alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಕುಟುಂಬ ಮತ್ತು ಕಚೇರಿಯಲ್ಲಿ ಜಗಳವಾಗದಂತೆ ಹೊಂದಾಣಿಕೆಯಿಂದ ವ್ಯವಹರಿಸಿ. ಮಾತಿನ ಮೇಲೆ ನಿಯಂತ್ರಣ ಇಲ್ಲದೇ ಇರುವುದರಿಂದ ವಾದ-ವಿವಾದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಸ್ತ್ರೀಯರಿಂದ ಲಾಭವಿದೆ.

ವೃಷಭ ರಾಶಿ

ದೃಢ ನಿಶ್ಚಯ ಮತ್ತು ಸಮಾಧಾನದಿಂದ ಕಾರ್ಯ ನಿರ್ವಹಿಸಲಿದ್ದೀರಿ. ವ್ಯವಸ್ಥಿತವಾಗಿ ಹಣಕಾಸಿನ ವಹಿವಾಟು ನಡೆಸುತ್ತೀರಿ. ನಿಮ್ಮಲ್ಲಿರು ಕಲಾತ್ಮಕತೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಸಿಗಲಿದೆ.

ಮಿಥುನ ರಾಶಿ

ನಿಮ್ಮ ಮಾತು ಮತ್ತು ವ್ಯವಹಾರ ಇಂದು ಹದ್ದು ಮೀರಲಿದೆ. ಇದರಿಂದ ಯಾರೊಂದಿಗಾದ್ರೂ ಭಿನ್ನಾಭಿಪ್ರಾಯ ಉಂಟಾಗಬಹುದು. ಕುಟುಂಬಸ್ಥರು ಮತ್ತು ಸಂಬಂಧಿಕರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ.

ಕರ್ಕ ರಾಶಿ

ಆರ್ಥಿಕ ಆಯೋಜನೆ ಮತ್ತು ಹೊಸ ಕಾರ್ಯದ ಆರಂಭಕ್ಕೆ ಇಂದು ಶುಭ ದಿನ. ವ್ಯಾಪಾರದಲ್ಲಿ ಲಾಭ, ನೌಕರಿಯಲ್ಲಿ ಪದೋನ್ನತಿ ಯೋಗವಿದೆ. ದಿನ ಅತ್ಯಂತ ಆನಂದವಾಗಿ ಕಳೆಯಲಿದೆ.

ಸಿಂಹ ರಾಶಿ

ನೌಕರಿ ಮತ್ತು ಉದ್ಯಮದಲ್ಲಿ ಇಂದು ಲಾಭದಾಯಕ ದಿನ. ನಿಮ್ಮ ಕೆಲಸದಲ್ಲಿ ಹೆಚ್ಚು ಪ್ರಭಾವ ಬೀರಲಿದ್ದೀರಿ. ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯದಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗಲಿವೆ.

ಕನ್ಯಾ ರಾಶಿ

ಇಂದು ಧಾರ್ಮಿಕ ಕಾರ್ಯಗಳು ಮತ್ತು ಆಧ್ಯಾತ್ಮಿಕ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಯಾವುದಾದ್ರೂ ತೀರ್ಥ ಕ್ಷೇತ್ರಕ್ಕೆ ತೆರಳುವ ಸಾಧ್ಯತೆ ಇದೆ. ವಿದೇಶ ಪ್ರಯಾಣಕ್ಕೂ ಅವಕಾಶ ಸಿಗಲಿದೆ.

ತುಲಾ ರಾಶಿ

ಇಂದು ಆಕಸ್ಮಿಕ ಧನಲಾಭವಿದೆ. ಆಧ್ಯಾತ್ಮದೆಡೆಗೆ ಒಲವು ಮೂಡಲಿದೆ. ಆದ್ರೆ ಹೊಸ ಕಾರ್ಯವನ್ನು ಆರಂಭಿಸಬೇಡಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳಿತು.

ವೃಶ್ಚಿಕ ರಾಶಿ

ನಿಮ್ಮ ಪ್ರತಿನಿತ್ಯದ ಪ್ರವೃತ್ತಿಯಲ್ಲಿ ಬದಲಾವಣೆಯಾಗಲಿದೆ. ಇವತ್ತು ಮೋಜು-ಮಸ್ತಿ, ಮನರಂಜನೆಯ ಮೂಡ್ ನಲ್ಲಿರುತ್ತೀರಿ. ಮಿತ್ರರು ಮತ್ತು ಕುಟುಂಬಸ್ಥರು ಕೂಡ ಸಾಥ್ ನೀಡಲಿದ್ದಾರೆ.

ಧನು ರಾಶಿ

ಉದ್ಯೋಗಿಗಳಿಗೆ ಶುಭದಿನ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ.

ಮಕರ ರಾಶಿ

ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಇಂದು ತಮ್ಮ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ತಮ್ಮ ರಚನಾತ್ಮಕ ಮತ್ತು ಸೃಜನಾತ್ಮಕ ಶಕ್ತಿಯನ್ನು ಇತರರಿಗೆ ಪರಿಚಯ ಮಾಡಿಕೊಡಲಿದ್ದೀರಿ.

ಕುಂಭ ರಾಶಿ

ಅತಿಯಾದ ಭಾವುಕತೆಯಿಂದ ಮನಸ್ಸು ಆತಂಕಗೊಳ್ಳಲಿದೆ. ಆರ್ಥಿಕ ಆಯೋಜನೆ ಮಾಡಲಿದ್ದೀರಿ. ತಾಯಿಯಿಂದ ವಿಶೇಷ ಪ್ರೀತಿ ಸಿಗಲಿದೆ.

ಮೀನ ರಾಶಿ

ಕೆಲಸದಲ್ಲಿನ ಯಶಸ್ಸಿಗಾಗಿ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಇಂದು ಶುಭ ದಿನ. ನಿಮ್ಮ ವಿಚಾರದಲ್ಲಿ ಇಂದು ಸ್ಥಿರತೆ ಇರಲಿದೆ. ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಲಿದ್ದೀರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...