿಕ ಅಸ್ವಸ್ಥತೆ ಕಾಡಬಹುದು. ತಾಯಿ ಜೊತೆಗೆ ಸಂಬಂಧ ಹದಗೆಡಬಹುದು. ತಾಯಿಯ ಆರೋಗ್ಯದ ಬಗೆಗೂ ಆತಂಕ ಉಂಟಾಗಲಿದೆ.

ವೃಶ್ಚಿಕ ರಾಶಿ

ಕಾರ್ಯ ಸಫಲತೆ, ಆರ್ಥಿಕ ವೃದ್ಧಿಗೆ ಉತ್ತಮ ದಿನ. ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ಒಡಹುಟ್ಟಿದವರ ವ್ಯವಹಾರ ಇಂದು ಹೆಚ್ಚು ಸಹಯೋಗಪೂರ್ಣವಾಗಿರುತ್ತದೆ. ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ಸಿಗಲಿದೆ.

ಧನು ರಾಶಿ

ಗೊಂದಲದ ಮನಸ್ಥಿತಿ ಮತ್ತು ಹದಗೆಟ್ಟ ಮನೆಯ ವಾತಾವರಣದಿಂದ ನೀವು ತೊಂದರೆ ಅನುಭವಿಸಲಿದ್ದೀರಿ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ. ಕೆಲಸ ಪೂರ್ಣಗೊಳ್ಳುವುದು ವಿಳಂಬವಾಗುತ್ತದೆ. ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ.

ಮಕರ ರಾಶಿ

ದಿನದ ಆರಂಭ ಶುಭಕರವಾಗಿದೆ. ಧಾರ್ಮಿಕ ಕಾರ್ಯ ಮತ್ತು ಪೂಜೆಗಳನ್ನು ನೆರವೇರಿಸುತ್ತೀರಿ. ಗೃಹಸ್ಥ ಜೀವನದಲ್ಲಿ ಆನಂದಮಯ ವಾತಾವರಣವಿರುತ್ತದೆ. ನಿಮ್ಮ ಪ್ರತಿ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ.

ಕುಂಭ ರಾಶಿ

ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ. ಕುಟುಂಬದವರೊಂದಿಗೆ ಸಂಘರ್ಷದಲ್ಲಿ ತೊಡಗಬೇಡಿ. ತಪ್ಪು ಗ್ರಹಿಕೆಯಿಂದ ಜಗಳ ಏರ್ಪಡಬಹುದು. ಕೋಪವನ್ನು ನಿಯಂತ್ರಿಸಿಕೊಳ್ಳಿ.

ಮೀನ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಆದಾಯ ವೃದ್ಧಿಸಲಿದೆ. ಹಿರಿಯರು ಮತ್ತು ಮಿತ್ರರಿಂದ ಲಾಭ ದೊರೆಯುತ್ತದೆ. ಹೊಸ ಸ್ನೇಹಿತರನ್ನು ಸಂಪಾದಿಸಿಕೊಳ್ಳಲಿದ್ದೀರಿ. ಅವರಿಂದ ಭವಿಷ್ಯದಲ್ಲಿ ಲಾಭವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...