alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಏಕಾಗ್ರತೆಯ ಕೊರತೆಯಿಂದ ದುಃಖಿತರಾಗುತ್ತೀರಿ. ಶಾರೀರಿಕವಾಗಿ ವ್ಯಗ್ರತೆಯ ಅನುಭವವಾಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಜಾಗರೂಕರಾಗಿರಿ.

ವೃಷಭ ರಾಶಿ

ವ್ಯಾವಹಾರಿಕ ಕೆಲಸಗಳನ್ನು ಮುಗಿಸಲು ಇಂದು ಶುಭದಿನ. ಹಿರಿಯರು ಮತ್ತು ಮಿತ್ರರನ್ನು ಭೇಟಿಯಾಗಲಿದ್ದೀರಿ. ಹೊಸ ಸ್ನೇಹಿತರು ಸಿಗಲಿದ್ದಾರೆ. ಮಕ್ಕಳ ಪ್ರಗತಿಯಿಂದ ಸಂತಸಗೊಳ್ಳಲಿದ್ದೀರಿ.

ಮಿಥುನ ರಾಶಿ

ವ್ಯಾಪಾರಿಗಳಿಗೆ ಇಂದು ಶುಭ ದಿನ. ವ್ಯಾಪಾರದಲ್ಲಿ ವೃದ್ಧಿ, ಯಶಸ್ಸು ಹಾಗೂ ಲಾಭ ದೊರೆಯಲಿದೆ. ತಂದೆ ಮತ್ತು ಹಿರಿಯರಿಂದ ಲಾಭವಾಗಲಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.

ಕರ್ಕ ರಾಶಿ

ದಿನದ ಆರಂಭದಲ್ಲೇ ಗೊಂದಲ ಮತ್ತು ಅಶಾಂತಿ ಇರುತ್ತದೆ. ಆಲಸ್ಯದ ಅನುಭವವಾಗಲಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದೃಷ್ಟ ನಿಮ್ಮ ಜೊತೆಗಿಲ್ಲ.

ಸಿಂಹ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಆಚಾರ-ವಿಚಾರಗಳಲ್ಲಿ ಸಂಯಮವಿರಲಿ. ಅನೈತಿಕ ಕಾರ್ಯಗಳಿಂದ ದೂರವಿರಿ. ಅಂದುಕೊಂಡ ಕೆಲಸಗಳು ಬೇಗನೆ ಕೈಗೂಡುವುದಿಲ್ಲ.

ಕನ್ಯಾ ರಾಶಿ

ಸಾಮಾಜಿಕ ಮತ್ತು ಕಲೆಯ ಕ್ಷೇತ್ರಗಳಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಲಿದೆ. ಈ ಕ್ಷೇತ್ರಗಳಲ್ಲಿ ಯಶಸ್ಸು ಕೂಡ ನಿಮ್ಮದಾಗುತ್ತದೆ. ವ್ಯಾಪಾರದಲ್ಲಿ ನಿಮ್ಮ ಪಾಲುದಾರಿಕೆ ಯಶಸ್ವಿಯಾಗುತ್ತದೆ.

ತುಲಾ ರಾಶಿ

ಇವತ್ತು ನಿಮಗೆ ಶುಭದಿನ. ಯಾವುದೇ ಕಾರ್ಯವನ್ನು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಮಾಡಲಿದ್ದೀರಿ. ಮನಸ್ಸನ್ನು ಶಾಂತವಾಗಿಡಿ. ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ.

ವೃಶ್ಚಿಕ ರಾಶಿ

ಇವತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿಸಲಿದೆ.

ಧನು ರಾಶಿ

ಇಂದು ಅತ್ಯಂತ ಸಮಾಧಾನವಾಗಿರಿ. ತಾಯಿಯ ಆರೋಗ್ಯದಲ್ಲಿ ಏರುಪೇರಾಗಲಿದೆ. ಕುಟುಂಬದಲ್ಲಿನ ನಕಾರಾತ್ಮಕ ವಾತಾವರಣ ನಿಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ.

ಮಕರ ರಾಶಿ

ಸಂಗಾತಿ ಜೊತೆಗಿನ ಒಡನಾಡ ಅತ್ಯಂತ ಮಧುರವಾಗಿರುತ್ತದೆ. ಮಿತ್ರರೊಂದಿಗೆ ಸುತ್ತಾಡಲು ತೆರಳಲಿದ್ದೀರಿ. ಒಡಹುಟ್ಟಿದವರು ಮತ್ತು ಸ್ನೇಹಿತರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ.

ಕುಂಭ ರಾಶಿ

ಖರ್ಚಿನ ಮೇಲೆ ನಿಯಂತ್ರಣ ಇರಲಿ. ಕೋಪವನ್ನು ಕೂಡ ನಿಯಂತ್ರಿಸಿಕೊಳ್ಳುವುದು ಅತ್ಯಂತ ಅವಶ್ಯಕ. ಯಾರ ಜೊತೆಗೂ ವಾದ-ವಿವಾದದಲ್ಲಿ ತೊಡಗಬೇಡಿ. ನಕಾರಾತ್ಮಕ ವಿಚಾರಗಳಿಂದ ದೂರವಿರಿ.

ಮೀನ ರಾಶಿ

ಇಂದು ನಿಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಕುಟುಂಬದಲ್ಲಿ ಸಂತಸ ತುಂಬಿರುತ್ತದೆ. ಕೆಲಸಗಳು ಯಶಸ್ವಿಯಾಗಲಿವೆ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಕಡೆಗೆ ಗಮನಹರಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...