alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಮಿತ್ರರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಸಮಯ ಕಳೆಯಲಿದ್ದೀರಿ. ಸ್ನೇಹಿತರಿಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಹಿರಿಯರಿಂದ ಲಾಭವಾಗಲಿದೆ. ಅವರ ಸಹಕಾರ ದೊರೆಯಲಿದೆ.

ವೃಷಭ ರಾಶಿ

ಉದ್ಯೋಗದಲ್ಲಿ ಪದೋನ್ನತಿಯ ಸಮಾಚಾರ ದೊರೆಯುತ್ತದೆ. ಹಿರಿಯ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ಸರ್ಕಾರಿ ನಿರ್ಣಯಗಳು ನಿಮ್ಮ ಪರವಾಗಿರುತ್ತವೆ. ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ.

ಮಿಥುನ ರಾಶಿ

ಆರೋಗ್ಯ ಕೊಂಚ ಏರುಪೇರಾಗಲಿದೆ. ಯಾವುದೇ ಕಾರ್ಯದಲ್ಲಿ ಉತ್ಸಾಹವಿರುವುದಿಲ್ಲ. ಸಹೋದ್ಯೋಗಿಗಳ ಸಹಕಾರದ ಕೊರತೆಯಿಂದ ಹತಾಶೆ ಆವರಿಸಬಹುದು.

ಕರ್ಕ ರಾಶಿ

ಇಂದು ನಕಾರಾತ್ಮಕ ವ್ಯವಹಾರಗಳು ನಡೆಯುತ್ತವೆ. ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುತ್ತವೆ. ಕೋಪ ನಿಯಂತ್ರಿಸಿಕೊಳ್ಳಿ. ಮಾತಿನ ಮೇಲೂ ಸಂಯಮ ಇರಲಿ.

ಸಿಂಹ ರಾಶಿ

ಮನರಂಜನೆ ಮತ್ತು ಸುತ್ತಾಟದಲ್ಲಿ ಸಮಯ ಕಳೆಯಲಿದ್ದೀರಿ. ಸಂಗಾತಿಗೆ ಅನಾರೋಗ್ಯ ಕಾಡುತ್ತದೆ. ಸಾರ್ವಜನಿಕ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ಕನ್ಯಾ ರಾಶಿ

ಮನೆಯಲ್ಲಿ ಸಂತೋಷ ಮತ್ತು ಉತ್ಸಾಹದ ವಾತಾವರಣವಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಶುಭ ಸಮಾಚಾರ ದೊರೆಯಬಹುದು.

ತುಲಾ ರಾಶಿ

ಕಲ್ಪನಾಶೀಲತೆ ಮತ್ತು ಸೃಜನಶಕ್ತಿ ನಿಮ್ಮ ನೆರವಿಗೆ ಬರುತ್ತದೆ. ಬೌದ್ಧಿಕ  ಪ್ರವೃತ್ತಿ ಮತ್ತು ಚರ್ಚೆಯಲ್ಲಿ ಪಾಲ್ಗೊಳ್ಳುವ ಇಚ್ಛೆಯಾಗಲಿದೆ. ಮಕ್ಕಳಿಂದ ಶುಭ ಸಮಾಚಾರ ಬರಬಹುದು.

ವೃಶ್ಚಿಕ ರಾಶಿ

ಇಂದು ಅತ್ಯಂತ ಶಾಂತವಾಗಿರಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ಸ್ತ್ರೀಯರಿಂದ ನಷ್ಟವಾಗುವ ಸಾಧ್ಯತೆ ಇದೆ. ವಾಹನ, ಆಸ್ತಿಗೆ ಸಂಬಂಧಿಸಿದ ದಸ್ತಾವೇಜುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಧನು ರಾಶಿ

ನಿಗೂಢ ರಹಸ್ಯಗಳು ಮತ್ತು ಆಧ್ಯಾತ್ಮಿಕತೆ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಕಾರ್ಯ ಕೈಗೊಳ್ಳಲು ಪ್ರೇರಣೆ ಸಿಗಲಿದೆ. ನಿಮ್ಮ ಮನಸ್ಸು ಪ್ರಸನ್ನವಾಗಿರುತ್ತದೆ. ಲಘು ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ

ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡರೆ ಸಮಸ್ಯೆಗಳು ಪರಿಹಾರವಾಗುತ್ತವೆ. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ನಕಾರಾತ್ಮಕ ವಿಚಾರಗಳಿಂದ ದೂರವಿರಿ.

ಕುಂಭ ರಾಶಿ

ಶಾರೀರಿಕ, ಮಾನಸಿಕ, ಆರ್ಥಿಕ ದೃಷ್ಟಿಯಿಂದ ಇಂದು ದಿನ ಉತ್ತಮವಾಗಿದೆ. ಕುಟುಂಬದವರೊಂದಿಗೆ ಭೂರಿ ಭೋಜನ ಸವಿಯಲಿದ್ದೀರಿ. ಉಪಹಾರ ಮತ್ತು ಧನಪ್ರಾಪ್ತಿ ಯೋಗವಿದೆ.

ಮೀನ ರಾಶಿ

ನಿಮ್ಮಲ್ಲಿ ಏಕಾಗ್ರತೆಯ ಕೊರತೆ ಕಂಡುಬರುತ್ತದೆ. ಆರೋಗ್ಯದ ಮೇಲೂ ಇದು ಪ್ರಭಾವ ಬೀರಬಹುದು. ಸಂತಾನದ ಬಗೆಗಿನ ಸಮಸ್ಯೆ ನಿಮ್ಮನ್ನು ಗೊಂದಲದಲ್ಲಿ ಕೆಡವುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...