alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ಹೊಸ ಉತ್ಸಾಹವನ್ನು ಕಾಣಬಹುದು. ತನು ಮನದಲ್ಲಿ ಸ್ಪೂರ್ತಿ ಮತ್ತು ಹೊಸತನದ ಅನುಭವವಾಗುತ್ತದೆ. ಮನೆಯಲ್ಲೂ ಖುಷಿಯ ವಾತಾವರಣವಿರುತ್ತದೆ.

ವೃಷಭ ರಾಶಿ

ಕುಟುಂಬ ಹಾಗೂ ಖರ್ಚಿನ ಬಗ್ಗೆ ಹೆಚ್ಚು ಚಿಂತಿತರಾಗುತ್ತೀರಿ. ಅತಿಯಾದ ಮಾತಿನಿಂದಾಗಿ ಜಗಳವಾಗಬಹುದು. ಪರಿಶ್ರಮವೆಲ್ಲಾ ವ್ಯರ್ಥವಾದಂತೆ ಭಾಸವಾಗುತ್ತದೆ. ತಪ್ಪು ತಿಳುವಳಿಕೆಗಳಿಂದ ದೂರವಿರಿ.

ಮಿಥುನ ರಾಶಿ

ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಉದ್ಯೋಗ ಮತ್ತು ಉದ್ಯಮದಲ್ಲಿ ಲಾಭದ ಸಮಾಚಾರ ದೊರೆಯುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯದ ಪ್ರಶಂಸೆ ಮಾಡುತ್ತಾರೆ. ಸ್ತ್ರೀ ಮಿತ್ರರರಿಂದ ವಿಶೇಷ ಲಾಭವಿದೆ. ಆದಾಯ ವೃದ್ಧಿಸಲಿದೆ.

ಕರ್ಕ ರಾಶಿ

ವ್ಯಾಪಾರಿಗಳು ಮತ್ತು ಉದ್ಯೋಗಿಗಳಿಗೆ ಲಾಭ ಹಾಗೂ ಪದೋನ್ನತಿಯ ಸಾಧ್ಯತೆ ಇದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸರ್ಕಾರಿ ಲಾಭಗಳು ದೊರೆಯಲಿವೆ. ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗಲಿದೆ. ಆರ್ಥಿಕ ಲಾಭ ದೊರೆಯಲಿದೆ.

ಸಿಂಹ ರಾಶಿ

ನಿಮ್ಮ ಅಹಂನಿಂದಾಗಿ ಇತರರ ಕೋಪಕ್ಕೆ ತುತ್ತಾಗುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆತುರವಾಗಿ ನಿರ್ಧಾರ ತೆಗೆದುಕೊಳ್ಳುವುದರಿಂದ ನಷ್ಟವಾಗುವ ಸಾಧ್ಯತೆ ಇದೆ. ನೌಕರಿ ಮತ್ತು ವ್ಯಾಪಾರದಲ್ಲಿ ಅಡೆತಡೆಗಳು ಎದುರಾಗಲಿವೆ.

ಕನ್ಯಾ ರಾಶಿ

ಇಂದು ಯಾವುದೇ ಹೊಸ ಕಾರ್ಯ ಕೈಗೆತ್ತಿಕೊಳ್ಳಬೇಡಿ. ಹೊರಗಿನ ಆಹಾರ ಸೇವನೆಯಿಂದ ಆರೋಗ್ಯ ಹದಗೆಡಬಹುದು. ಕೋಪವನ್ನು ನಿಯಂತ್ರಿಸಿಕೊಳ್ಳಿ. ಮೌನವಾಗಿರುವುದು ಉತ್ತಮ. ಅಧಿಕ ಹಣ ಖರ್ಚಾಗಲಿದೆ.

ತುಲಾ ರಾಶಿ

ಪಾಲುದಾರರೊಂದಿಗೆ ಲಾಭದ ಮಾತುಕತೆ ನಡೆಸಲಿದ್ದೀರಿ. ಸುಂದರ ವಸ್ತ್ರ, ಆಭರಣ ಖರೀದಿಸಲಿದ್ದೀರಿ. ವಾಹನ ಸುಖ ಪ್ರಾಪ್ತಿಯಾಗಲಿದೆ. ಮಿತ್ರರೊಂದಿಗೆ ಸುತ್ತಾಡಲಿದ್ದೀರಿ.

ವೃಶ್ಚಿಕ ರಾಶಿ

ನಿರ್ಧಾರಿತ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳ ತಂತ್ರ ನಿಷ್ಫಲವಾಗಲಿದೆ. ತಾಯಿಯಿಂದ ಲಾಭವಿದೆ.

ಧನು ರಾಶಿ

ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಸಾರ್ವಜನಿಕ ಜೀವನದಲ್ಲಿ ಅಪಕೀರ್ತಿ, ನಿಮ್ಮ ಗೌರವ ಪ್ರತಿಷ್ಠೆಗೆ ಧಕ್ಕೆ ಉಂಟಾಗಲಿದೆ. ಸರಿಯಾದ ವಿಶ್ರಾಂತಿ ಮತ್ತು ನಿದ್ದೆಯಿಲ್ಲದೆ ಆರೋಗ್ಯ ಹದಗೆಡಲಿದೆ. ಸ್ಪೂರ್ತಿಯ ಅಭಾವ ಉಂಟಾಗಲಿದೆ.

ಮಕರ ರಾಶಿ

ಇಂದು ಅವಶ್ಯಕ ನಿರ್ಣಯಗಳನ್ನು ತೆಗೆದುಕೊಳ್ಳಲು ವೈಚಾರಿಕತೆ ಮತ್ತು ದೃಢತೆಗೆ ಹೆಚ್ಚು ಆದ್ಯತೆ ನೀಡಿ. ಮಿತ್ರರು ಮತ್ತು ಪ್ರೀತಿ ಪಾತ್ರರನ್ನು ಭೇಟಿಯಾಗಲಿದ್ದೀರಿ. ಮನಸ್ಸಿಗೆ ಆನಂದ ದೊರೆಯಲಿದೆ. ಸಣ್ಣದೊಂದು ಪ್ರವಾಸ ಆಯೋಜನೆಯಾಗಲಿದೆ.

ಕುಂಭ ರಾಶಿ

ನೆರೆಹೊರೆಯವರು ಮತ್ತು ಒಡಹುಟ್ಟಿದವರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ. ಮನೆಗೆ ಸ್ನೇಹಿತರ ಆಗಮನವಾಗಲಿದೆ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಭಾಗ್ಯವೃದ್ಧಿಯಾಗಲಿದೆ.

ಮೀನ ರಾಶಿ

ಖರ್ಚು ಮತ್ತು ಮಾತಿನ ಮೇಲೆ ನಿಯಂತ್ರಣವಿರಲಿ. ವಾದ ವಿವಾದ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ಕೊಡು ಕೊಳ್ಳುವಿಕೆಯಲ್ಲಿ ಜಾಗರೂಕರಾಗಿರಿ. ಕುಟುಂಬ ಸದಸ್ಯರೊಂದಿಗೆ ಜಗಳವಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...