alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಮನಸ್ಸು ಅಸ್ಥಿರಗೊಳ್ಳಲಿದೆ. ಇದರಿಂದಾಗಿ ನಿಮ್ಮನ್ನು ಗೊಂದಲ ಕಾಡಬಹುದು. ಉದ್ಯೋಗ ಮತ್ತು ಉದ್ಯಮದಲ್ಲಿ ಸ್ಪರ್ಧಾತ್ಮಕ ವಾತಾವರಣ ಇರುತ್ತದೆ.

ವೃಷಭ ರಾಶಿ

ಕೈಗೆ ಬಂದ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಲೇಖಕರು ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶ ದೊರೆಯಲಿದೆ. ನಿಮ್ಮ ವಾಕ್ ಚಾತುರ್ಯ ಪ್ರಯೋಜನಕ್ಕೆ ಬರಲಿದೆ.

ಮಿಥುನ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಮುಂಜಾನೆಯಿಂದಲೂ ಉತ್ಸಾಹದ ಅನುಭವವಾಗಲಿದೆ. ಮಿತ್ರರು ಮತ್ತು ಸಂಬಂಧಿಕರೊಂದಿಗೆ ಸೇರಿ ಉತ್ತಮ ಭೋಜನ ಸವಿಯಲಿದ್ದೀರಿ.

ಕರ್ಕ ರಾಶಿ

ಶರೀರ ಮತ್ತು ಮನಸ್ಸಿಗೆ ಆತಂಕದ ಅನುಭವವಾಗಲಿದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ತಾಯಿಯ ಅನಾರೋಗ್ಯ ನಿಮ್ಮನ್ನು ಚಿಂತೆಗೀಡು ಮಾಡಬಹುದು.

ಸಿಂಹ ರಾಶಿ

ಇಂದು ನಿಮಗೆ ವಿವಿಧ ರೀತಿಯ ಲಾಭವಾಗುವ ಸಾಧ್ಯತೆ ಇದೆ. ಆದ್ರೆ ಅಜಾಗರೂಕತೆಯಿಂದ ಅದನ್ನು ಕಳೆದುಕೊಳ್ಳಬೇಡಿ. ಮಿತ್ರರು, ಸ್ತ್ರೀಯರು ಮತ್ತು ಹಿರಿಯರಿಂದ ಲಾಭವಿದೆ.

ಕನ್ಯಾ ರಾಶಿ

ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಇಂದು ಸಮಯ ಅನುಕೂಲಕರವಾಗಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ಪದೋನ್ನತಿ ದೊರೆಯುವ ಸಾಧ್ಯತೆ ಇದೆ.

ತುಲಾ ರಾಶಿ

ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಮಕ್ಕಳು ಮತ್ತು ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಸಹಕಾರ ಸಿಗುವುದಿಲ್ಲ.

ವೃಶ್ಚಿಕ ರಾಶಿ

ಇಂದು ಯಾವುದೇ ಏರುಪೇರಿಲ್ಲದೆ ಸಮಾಧಾನಕರವಾಗಿ ದಿನ ಕಳೆಯಲಿದ್ದೀರಿ. ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ. ಕೋಪ ನಿಯಂತ್ರಿಸಿಕೊಳ್ಳಿ.

ಧನು ರಾಶಿ

ಬೌದ್ಧಿಕ, ತಾರ್ಕಿಕ ವಿಚಾರ ವಿನಿಮಯ, ಬರವಣಿಗೆಗೆ ಉತ್ತಮ ದಿನ. ಮನರಂಜನೆಯ ಕೊರತೆಯಾಗುವುದಿಲ್ಲ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಸಂಗಾತಿಯೊಡನೆ ಸಂಬಂಧ ಬೆಸೆಯಲಿದೆ.

ಮಕರ ರಾಶಿ

ವ್ಯಾಪಾರ  ವಹಿವಾಟಿನಲ್ಲಿ ಪ್ರಗತಿಯಾಗಲಿದೆ. ಆರ್ಥಿಕವಾಗಿ ಲಾಭದಾಯಕ ದಿನ. ಕೊಡು ಕೊಳ್ಳುವಿಕೆ ವ್ಯವಹಾರ ಸರಳವಾಗಿರುತ್ತದೆ. ಮನೆಯಲ್ಲಿ ಶಾಂತ ವಾತಾವರಣವಿರಲಿದೆ.

ಕುಂಭ ರಾಶಿ

ಮಕ್ಕಳು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಚಿಂತಿತರಾಗಲಿದ್ದೀರಿ. ಹೊಟ್ಟೆ ನೋವಿನಿಂದ ಬಳಲುವ ಸಾಧ್ಯತೆ ಇದೆ. ವಿಚಾರಗಳಲ್ಲಿ ಶೀಘ್ರ ಬದಲಾವಣೆ ಆಗಲಿದೆ. ಹೊಸ ಕಾರ್ಯವನ್ನು ಆರಂಭಿಸಬೇಡಿ.

ಮೀನ ರಾಶಿ

ಮನಸ್ಸಿನಲ್ಲಿ ಭಯ ಆವರಿಸಲಿದೆ. ಕುಟುಂಬಸ್ಥರೊಂದಿಗೆ ವಾದ-ವಿವಾದದಲ್ಲಿ ತೊಡಗಲಿದ್ದೀರಿ. ತಾಯಿಯ ಆರೋಗ್ಯ ಏರುಪೇರಾಗಬಹುದು. ಅನಿಶ್ಚಿತ ಘಟನೆಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...