alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಕೃಷಿಕರಿಗೆ ಇಂದು ಲಾಭದಾಯಕ ದಿನ. ಕುಟುಂಬದಲ್ಲಿ ಆನಂದದಾಯಕ ವಾತಾವರಣ ಇರುತ್ತದೆ. ಇದರಿಂದ ನಿಮ್ಮ ಮನಸ್ಸು ಕೂಡ ಪ್ರಫುಲ್ಲಿತವಾಗಲಿದೆ. ಮನೆಯಲ್ಲಿ ಸುಖ ಶಾಂತಿ ನೆಲೆಸಲಿದೆ.

ವೃಷಭ ರಾಶಿ

ಇಂದು ಬೌದ್ಧಿಕ ಚರ್ಚೆಯಿಂದ ದೂರವಿರಿ. ವಿದ್ಯಾರ್ಥಿಗಳಿಗೆ ಕಠಿಣ ಸಮಯ. ಮನಸ್ಸು ಚಿಂತಾಗ್ರಸ್ಥವಾಗಲಿದೆ. ಉದರ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಧ್ಯಾಹ್ನದ ನಂತರ ಸಮಾಧಾನ ಸಿಗಲಿದೆ.

ಮಿಥುನ ರಾಶಿ

ಇಂದು ನಿಮ್ಮಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ. ಕುಟುಂಬ ಸದಸ್ಯರ ಮಧ್ಯೆ ಕಲಹ ಉಂಟಾಗಬಹುದು. ಆಸ್ತಿಗೆ ಸಂಬಂಧಪಟ್ಟ ದಾಖಲಾತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಕರ್ಕ ರಾಶಿ

ಸರಿಯಾಗಿ ವಿಚಾರ ಮಾಡದೇ ಯಾವ ಕಾರ್ಯವನ್ನೂ ಕೈಗೆತ್ತಿಕೊಳ್ಳಬೇಡಿ. ಸಂಬಂಧಿಕರ ಭೇಟಿಯಿಂದ ಮನಸ್ಸಿಗೆ ಆನಂದ ದೊರೆಯುತ್ತದೆ. ಕುಟುಂಬಸ್ಥರೊಂದಿಗೂ ಬಾಂಧವ್ಯ ವೃದ್ಧಿಸಲಿದೆ.

ಸಿಂಹ ರಾಶಿ

ಬೌದ್ಧಿಕ ಕ್ಷಮತೆಯಲ್ಲಿನ ವೃದ್ಧಿಯಿಂದ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದೀರಿ. ಆದ್ರೂ ವಾದ-ವಿವಾದದಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ಸಮಯ ಕಳೆಯಲಿದ್ದೀರಿ.

ಕನ್ಯಾ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ನಿಮ್ಮ ಮಾತಿನ ಪ್ರಭಾವದಿಂದ್ಲೇ ಲಾಭವಾಗಲಿದೆ. ಇತರರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲಿದೆ. ಪ್ರೇಮ ಸಂಬಂಧದಲ್ಲಿ ಪ್ರೀತಿ ವಿಶ್ವಾಸ ಮೂಡಲಿದೆ.

ತುಲಾ ರಾಶಿ

ಕೋಪವನ್ನು ನಿಯಂತ್ರಿಸಿಕೊಂಡು ಸ್ವಭಾವದಲ್ಲಿ ಮೃದುತ್ವ ಅಳವಡಿಸಿಕೊಳ್ಳಿ. ಮಾತಿನ ಮೇಲೆ ಸಂಯಮವಿದ್ದಲ್ಲಿ ವಾತಾವರಣ ಶಾಂತವಾಗಿರುತ್ತದೆ. ಚೆನ್ನಾಗಿ ಯೋಚಿಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಿ.

ವೃಶ್ಚಿಕ ರಾಶಿ

ಜೀವನ ಸಂಗಾತಿ ದೊರೆಯುವ ಸಾಧ್ಯತೆಗಳಿವೆ. ಆದಾಯ ಮತ್ತು ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಮಿತ್ರರೊಂದಿಗೆ ಪ್ರವಾಸಕ್ಕೆ ತೆರಳಲಿದ್ದೀರಿ. ಆನಂದವಾಗಿ ಸಮಯ ಕಳೆಯಲಿದ್ದೀರಿ.

ಧನು ರಾಶಿ

ಇಂದು ನಿಮ್ಮ ಎಲ್ಲಾ ಯೋಜನೆಗಳು ಮತ್ತು ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ವೃತ್ತಿಯಲ್ಲೂ ಯಶಸ್ಸು ದೊರೆಯಲಿದೆ. ಕಚೇರಿಯಲ್ಲಿ ಅನುಕೂಲಕರ ವಾತಾವರಣವಿರುತ್ತದೆ.

ಮಕರ ರಾಶಿ

ವಿದೇಶಕ್ಕೆ ತೆರಳುವ ಅವಕಾಶ ಒದಗಿ ಬರಬಹುದು. ಧಾರ್ಮಿಕ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಕುಟುಂಬದಲ್ಲಿ ಆನಂದ-ಉಲ್ಲಾಸದ ವಾತಾವರಣವಿರುತ್ತದೆ.

ಕುಂಭ ರಾಶಿ

ಇಂದು ಹೊಸ ಕಾರ್ಯ ಆರಂಭಿಸಬೇಡಿ. ಊಟ-ತಿಂಡಿ ಬಗ್ಗೆ ವಿಶೇಷ ಗಮನಹರಿಸಿ. ಮಾತಿನ ಮೇಲೆ ನಿಯಂತ್ರಣ ಇರಲಿ. ಇದರಿಂದ ಉಗ್ರ ಚರ್ಚೆ ಅಥವಾ ವಾದ-ವಿವಾದದಿಂದ ದೂರವಿರಬಹುದು.

ಮೀನ ರಾಶಿ

ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಲಾಭವಾಗಲಿದೆ. ಸ್ನೇಹಿತರೊಂದಿಗೆ ಮನರಂಜನಾ ಸ್ಥಳಕ್ಕೆ ತೆರಳಲಿದ್ದೀರಿ. ಇದರಿಂದ ಮನಸ್ಸು ಉಲ್ಲಸಿತವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...