alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಹೊಸ ಕಾರ್ಯ ಮಾಡಲು ಪ್ರೇರಣೆ ಸಿಗುತ್ತದೆ. ವಿಚಾರದಲ್ಲಿ ಸ್ಥಿರತೆಯ ಅಭಾವದಿಂದ ಗೊಂದಲ ಉಂಟಾಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸ್ಪರ್ಧಾತ್ಮಕ ವಾತಾವರಣವಿರುತ್ತದೆ.

ವೃಷಭ ರಾಶಿ

ಇಂದು ಅತ್ಯಂತ ಉತ್ಸಾಹ ಮತ್ತು ಸ್ಪೂರ್ತಿಯಿಂದ ದಿನ ಕಳೆಯಲಿದ್ದೀರಿ. ಉತ್ತಮ ಭೋಜನ ದೊರೆಯಲಿದೆ. ಸ್ನೇಹಿತರು ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಆನಂದವಾಗಿ ಕಾಲ ಕಳೆಯುವ ಸಾಧ್ಯತೆ ಇದೆ.

ಮಿಥುನ ರಾಶಿ

ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುತ್ತದೆ. ಇದರಿಂದ ಆತಂಕಗೊಳ್ಳಲಿದ್ದೀರಿ. ಮನಸ್ಸು ಕೂಡ ಗೊಂದಲದ ಗೂಡಾಗಲಿದೆ. ಹಾಗಾಗಿ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳಬೇಡಿ.

ಕರ್ಕ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಆದ್ರೆ ಮನಸ್ಸಿನ ಗೊಂದಲ ನಿಮಗೆ ಅಡ್ಡಿಯಾಗಬಹುದು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವ ಸಾಧ್ಯತೆ ಇದೆ. ಅವಕಾಶಗಳು ಕೈತಪ್ಪಲಿವೆ.

ಸಿಂಹ ರಾಶಿ

ಹೊಸ ಕಾರ್ಯ ಆರಂಭಕ್ಕೆ ಶುಭ ದಿನ. ನೀವು ಕೈಗೊಂಡ ಯೋಜನೆಗಳು ಯಶಸ್ವಿಯಾಗುತ್ತವೆ. ತಂದೆಯೊಂದಿಗೆ ಆತ್ಮೀಯತೆ ಹೆಚ್ಚಲಿದೆ. ಅದರಿಂದ ನಿಮಗೆ ಲಾಭವಾಗಬಹುದು.

ಕನ್ಯಾ ರಾಶಿ

ಬೌದ್ಧಿಕ ವರ್ಚಸ್ಸುಳ್ಳವರು ಮತ್ತು ಸಾಹಿತಿಗಳನ್ನು ಭೇಟಿಯಾಗಲಿದ್ದೀರಿ. ಜ್ಞಾನಗೋಷ್ಠಿಯಲ್ಲಿ ಸಮಯ ಕಳೆಯುವ ಸಾಧ್ಯತೆ ಇದೆ. ಹೊಸ ಕಾರ್ಯವನ್ನು ಆರಂಭಿಸಲಿದ್ದೀರಿ. ದೂರ ಪ್ರಯಾಣ ಅಥವಾ ತೀರ್ಥಯಾತ್ರೆ ಕೈಗೊಳ್ಳಬಹುದು.

ತುಲಾ ರಾಶಿ

ಇಂದು ನಿಮ್ಮ ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇಟ್ಟುಕೊಳ್ಳುವುದು ಅತ್ಯವಶ್ಯಕ. ದೈನಿಕ ಕಾರ್ಯಗಳನ್ನು ಹೊರತುಪಡಿಸಿ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಡಿ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಪಾರ್ಟಿ, ಪಿಕ್ ನಿಕ್, ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಒಳ್ಳೆ ಭೋಜನ ಸವಿಯಲಿದ್ದೀರಿ. ಮನರಂಜನೆಯ ಲೋಕದಲ್ಲಿ ವಿಹರಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಸುಖ ಪ್ರಾಪ್ತಿಯಾಗಲಿದೆ.

ಧನು ರಾಶಿ

ವ್ಯಾಪಾರವನ್ನು ವಿಸ್ತರಿಸಲು ಇಂದು ಅನುಕೂಲಕರ ದಿನ. ಆರ್ಥಿಕ ಯೋಜನೆಗಳನ್ನು ಕೂಡ ರೂಪಿಸಬಹುದು. ಹಣ ವಸೂಲಿ ಅಥವಾ ಆರ್ಥಿಕ ವ್ಯವಹಾರಗಳಲ್ಲೂ ಯಶಸ್ಸು ಸಿಗುತ್ತದೆ.

ಮಕರ ರಾಶಿ

ಇಂದು ಮಾನಸಿಕ ಅಶಾಂತಿ ಮತ್ತು ಉದ್ವೇಗ ಹೆಚ್ಚಾಗಿರುತ್ತದೆ. ವಿಚಾರಗಳು ಶೀಘ್ರ ಬದಲಾಗುವುದರಿಂದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಕ್ಕಳ ಪ್ರಶ್ನೆ ನಿಮ್ಮನ್ನು ಗೊಂದಲದಲ್ಲಿ ಸಿಲುಕಿಸಲಿದೆ.

ಕುಂಭ ರಾಶಿ

ಇಂದು ಸಮಾಧಾನದಿಂದಿರುವುದು ಒಳಿತು. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಆತಂಕ ಉಂಟಾಗುತ್ತದೆ.

ಮೀನ ರಾಶಿ

ಖರ್ಚು ಮತ್ತು ಆದಾಯ ಎರಡೂ ಹೆಚ್ಚಳವಾಗಲಿದೆ. ರಹಸ್ಯ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸಿ. ಸಂಗಾತಿ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...