alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮ್ಮಲ್ಲಿ ತಾಜಾತನ ಮತ್ತು ಸ್ಪೂರ್ತಿಯ ಕೊರತೆ ಉಂಟಾಗಲಿದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದೇ ಹೋದಲ್ಲಿ ತೊಂದರೆ ಎದುರಾಗಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಮನೆಯಲ್ಲಿ ಕುಟುಂಬಸ್ಥರೊಂದಿಗೆ ವಾದ ವಿವಾದ ಉಂಟಾಗಬಹುದು.

ವೃಷಭ ರಾಶಿ

ಅಧಿಕ ಕೆಲಸ ಮತ್ತು ಆಹಾರದ ಬಗ್ಗೆ ಗಮನ ಕೊಡದೇ ಇರುವುದರಿಂದ ಆರೋಗ್ಯ ಹದಗೆಡಬಹುದು. ಸರಿಯಾಗಿ ನಿದ್ದೆಯನ್ನೂ ಮಾಡದ ಕಾರಣ ಮನಸ್ಸಿನಲ್ಲಿ ಒಂದು ರೀತಿಯ ಅಸ್ವಸ್ಥತೆ ಉಂಟಾಗುತ್ತದೆ. ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಲಾಗದೇ ಕೋಪ ಬರುತ್ತದೆ. ಧ್ಯಾನ ಮತ್ತು ಯೋಗಾಸನ ಮಾಡಿ.

ಮಿಥುನ ರಾಶಿ

ಮೋಜು-ಮಸ್ತಿ ಮನರಂಜನೆಯ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಲಿದೆ. ಸ್ನೇಹಿತರ ಜೊತೆಗೆ ಸುತ್ತಾಡಲು ತೆರಳುತ್ತೀರಿ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಭಿನ್ನ ಲಿಂಗಿಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ.

ಕರ್ಕ ರಾಶಿ

ಉದ್ಯೋಗಿಗಳಿಗೆ ಕಚೇರಿಯಲ್ಲಿ ಉತ್ತಮ ವಾತಾವರಣವಿರಲಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭದ ಜೊತೆಗೆ ಅವಶ್ಯಕ ಖರ್ಚು ಕೂಡ ಆಗಲಿದೆ.

ಸಿಂಹ ರಾಶಿ

ಇಂದು ಸೃಜನಾತ್ಮಕ ಕೆಲಸದ ಮೇಲೆ ವಿಶೇಷ ಆಸಕ್ತಿ ಹೊಂದುತ್ತೀರಿ. ಸಾಹಿತ್ಯ ಮತ್ತು ಕಲೆಯ ಕ್ಷೇತ್ರದಲ್ಲಿ ಹೊಸದೇನನ್ನಾದ್ರೂ ಮಾಡಲು ಪ್ರೇರಣೆ ಸಿಗುತ್ತದೆ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಮಕ್ಕಳಿಂದ ಶುಭ ಸಮಾಚಾರ ದೊರೆಯುತ್ತದೆ.

ಕನ್ಯಾ ರಾಶಿ

ಕುಟುಂಬ ಸದಸ್ಯರೊಂದಿಗೆ ವಿವಾದ ಏರ್ಪಡಲಿದೆ. ತಾಯಿಯ ಆರೋಗ್ಯದ ಬಗ್ಗೆ ಆತಂಕ ಉಂಟಾಗಬಹುದು. ಅಭ್ಯಾಸಕ್ಕೆ ಅನುಕೂಲಕರ ಸಮಯವಲ್ಲ. ಸ್ಥಿರಾಸ್ತಿ ಮತ್ತು ವಾಹನ ಸಂಬಂಧಿ ಸಮಸ್ಯೆ ಎದುರಾಗಬಹುದು. ಅಧಿಕ ಹಣ ಖರ್ಚಾಗಲಿದೆ.

ತುಲಾ ರಾಶಿ

ಅದೃಷ್ಟ ನಿಮ್ಮ ಪಾಲಿಗಿದೆ. ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ. ಯೋಗ್ಯ ಸ್ಥಳದಲ್ಲಿ ಬಂಡವಾಳ ಹೂಡಿಕೆ ಮಾಡಿದ್ರೆ ಲಾಭವಾಗಲಿದೆ. ಧಾರ್ಮಿಕ ಯಾತ್ರೆಯನ್ನು ಆಯೋಜನೆ ಮಾಡುವ ಸಾಧ್ಯತೆ ಇದೆ. ವಿದೇಶದಿಂದ ಶುಭ ಸಮಾಚಾರ ದೊರೆಯಲಿದೆ.

ವೃಶ್ಚಿಕ ರಾಶಿ

ಕುಟುಂಬ ಸದಸ್ಯರೊಂದಿಗೆ ಸಂಘರ್ಷ ಏರ್ಪಡದಂತೆ ಎಚ್ಚರ ವಹಿಸಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಅನಾವಶ್ಯಕ ಖರ್ಚನ್ನು ನಿಯಂತ್ರಿಸಿ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ತೊಂದರೆ ಆಗಬಹುದು.

ಧನು ರಾಶಿ

ನಿರ್ಧಾರಿತ ಕಾರ್ಯದಲ್ಲಿ ಯಶಸ್ಸು ಮತ್ತು ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ತೀರ್ಥಯಾತ್ರೆ ಕೈಗೊಳ್ಳಬಹುದು. ಸಂಬಂಧಿಗಳ ಭೇಟಿ ಸಂತೋಷ ನೀಡಲಿದೆ. ದಾಂಪತ್ಯ ಜೀವನದಲ್ಲಿ ಮಧುರ ಅನುಭವ ಸಿಗಲಿದೆ. ಸಮಾಜದಲ್ಲಿ ನಿಮ್ಮ ಯಶಸ್ಸು ಮತ್ತು ಕೀರ್ತಿಯ ವೃದ್ಧಿಯಾಗಲಿದೆ.

ಮಕರ ರಾಶಿ

ಇವತ್ತು ಹೆಚ್ಚಿನ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೀರಿ. ಅದಕ್ಕಾಗಿ ಹಣ ಖರ್ಚಾಗಲಿದೆ. ಕುಟುಂಬದವರೊಂದಿಗೆ ಎಚ್ಚರಿಕೆಯಿಂದ ಮಾತನಾಡಿ. ಹೆಚ್ಚು ಕಷ್ಟಪಟ್ರೂ ಪೂರ್ಣ ಸಫಲತೆ ಸಿಗದೇ ಹತಾಶೆ ಕಾಡಬಹುದು. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.

ಕುಂಭ ರಾಶಿ

ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದೀರಿ. ನೌಕರಿ ಮತ್ತು ಉದ್ಯಮದಲ್ಲಿ ಲಾಭದ ಜೊತೆಗೆ ಹೆಚ್ಚಿನ ಆದಾಯವೂ ಸಿಗುತ್ತದೆ. ಮಹಿಳಾ ಮಿತ್ರರಿಂದ ಲಾಭವಿದೆ. ಸಮಾಜದಲ್ಲೂ ಪ್ರತಿಷ್ಠೆ ಹೆಚ್ಚಲಿದೆ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ಮೀನ ರಾಶಿ

ಇವತ್ತು ನಿಮಗೆ ಶುಭ ದಿನ. ಕೆಲಸದಲ್ಲಿ ಯಶಸ್ಸು ಮತ್ತು ಹಿರಿಯ ಅಧಿಕಾರಿಗಳ ಪ್ರೋತ್ಸಾಹ ದೊರೆಯಲಿದೆ. ಉದ್ಯಮಿಗಳಿಗೆ ಆದಾಯದಲ್ಲಿ ವೃದ್ಧಿಯಾಗಲಿದೆ. ಸರ್ಕಾರದಿಂದ್ಲೂ ಲಾಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...