alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಹೋಟೆಲ್ ಊಟ-ತಿಂಡಿ ಸೇವನೆಯಿಂದ ಆರೋಗ್ಯ ಹದಗೆಡಬಹುದು. ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಹಿರಿಯ ಅಧಿಕಾರಿಗಳು ನಿಮ್ಮ ಪರವಾಗಿ ಇರುವುದಿಲ್ಲ.

ವೃಷಭ ರಾಶಿ

ಮಿತ್ರರು ಮತ್ತು ಆತ್ಮೀಯರೊಂದಿಗೆ ಸುತ್ತಾಡಲಿದ್ದೀರಿ. ವಿಶೇಷ ಭೋಜನ ದೊರೆಯುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ಮಿಥುನ ರಾಶಿ

ಸೃಜನಶಕ್ತಿಯಲ್ಲಿ ಹೊಸತನವಿರುತ್ತದೆ. ನಿಮ್ಮ ಸೃಜನಾತ್ಮಕತೆಯನ್ನು ಪ್ರದರ್ಶಿಸುವ ಅವಕಾಶ ದೊರೆಯಬಹುದು. ಮನೆಯಲ್ಲಿ ಶಾಂತ ವಾತಾವರಣವಿರುತ್ತದೆ.

ಕರ್ಕ ರಾಶಿ

ಭವಿಷ್ಯದ ಆರ್ಥಿಕ ಯೋಜನೆ ರೂಪಿಸಲು ಉತ್ತಮ ಸಮಯ. ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಆಸ್ತಿ ವಹಿವಾಟಿನ ಬಗ್ಗೆ ಎಚ್ಚರಿಕೆಯಿಂದಿರಿ.

ಸಿಂಹ ರಾಶಿ

ಆರ್ಥಿಕ ಹಾನಿ ಉಂಟಾಗಬಹುದು. ಕುಟುಂಬ ಸದಸ್ಯರೊಂದಿಗೆ ಜಗಳವಾಗಬಹುದು. ನಕಾರಾತ್ಮಕ ವಿಚಾರಗಳಿಂದಾಗಿ ಮನಸ್ಸಿಗೆ ದುಃಖ ಉಂಟಾಗುತ್ತದೆ.

ಕನ್ಯಾ ರಾಶಿ

ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಹೊಸ ಕಾರ್ಯ ಆರಂಭಿಸಲು ಶುಭ ಸಮಯ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ವಿರೋಧಿಗಳ ವಿರುದ್ಧ ಜಯ ಸಿಗಲಿದೆ.

ತುಲಾ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ. ಆರೋಗ್ಯ ಕೊಂಚ ಏರುಪೇರಾಗಲಿದೆ. ಮಾನಸಿಕ ಶಾಂತಿ ಪ್ರಾಪ್ತವಾಗಲಿದೆ. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಲಿದೆ.

ವೃಶ್ಚಿಕ ರಾಶಿ

ದೀರ್ಘಾವಧಿಯ ಆರ್ಥಿಕ ಯೋಜನೆಗಳಿಗೆ ಸಮಯ ಅನುಕೂಲಕರವಾಗಿದೆ. ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭದಾಯಕ ದಿನ. ಇಂದು ವಿವಿಧ ರೀತಿಯ ಲಾಭವಾಗಲಿದೆ.

ಧನು ರಾಶಿ

ಮಾತಿನ ಮೇಲೆ ಸಂಯಮವಿರಲಿ, ಕೋಪ ಕಡಿಮೆ ಮಾಡಿಕೊಳ್ಳಿ. ಕುಟುಂಬ ಸದಸ್ಯರೊಂದಿಗಿನ ಸಂಬಂಧ ಬಿಗಡಾಯಿಸಬಹುದು. ಕೆಲಸಗಳು ಸರಳವಾಗಿ ಪೂರ್ಣಗೊಳ್ಳಲಿವೆ.

ಮಕರ ರಾಶಿ

ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಯಿಂದ ಲಾಭದಾಯಕ ದಿನ. ಮಧ್ಯಾಹ್ನದ ನಂತರ ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.

ಕುಂಭ ರಾಶಿ

ನಿಮ್ಮ ಗೌರವ-ಪ್ರತಿಷ್ಠೆ ಹೆಚ್ಚಲಿದೆ. ಧನಲಾಭವಾಗಲಿದೆ. ಪ್ರತಿ ಕಾರ್ಯವೂ ಸರಳವಾಗಿ ಪೂರ್ಣಗೊಳ್ಳಲಿದೆ. ಚರ್ಚೆ ಮತ್ತು ವಿವಾದಗಳಿಂದ ದೂರವಿರಿ.

ಮೀನ ರಾಶಿ

ವ್ಯಾಪಾರಿಗಳಿಗೆ ಶುಭ ಸಮಯ. ಸಾಂಸಾರಿಕ ಪ್ರಶ್ನೆಗಳ ಬಗ್ಗೆ ಕೊಂಚ ಸಮಾಧಾನವಾಗಿರಿ. ಕೋರ್ಟ್ ಕೆಲಸಗಳ ಬಗ್ಗೆ ಕೊಂಚ ಎಚ್ಚರಿಕೆಯಿಂದಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...