alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ವಿಚಾರಗಳಲ್ಲಿ ಸ್ಥಿರತೆ ಇರುವುದಿಲ್ಲ, ಇದರಿಂದ ದೃಢ ನಿರ್ಧಾರ ತೆಗೆದುಕೊಳ್ಳುವುದು ಕಠಿಣವಾಗಬಹುದು. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಸ್ತ್ರೀಯರು ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು.

ವೃಷಭ ರಾಶಿ

ಮನಸ್ಸು ವಿಚಲಿತವಾಗಿರುತ್ತದೆ. ಇಂದು ಹೊಸ ಕಾರ್ಯ ಆರಂಭಿಸುವುದು ಉಚಿತವಲ್ಲ. ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಆರ್ಥಿಕ ಲಾಭವಿದೆ. ವಿದ್ಯಾರ್ಥಿಗಳಿಗೆ ಶುಭ ಸಮಯ.

ಮಿಥುನ ರಾಶಿ

ಇವತ್ತು ಸ್ಪೂರ್ತಿಯ ಅನುಭವವಾಗಲಿದೆ. ಉತ್ತಮ ಭೋಜನ, ವಸ್ತ್ರಾಲಂಕಾರ, ಸಂಬಂಧಿಕರ ಭೇಟಿಯಿಂದ ಆನಂದವಾಗಿ ದಿನ ಕಳೆಯಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಕರ್ಕ ರಾಶಿ

ಕುಟುಂಬದಲ್ಲಿ ಜಗಳದ ವಾತಾವರಣವಿರುತ್ತದೆ. ಮನಸ್ಸು ಗೊಂದಲದ ಗೂಡಾಗಲಿದೆ. ಮಹತ್ವದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ವಾದ-ವಿವಾದಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ಸಿಂಹ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಅವಕಾಶ ಕೈತಪ್ಪಿ ಹೋಗುವ ಸಾಧ್ಯತೆಯೂ ಇದೆ. ಸ್ತ್ರೀ ಮಿತ್ರರ ಭೇಟಿಯಿಂದ ಲಾಭವಿದೆ. ಹಿರಿಯರ ಆಶೀರ್ವಾದ ದೊರೆಯಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರಲಿವೆ.

ಕನ್ಯಾ ರಾಶಿ

ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ತಂದೆಯೊಂದಿಗೆ ಆತ್ಮೀಯತೆ ಹೆಚ್ಚಲಿದೆ. ಹಣ, ಗೌರವ ವೃದ್ಧಿಯಾಗಲಿದೆ. ಸರ್ಕಾರದಿಂದ ಲಾಭ ದೊರೆಯಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ

ಹೊಸ ಕಾರ್ಯ ಆರಂಭಿಸಲಿದ್ದೀರಿ. ದೂರ ಪ್ರಯಾಣ ಅಥವಾ ತೀರ್ಥಯಾತ್ರೆ ಕೈಗೊಳ್ಳೋ ಸಾಧ್ಯತೆ ಇದೆ. ವಿದೇಶ ಪ್ರಯಾಣದ ಅವಕಾಶ ಸಿಗಬಹುದು. ಮಕ್ಕಳ ವಿಷಯಕ್ಕೆ ಚಿಂತಿತರಾಗುತ್ತೀರಿ.

ವೃಶ್ಚಿಕ ರಾಶಿ

ಮಾತು ಮತ್ತು ವ್ಯವಹಾರದ ಮೇಲೆ ಸಂಯಮವಿರಲಿ. ದೈನಿಕ ಕಾರ್ಯಗಳನ್ನು ಹೊರತುಪಡಿಸಿ ಹೊಸ ಕೆಲಸ ಕೈಗೆತ್ತಿಕೊಳ್ಳಬೇಡಿ. ಅನಾರೋಗ್ಯ ಕಾಡಬಹುದು, ಹಾಗಾಗಿ ಊಟ ತಿಂಡಿ ಬಗ್ಗೆ ಹೆಚ್ಚಿನ ಗಮನವಿಡಿ.

ಧನು ರಾಶಿ

ಇಂದು ಪಾರ್ಟಿ ಮತ್ತು ಪಿಕ್ನಿಕ್ ಅಂತಾ ಸಮಯ ಕಳೆಯಲಿದ್ದೀರಿ. ಮನರಂಜನೆಯ ಜಗತ್ತಿನಲ್ಲಿ ವಿಹರಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಸುಖ ಪ್ರಾಪ್ತಿಯಾಗಲಿದೆ. ಸಾರ್ವಜನಿಕ ಗೌರವ ಮತ್ತು ಪ್ರತಿಷ್ಠೆ ದೊರೆಯುತ್ತದೆ.

ಮಕರ ರಾಶಿ

ಆರ್ಥಿಕ ಯೋಜನೆಗಳಿಗೆ ಇಂದು ಅನುಕೂಲಕರ ದಿನ. ಹಣಕಾಸಿನ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ವಿರೋಧಿಗಳ ಷಡ್ಯಂತ್ರ ಅಸಫಲವಾಗಲಿದೆ.

ಕುಂಭ ರಾಶಿ

ಮನಸ್ಸು ಅಶಾಂತಿಯಿಂದಿರುತ್ತದೆ. ಅನಿರ್ಣಾಯಕ ಸ್ಥಿತಿ ನಿರ್ಮಾಣವಾಗುತ್ತದೆ. ಉದರ ಸಮಸ್ಯೆ ಉಂಟಾಗಬಹುದು. ಕಾರ್ಯದಲ್ಲಿ ಅಸಫಲತೆಯಿಂದ ನಿರಾಶರಾಗುತ್ತೀರಿ. ಆಕಸ್ಮಿಕ ಧನಹಾನಿ ಇದೆ.

ಮೀನ ರಾಶಿ

ಇಂದು ಅತ್ಯಂತ ಸಮಾಧಾನವಾಗಿರಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಮಾನಸಿಕ ಉದ್ವೇಗ ಹೆಚ್ಚಾಗಿರುತ್ತದೆ. ಧನ ಮತ್ತು ಮಾನಹಾನಿಯ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸಮಸ್ಯೆ ಎದುರಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...