alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಆರ್ಥಿಕ ಮತ್ತು ವೃತ್ತಿಪರವಾಗಿ ಇಂದು ಲಾಭದಾಯಕ ದಿನ. ದೀರ್ಘ ಸಮಯಕ್ಕಾಗಿ ಆರ್ಥಿಕ ಯೋಜನೆ ರೂಪಿಸಲಿದ್ದೀರಿ. ದೇಹ ಮತ್ತು ಮನಸ್ಸು ಆರೋಗ್ಯವಾಗಿರುತ್ತದೆ. ಮಿತ್ರರು ಮತ್ತು ಕುಟುಂಬ ಸದಸ್ಯರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ.

ವೃಷಭ ರಾಶಿ

ನಿಮ್ಮ ವಿಚಾರಗಳಲ್ಲಿನ ವೈಶಾಲ್ಯತೆ ಹಾಗೂ ಮಧುರ ಮಾತಿನಿಂದ ಜನರನ್ನು ಪ್ರಭಾವಿತಗೊಳಿಸುತ್ತೀರಿ. ಜನರೊಂದಿಗೆ ಸೌಹಾರ್ದಪೂರ್ಣ ಸಂಬಂಧವಿರುತ್ತದೆ. ಬೌದ್ಧಿಕ ಚರ್ಚೆ ಅಥವಾ ವಾದ-ವಿವಾದದಲ್ಲಿ ಯಶಸ್ಸು ಸಿಗಲಿದೆ.

ಮಿಥುನ ರಾಶಿ

ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಗೊಂದಲ ಉಂಟಾಗುತ್ತದೆ. ತಾಯಿ ಮತ್ತು ಸ್ತ್ರೀಯರ ವಿಚಾರದಲ್ಲಿ ಹೆಚ್ಚು ಸಂವೇದನಾಶೀಲರಾಗಿರುತ್ತೀರಾ. ಅಧಿಕ ಆಲೋಚನೆಯಿಂದ ಮಾನಸಿಕವಾಗಿ ಆಯಾಸದ ಅನುಭವವಾಗುತ್ತದೆ.

ಕರ್ಕ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭ ದಿನ. ಮಿತ್ರರು ಮತ್ತು ಸಂಬಂಧಿಕರ ಭೇಟಿಯಿಂದ ಖುಷಿಯಾಗಿರುತ್ತೀರಿ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಸಹೋದರರನ್ನು ಭೇಟಿಯಾಗಲಿದ್ದೀರಿ.

ಸಿಂಹ ರಾಶಿ

ಸ್ನೇಹಿತರಿಂದ ಶುಭ ಸಮಾಚಾರ ದೊರೆಯಲಿದೆ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಉತ್ತಮ ಭೋಜನ ಪ್ರಾಪ್ತಿಯಾಗುತ್ತದೆ. ನಿಮ್ಮ ಮಾತುಗಳಿಂದ್ಲೇ ಇತರರ ಮನ ಗೆಲ್ಲಲಿದ್ದೀರಿ.

ಕನ್ಯಾ ರಾಶಿ

ವೈಚಾರಿಕ ಸಮೃದ್ಧಿಯಿಂದ ನಿಮಗೆ ಲಾಭವಾಗಲಿದೆ. ಮಧುರ ಸಂಬಂಧಗಳು ಸೃಷ್ಟಿಯಾಗಲಿವೆ. ಇದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ವೃತ್ತಿಪರವಾಗಿ ನಿಮಗೆ ಇಂದು ಲಾಭದಾಯಕ ದಿನ.

ತುಲಾ ರಾಶಿ

ಮಾತು ಮತ್ತು ವ್ಯವಹಾರದ ಮೇಲೆ ನಿಯಂತ್ರಣ ಇರಲಿ. ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಪರೋಪಕಾರಕ್ಕೆ ಪ್ರತಿಯಾಗಿ ನಿಮಗೂ ಉಪಕಾರ ದೊರೆಯಬಹುದು. ಆದಾಯಕ್ಕೆ ಹೋಲಿಸಿದ್ರೆ ಖರ್ಚು ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ

ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಪತ್ನಿ ಮತ್ತು ಪುತ್ರನಿಂದ ಶುಭ ಸಮಾಚಾರ ದೊರೆಯಲಿದೆ. ಮಂಗಳ ಕಾರ್ಯಗಳು ನೆರವೇರಲಿವೆ. ವಿವಾಹ ಯೋಗ ಕೂಡಿ ಬರಲಿದೆ.

ಧನು ರಾಶಿ

ಆರ್ಥಿಕ ಮತ್ತು ವ್ಯಾವಹಾರಿಕ ಕೆಲಸಗಳಿಗೆ ಇಂದು ಶುಭ ದಿನ. ನೀವು ಕೈಗೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಲಿವೆ. ಇಂದು ಪರೋಪಕಾರಿ ಭಾವನೆ ನಿಮ್ಮಲ್ಲಿ ಜಾಗೃತವಾಗುತ್ತದೆ.

ಮಕರ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಬೌದ್ಧಿಕ ಕಾರ್ಯಗಳಲ್ಲಿ ಹೊಸ ಹೊಸ ಚಿಂತನೆಗಳು ಮೂಡಲಿವೆ. ಲೇಖನ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ರಚನಾತ್ಮಕತೆ ಹೆಚ್ಚಾಗಲಿದೆ.

ಕುಂಭ ರಾಶಿ

ನಕಾರಾತ್ಮಕ ಆಲೋಚನೆಯಿಂದ ಮನಸ್ಸು ಹತಾಶವಾಗಲಿದೆ. ಮಾನಸಿಕ ಉದ್ವೇಗ ಮತ್ಉ ಕೋಪ ಹೆಚ್ಚಾಗಲಿದೆ. ಖರ್ಚು ಹೆಚ್ಚಾಗಬಹುದು. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡಲ್ಲಿ ಮನೆಯಲ್ಲಿ ಜಗಳ ತಪ್ಪಿಸಬಹುದು.

ಮೀನ ರಾಶಿ

ಇವತ್ತು ಸುಖ-ಶಾಂತಿಯಿಂದ ದಿನ ಕಳೆಯಲಿದ್ದೀರಿ. ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿದೆ. ದಾಂಪತ್ಯ ಜೀವನದಲ್ಲಿ ಪತಿ-ಪತ್ನಿ ಮಧ್ಯೆ ನಿಕಟತೆಯ ಅನುಭವವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...