alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇಂದು ಮಿತ್ರರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳಲಿದ್ದೀರಿ. ಮಿತ್ರರ ಭೇಟಿಯಿಂದ ಉಪಹಾರ ದೊರೆಯಲಿದೆ. ಆದ್ರೆ ನಿಮ್ಮ ಹಣ ಖರ್ಚಾಗಲಿದೆ. ರಮಣೀಯ ಕ್ಷೇತ್ರಕ್ಕೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಸರ್ಕಾರಿ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.

ವೃಷಭ ರಾಶಿ

ಉದ್ಯೋಗಿಗಳಿಗೆ ಇಂದು ಶುಭ ದಿನ. ಯಶಸ್ವಿಯಾಗಿ ಹೊಸ ಕಾರ್ಯಗಳ ಆಯೋಜನೆ ಮಾಡಲಿದ್ದೀರಿ. ಉಚ್ಛ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರಲಿದೆ. ಪದೋನ್ನತಿ ಯೋಗವೂ ಇದೆ.

ಮಿಥುನ ರಾಶಿ

ನೌಕರಿ ಮತ್ತು ವ್ಯಾಪಾರದಲ್ಲಿ ಕಠಿಣ ಪರಿಸ್ಥಿತಿಗಳು ಎದುರಾಗುತ್ತವೆ. ಹಿರಿಯ ಅಧಿಕಾರಿಗಳ ಕೋಪವನ್ನು ಎದುರಿಸಬೇಕಾಗಿ ಬರಬಹುದು. ಖರ್ಚು ಕೂಡ ಹೆಚ್ಚಾಗಲಿದೆ. ಇಂದು ಯಾವುದೇ ಮಹತ್ವಪೂರ್ಣ ನಿರ್ಣಯ ಕೈಗೊಳ್ಳಬೇಡಿ.

ಕರ್ಕ ರಾಶಿ

ಕುಟುಂಬ ಸದಸ್ಯರೊಂದಿಗೆ ವಾದ ವಿವಾದದಲ್ಲಿ ತೊಡಗಿಕೊಳ್ಳಬೇಡಿ. ಮಾತು ಮತ್ತು ಕೋಪವನ್ನು ನಿಯಂತ್ರಿಸಿಕೊಂಡರೆ ಪ್ರಮಾದವನ್ನು ತಪ್ಪಿಸಬಹುದು. ನಿಷೇಧಾತ್ಮಕ ಮತ್ತು ಅನೈತಿಕ ಕಾರ್ಯಗಳಿಂದ ದೂರವಿರಿ.

ಸಿಂಹ ರಾಶಿ

ಸಂಗಾತಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಪಾಲುದಾರರೊಂದಿಗೆ ಸಮಾಧಾನದಿಂದ ವ್ಯವಹರಿಸಿ. ವಾದ ವಿವಾದದಲ್ಲಿ ತೊಡಗಿಕೊಳ್ಳದೇ ಇರುವುದು ಉತ್ತಮ. ಕೋರ್ಟ್ ಕಚೇರಿ ವಿವಾದದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ.

ಕನ್ಯಾ ರಾಶಿ

ಮನೆ ಮತ್ತು ಕಚೇರಿಯಲ್ಲಿ ಆನಂದದ ವಾತಾವರಣವಿರುತ್ತದೆ. ಸಹೋದ್ಯೋಗಿಗಳಿಂದ ಸಹಕಾರ ಸಿಗುತ್ತದೆ. ರೋಗಿಗಳ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ತವರಿನಿಂದ ಶುಭ ಸಮಾಚಾರ ಸಿಗುತ್ತದೆ. ಕೆಲಸಗಳು ಯಶಸ್ವಿಯಾಗಲಿವೆ.

ತುಲಾ ರಾಶಿ

ದಿನ ಮಧ್ಯಮ ಫಲದಾಯಿಯಾಗಿದೆ. ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಅಡ್ಡಿ ಆತಂಕ ಎದುರಾಗಬಹುದು. ವಾದ-ವಿವಾದ ಬೌದ್ಧಿಕ ಚರ್ಚೆಯಿಂದ ದೂರವಿರಿ. ಹೊಸ ಕಾರ್ಯವನ್ನು ಇಂದು ಆರಂಭಿಸಿದಲ್ಲಿ ಯಶಸ್ಸಿಗೆ ವಿಘ್ನಗಳು ಎದುರಾಗುತ್ತವೆ.

ವೃಶ್ಚಿಕ ರಾಶಿ

ಇವತ್ತು ಸಮಾಧಾನ ಚಿತ್ತದಿಂದ ದಿನ ಕಳೆಯಿರಿ. ಮನಸ್ಸಿನಲ್ಲಿ ಚಿಂತೆ ಕಾಡಲಿದೆ. ದೇಹ ಕೂಡ ಕೊಂಚ ಅಸ್ವಸ್ಥವಾಗಿರಲಿದೆ. ಸಂಬಂಧಿಗಳೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಆರ್ಥಿಕ ಹಾನಿಯಾಗಬಹುದು.

ಧನು ರಾಶಿ

ಹೊಸ ಕಾರ್ಯದ ಆರಂಭಕ್ಕೆ ಇಂದು ಶುಭ ದಿನ. ಸಹೋದರರನ್ನು ಭೇಟಿಯಾಗಲಿದ್ದೀರಿ. ಕುಟುಂಬದವರೊಂದಿಗೆ ಪ್ರವಾಸದ ಆಯೋಜನೆ ಮಾಡಬಹುದು. ಆರೋಗ್ಯ ಉತ್ತಮವಾಗಿರಲಿದೆ. ಭಾಗ್ಯವೃದ್ಧಿಯಾಗಲಿದೆ.

ಮಕರ ರಾಶಿ

ಕುಟುಂಬ ಸದಸ್ಯರೊಂದಿಗೆ ಜಗಳವಾಗದಂತೆ ಎಚ್ಚರ ವಹಿಸಿ. ಮಾತಿನ ಮೇಲೆ ಸಂಯಮ ಇಟ್ಟುಕೊಂಡಲ್ಲಿ ಕಠಿಣ ಪರಿಸ್ಥಿತಿಗಳಿಂದ ಪಾರಾಗಬಹುದು. ಬಂಡವಾಳ ಹೂಡಿಕೆಗೆ ಇದು ಶುಭ ಸಮಯವಲ್ಲ.

ಕುಂಭ ರಾಶಿ

ಇವತ್ತು ನಿಮಗೆ ಶುಭ ದಿನ. ಶಾರೀರಿಕ ಮತ್ತು ಮಾನಸಿಕವಾಗಿ ಪ್ರಸನ್ನರಾಗಿರುತ್ತೀರಾ. ಬೌದ್ಧಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಉತ್ತಮ ಅನುಭವವಾಗಲಿದೆ.

ಮೀನ ರಾಶಿ

ಮೋಸ ಮತ್ತು ಅತಿಯಾಸೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಏಕಾಗ್ರತೆ ಕಡಿಮೆಯಾಗಲಿದೆ. ಅಧಿಕ ಹಣ ಖರ್ಚಾಗುವ ಸಂಭವ ಹೆಚ್ಚು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...