alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಉಗ್ರ ಮನಸ್ಥಿತಿ ಹಾಗೂ ಆಕ್ರಮಣಕಾರಿ ಮಾತುಗಾರಿಕೆ ನಿಮ್ಮಲ್ಲಿರುತ್ತದೆ. ಅದನ್ನು ನಿಯಂತ್ರಿಸಿಕೊಳ್ಳಿ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ.

ವೃಷಭ ರಾಶಿ

ಮನಸ್ಸಿನಲ್ಲಿ ಹತಾಶೆಯ ಭಾವನೆ ತುಂಬಿರುತ್ತದೆ, ಇದರಿಂದ ಖಿನ್ನತೆ ಆವರಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಕಲಹ, ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಅಹಂನಿಂದ ಇತರರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಿ.

ಮಿಥುನ ರಾಶಿ

ಇಂದು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಪ್ರತಿ ಕಾರ್ಯವನ್ನೂ ದೃಢ ನಿಶ್ಚಯದಿಂದ ಮಾಡಲಿದ್ದೀರಿ. ಆದ್ರೆ ಕೋಪ ಹೆಚ್ಚಾಗಿರುತ್ತದೆ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಪ್ರಯತ್ನಿಸಿ.

ಕರ್ಕ ರಾಶಿ

ಇಂದು ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತವೆ. ಗೃಹಸ್ಥ ಜೀವನ ಆನಂದಮಯವಾಗಿರುತ್ತದೆ. ನೌಕರಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಹಿರಿಯ ಅಧಿಕಾರಿಗಳಿಂದ ಲಾಭವಿದೆ.

ಸಿಂಹ ರಾಶಿ

ನಿಗದಿತ ಕೆಲಸಗಳು ಕೊಂಚ ವಿಳಂಬವಾಗಿ ಪೂರ್ಣಗೊಳ್ಳುತ್ತವೆ. ಆರ್ಥಿಕ ಯೋಜನೆ ಯಶಸ್ವಿಯಾಗಲಿದೆ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ಮಿಶ್ರಫಲವಿದೆ.

ಕನ್ಯಾ ರಾಶಿ

ಇಂದು ನಿಮಗೆ ಶುಭ ದಿನ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಉತ್ತಮವಾಗಿರುತ್ತದೆ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.

ತುಲಾ ರಾಶಿ

ಇದು ಅಧಿಕ ಚಿಂತೆ ಮತ್ತು ಭಾವುಕತೆಯಿಂದಾಗಿ ಮನಸ್ಸು ವ್ಯಗ್ರವಾಗಿರುತ್ತದೆ. ಅಸ್ವಸ್ಥತೆಯ ಅನುಭವವಾಗಲಿದೆ. ವಾದ-ವಿವಾದಗಳಿಂದ ದೂರವಿರಿ. ಕೋರ್ಟು ಕಚೇರಿ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.

ವೃಶ್ಚಿಕ ರಾಶಿ

ಇಂದು ನಕಾರಾತ್ಮಕತೆ ಹೆಚ್ಚಾಗಿರುತ್ತದೆ. ಆಯಾಸ ಮತ್ತು ಆಲಸ್ಯದಿಂದ ಸ್ಪೂರ್ತಿಯ ಅಭಾವವಿರುತ್ತದೆ. ದಿನದ ಆರಂಭ ಉತ್ತಮವಾಗಿರುವುದಿಲ್ಲ. ಉದ್ಯೋಗದಲ್ಲಿ ಅಡ್ಡಿ ಆತಂಕಗಳು ಎದುರಾಗಬಹುದು.

ಧನು ರಾಶಿ

ಮನೆಯಲ್ಲಿ ಆನಂದ ಮತ್ತು ಉತ್ಸಾಹದ ವಾತಾವರಣವಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆದಾಯ ವೃದ್ಧಿಸಲಿದೆ. ಪದೋನ್ನತಿ ಅವಕಾಶ ಸಿಗಬಹುದು. ತಾಯಿಯಿಂದ ಲಾಭವಾಗಲಿದೆ.

ಮಕರ ರಾಶಿ

ಆವೇಶ ಮತ್ತು ಉಗ್ರತೆಯಿಂದ ಯಾರೊಂದಿಗೂ ಜಗಳವಾಗದಂತೆ ಎಚ್ಚರ ವಹಿಸಿ. ಆರೋಗ್ಯ ಸ್ವಲ್ಪ ಏರುಪೇರಾಗಬಹುದು. ಕುಟುಂಬದಲ್ಲಿ ಜಗಳವಾಗುವ ಸಾಧ್ಯತೆ ಇದೆ. ಆದಾಯ ಕಡಿಮೆ ಮತ್ತು ಖರ್ಚು ಹೆಚ್ಚಾಗಲಿದೆ.

ಕುಂಭ ರಾಶಿ

ಸಾಮಾಜಿಕವಾಗಿ ಗೌರವಕ್ಕೆ ಧಕ್ಕೆ ಬರಬಹುದು. ಮನೆಯಲ್ಲಿ ಆಸ್ತಿಗೆ ಸಂಬಂಧಪಟ್ಟ ವಿಷಯದಲ್ಲಿ ಎಚ್ಚರ ವಹಿಸಿ. ವಿದ್ಯೆ ಪ್ರಾಪ್ತಿಗೆ ಅನುಕೂಲಕರ ದಿನ. ಆರ್ಥಿಕ ಯೋಜನೆ ಕೈಗೂಡಲಿದೆ.

ಮೀನ ರಾಶಿ

ವಿಚಾರ ಮತ್ತು ವ್ಯವಹಾರದಲ್ಲಿ ಭಾವುಕತೆ ಹೆಚ್ಚಾಗಿರುತ್ತದೆ. ಕುಟುಂಬದವರು ಮತ್ತು ಮಿತ್ರರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ತನು-ಮನದಲ್ಲಿ ಉತ್ಸಾಹ ತುಂಬಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...