alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಮೆಚ್ಚುಗೆ ಗಳಿಸಲಿದ್ದೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಕೆಲಸದ ಒತ್ತಡ ಮತ್ತು ಚಿಂತೆಯಿಂದ ಬಿಡುಗಡೆ ಸಿಗಲಿದೆ.

ವೃಷಭ ರಾಶಿ

ಅನಾರೋಗ್ಯ ಪೀಡಿತರು ಕೊಂಚ ಚೇತರಿಸಿಕೊಳ್ಳಲಿದ್ದಾರೆ. ವ್ಯಾಪಾರವನ್ನು ವಿಸ್ತರಿಸಬಹುದು. ಆರ್ಥಿಕ ಲಾಭವಾಗಲಿದೆ, ಗೌರವ ಪ್ರತಿಷ್ಠೆ ಸಹ ಹೆಚ್ಚಲಿದೆ.

ಮಿಥುನ ರಾಶಿ

ಹೊಸ ಕಾರ್ಯ ಆರಂಭಿಸಲು ಅನುಕೂಲಕರ ದಿನ. ಚಿಂತೆಯ ಭಾರ ಇಳಿಯಲಿದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಕರ್ಕ ರಾಶಿ

ಇಂದು ಆನಂದ ಮತ್ತು ಸ್ಪೂರ್ತಿಯ ಅನುಭವವಾಗಲಿದೆ. ಇಂದು ನಿಮಗೆ ಮಿಶ್ರ ಫಲವಿದೆ. ಆಯಾಸ ಮತ್ತು ಆಲಸ್ಯ ಕೂಡ ಮಧ್ಯಾಹ್ನದ ನಂತರ ಕಾಣಿಸಿಕೊಳ್ಳಬಹುದು. ವ್ಯವಹಾರದಲ್ಲಿ ಅಡ್ಡಿಯಾಗಲಿದೆ.

ಸಿಂಹ ರಾಶಿ

ಮನಸ್ಸು ಅತ್ಯಂತ ಪ್ರಸನ್ನವಾಗಿರುತ್ತದೆ. ಕುಟುಂಬಸ್ಥರೊಂದಿಗೆ ಜಗಳವಾಗದಂತೆ ಎಚ್ಚರ ವಹಿಸಿ. ದೈಹಿಕ ಶ್ರಮ ಹೆಚ್ಚಾಗಲಿದೆ. ಆಕಸ್ಮಿಕ ಧನ ಲಾಭದ ಯೋಗವೂ ಇದೆ.

ಕನ್ಯಾ ರಾಶಿ

ವಿದೇಶದಲ್ಲಿ ನೆಲೆಸಿರುವ ಸ್ನೇಹಿತರಿಂದ ಶುಭ ಸಮಾಚಾರ ಬರಲಿದೆ. ಮೋಜು-ಮಸ್ತಿಗಾಗಿ ಹಣ ಖರ್ಚಾಗಲಿದೆ. ಕೋರ್ಟ್-ಕಚೇರಿ ವ್ಯವಹಾರದಲ್ಲಿ ಅತ್ಯಂತ ಎಚ್ಚರಿಕೆಯಿಂದಿರಿ.

ತುಲಾ ರಾಶಿ

ಇಂದು ನಿಮ್ಮ ರಚನಾತ್ಮಕ ಶಕ್ತಿ ಪ್ರಕಟವಾಗಲಿದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸೃಜನಾತ್ಮಕ ಶಕ್ತಿಯನ್ನು ಪ್ರದರ್ಶಿಸಬೇಕಾಗುತ್ತದೆ.

ವೃಶ್ಚಿಕ ರಾಶಿ

ಇಂದು ಮೋಜು-ಮಸ್ತಿ ಮತ್ತು ಮನರಂಜನೆಗಾಗಿ ಹಣ ಖರ್ಚಾಗಲಿದೆ. ತನು-ಮನದ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ವ್ಯಾಪಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ವಿವಿಧ ರೀತಿಯ ಲಾಭವಾಗಲಿದೆ.

ಧನು ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ತುಂಬಿರುತ್ತದೆ. ಉದ್ಯೋಗಿಗಳಿಗೆ ಶುಭ ದಿನ. ಹೊಸ ಕಾರ್ಯವನ್ನು ಯಶಸ್ವಿಯಾಗಿ ಆಯೋಜಿಸಲಿದ್ದೀರಿ.

ಮಕರ ರಾಶಿ

ಹಣ, ಗೌರವ ಮತ್ತು ಪ್ರತಿಷ್ಠೆ ವೃದ್ಧಿಸಲಿದೆ. ವ್ಯಾಪಾರಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾಗುತ್ತದೆ. ಯಾವುದೇ ಹೊಸ ಕಾರ್ಯ ಆರಂಭಿಸಲು ದಿನ ಅನುಕೂಲಕರವಾಗಿಲ್ಲ.

ಕುಂಭ ರಾಶಿ

ಶಾರೀರಿಕ ಅಸ್ವಸ್ಥತೆ ಕಾಡಲಿದೆ. ಇಂದು ಕೆಲಸ ಮಾಡುವ ಉತ್ಸಾಹ ನಿಮ್ಮಲ್ಲಿ ಕಡಿಮೆ ಇರುತ್ತದೆ. ಹಿರಿಯ ಅಧಿಕಾರಿಗಳ ಜೊತೆ ಎಚ್ಚರಿಕೆಯಿಂದ ವ್ಯವಹರಿಸಿ. ಅಧಿಕ ಹಣ ಖರ್ಚಾಗಲಿದೆ.

ಮೀನ ರಾಶಿ

ಆಕಸ್ಮಿಕವಾಗಿ ಧನ ಲಾಭವಾಗಬಹುದು. ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ರೀತಿಯ ಜಗಳ ಮತ್ತು ಚರ್ಚೆಯಿಂದ ದೂರವಿರಿ. ಆಕಸ್ಮಿಕವಾಗಿ ಹಣ ಖರ್ಚಾಗಬಹುದು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...