alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ಉತ್ಸಾಹದಿಂದ ದಿನದ ಆರಂಭವಾಗಲಿದೆ. ಶಾರೀರಿಕ ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಮನೆಯಲ್ಲಿ ಆನಂದದ ವಾತಾವರಣವಿರಲಿದೆ. ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ.

ವೃಷಭ ರಾಶಿ

ಮನಸ್ಸಿನ ಗೊಂದಲದಿಂದಾಗಿ ಅಸಂತುಷ್ಟರಾಗಿರುತ್ತೀರಿ. ಕೆಮ್ಮು, ಶೀತ, ಕಫ, ಜ್ವರದಿಂದ ತೊಂದರೆಯಾಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಸ್ವಜನರಿಂದ ದೂರವಾಗಲಿದ್ದೀರಿ.

ಮಿಥುನ ರಾಶಿ

ಇಂದು ಮಿತ್ರರಿಂದ ಲಾಭವಾಗಲಿದೆ. ಹೊಸ ಸ್ನೇಹಿತರು ದೊರೆಯಬಹುದು. ಅವರಿಂದ ಭವಿಷ್ಯದಲ್ಲಿ ನಿಮಗೆ ಲಾಭವಿದೆ. ನಿರೀಕ್ಷೆಗಿಂತಲೂ ಅಧಿಕ ಧನ ಲಾಭವಾಗಲಿದೆ. ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ಕರ್ಕ ರಾಶಿ

ಶಾರೀರಿಕ ಮತ್ತು ಮಾನಸಿಕ ವ್ಯಾಕುಲತೆಯಿಂದ ಅಸಂತುಷ್ಟರಾಗಿರುತ್ತೀರಿ. ಕೋಪ ಹೆಚ್ಚಾಗಿರುತ್ತದೆ, ಇದರಿಂದ ಜಗಳವಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ನಿಮ್ಮ ಶಾರೀರಿಕ ಸ್ಥಿತಿ ಉತ್ತಮವಾಗಿರುತ್ತದೆ.

ಸಿಂಹ ರಾಶಿ

ಕುಟುಂಬ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ದಿನ ಉತ್ತಮವಾಗಿ ಕಳೆಯಲಿದೆ. ಎರಡೂ ಸ್ಥಳಗಳಲ್ಲಿ ಅವಶ್ಯಕ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ. ಕೆಲಸದ ಒತ್ತಡ ಹೆಚ್ಚಾಗಲಿದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಕನ್ಯಾ ರಾಶಿ

ಇವತ್ತು ನಿಮ್ಮ ಮನಸ್ಸು ಗಹನವಾದ ಚಿಂತನೆ ಮತ್ತು ರಹಸ್ಯ ವಿದ್ಯೆಯ ಕಡೆಗೆ ಆಕರ್ಷಿತವಾಗಲಿದೆ. ಯೋಚನೆ ಮಾಡಿ ಮಾತನಾಡಿ. ಇದರಿಂದ ಭಿನ್ನಾಭಿಪ್ರಾಯಗಳನ್ನು ತಪ್ಪಿಸಬಹುದು.  ದೈಹಿಕ ಅಸ್ವಸ್ಥತೆ ಕಾಡಲಿದೆ.

ತುಲಾ ರಾಶಿ

ಬೆಳಗಿನ ಸಮಯದಲ್ಲಿ ಶಾರೀರಿಕ ಮತ್ತು ಮಾನಸಿಕ ಶಿಥಿಲತೆ ಉಂಟಾಗಲಿದೆ. ಕೆಲಸದ ನಿಮಿತ್ತ ಅಧಿಕ ಓಡಾಟ ಮಾಡಬೇಕಾಗಿ ಬರುತ್ತದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ.

ವೃಶ್ಚಿಕ ರಾಶಿ

ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ವ್ಯಾವಹಾರಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಅದರಿಂದ ಲಾಭವಾಗಲಿದೆ. ಅಧಿಕ ಜನರ ಭೇಟಿಯಿಂದ ನಿಮ್ಮ ವಿಚಾರಗಳಲ್ಲೂ ಬದಲಾವಣೆ ಆಗಲಿದೆ.

ಧನು ರಾಶಿ

ತಾಯಿಯ ಆರೋಗ್ಯ ಆತಂಕ ಹುಟ್ಟಿಸಬಹುದು. ಸಾರ್ವಜನಿಕ ಜೀವನದಲ್ಲಿ ಅಪಜಯದಿಂದ ನಿಮ್ಮ ಪ್ರತಿಷ್ಠೆಗೆ ಹಾನಿಯಾಗಬಹುದು. ಸೂಕ್ತ ವಿಶ್ರಾಂತಿ ಮತ್ತು ನಿದ್ದೆಯ ಕೊರತೆಯಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ಮಕರ ರಾಶಿ

ಇಂದು ಹೆಚ್ಚು ಸಂವೇದನಾಶೀಲ ಮತ್ತು ಭಾವೋದ್ರಿಕ್ತರಾಗಬೇಡಿ. ಜಮೀನು, ಆಸ್ತಿ ದಸ್ತಾವೇಜು ಕೆಲಸಗಳಿಂದ ದೂರವಿರಿ. ಮಾನಸಿಕ ಅಸ್ವಸ್ಥತೆ ಇರಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.

ಕುಂಭ ರಾಶಿ

ಬರವಣಿಗೆಗೆ ಉತ್ತಮ ದಿನ. ಸಂಜೆ ವೇಳೆಗೆ ಪರಿಸ್ಥಿತಿ ಬದಲಾವಣೆಯಾಗಲಿದೆ. ಗೊಂದಲಮಯ ಪರಿಸ್ಥಿತಿಯ ಅನುಭವವಾಗಲಿದೆ. ಇತರರ ಮಾತು ಮತ್ತು ವ್ಯವಹಾರದಿಂದ ನಿಮಗೆ ನೋವಾಗಬಹುದು.

ಮೀನ ರಾಶಿ

ಇಂದು ಅಧಿಕ ಹಣ ಖರ್ಚಾಗಲಿದೆ. ನಿಮ್ಮ ಮನಸ್ಸು ವ್ಯಗ್ರವಾಗಲಿದೆ. ಯಾರ ಜೊತೆಗೂ ಜಗಳವಾಡಬೇಡಿ. ಮಾತಿನ ಮೇಲೆ ಹಿಡಿತವಿರಲಿ. ಆರ್ಥಿಕ ವಿಷಯಗಳಲ್ಲೂ ಎಚ್ಚರ ವಹಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...