alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಆರ್ಥಿಕ ಮತ್ತು ವ್ಯವಹಾರಿಕವಾಗಿ ಇವತ್ತು ಲಾಭದಾಯಕ ದಿನ. ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ. ದೀರ್ಘಾವಧಿಗೆ ಆರ್ಥಿಕ ಯೋಜನೆ ರೂಪಿಸಲಿದ್ದೀರಿ. ಶರೀರ ಮತ್ತು ಮನಸ್ಸು ಉಲ್ಲಸಿತವಾಗಿರಲಿದೆ.

ವೃಷಭ ರಾಶಿ

ನಿಮ್ಮ ವಿಚಾರ, ವಿಮರ್ಷೆ ಮತ್ತು ಮಾತಿನ ಮೋಡಿ ಇತರರನ್ನು ಆಕರ್ಷಿಸಲಿದೆ. ಜನರೊಂದಿಗೆ ಸೌಹಾರ್ದ ಸಂಬಂಧ ಹೊಂದಲಿದ್ದೀರಿ. ಬೌದ್ಧಿಕ ಚರ್ಚೆ, ವಾದ-ವಿವಾದದಲ್ಲಿ ಜಯ ಸಿಗಲಿದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ.

ಮಿಥುನ ರಾಶಿ

ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತದೆ. ತಾಯಿ ಮತ್ತು ಸ್ತ್ರೀಯರ ವಿಚಾರದಲ್ಲಿ ಹೆಚ್ಚು ಸಂವೇದನಾಶೀಲರಾಗಿರುತ್ತೀರಿ. ಮಾನಸಿಕವಾಗಿ ಆಯಾಸ ಕಾಡಬಹುದು. ನಿದ್ದೆಯ ಕೊರತೆಯಿಂದ ಆಲಸ್ಯ ಉಂಟಾಗುತ್ತದೆ.

ಕರ್ಕ ರಾಶಿ

ಹೊಸ ಕಾರ್ಯದ ಆರಂಭಕ್ಕೆ ಇಂದು ಶುಭ ದಿನ. ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಿಂದ ಖುಷಿಯಾಗಿರುತ್ತೀರಿ. ಸಣ್ಣ ಪ್ರವಾಸ ಯೋಗವಿದೆ. ಪ್ರಿಯ ವ್ಯಕ್ತಿ ಜೊತೆಗೆ ಸೇರಿ ಮನಸ್ಸು ರೋಮಾಂಚಿತಗೊಳ್ಳಲಿದೆ. ಆರ್ಥಿಕ ಲಾಭ ಹಾಗೂ ಸಮಾಜದಲ್ಲಿ ಗೌರವ ಸಿಗಲಿದೆ.

ಸಿಂಹ ರಾಶಿ

ದೂರದಲ್ಲಿರುವ ಸ್ನೇಹಿತರು ಮತ್ತು ಸಂಬಂಧಿಗಳೊಂದಿಗಿನ ಸಂದೇಶ ವ್ಯವಹಾರದಿಂದ ಲಾಭವಾಗಲಿದೆ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ. ಒಳ್ಳೆ ಭೋಜನ ಸಿಗಲಿದೆ. ನಿರ್ಧಾರಿತ ಕೆಲಸದಲ್ಲಿ ಜಯ ಸಿಗಲಿದೆ. ಸ್ತ್ರೀ ಮಿತ್ರರ ಸಹಕಾರ ದೊರೆಯುತ್ತದೆ.

ಕನ್ಯಾ ರಾಶಿ

ವೈಚಾರಿಕ ಸಮೃದ್ಧಿ ಮತ್ತು ಮೃದು ಮಾತುಗಳಿಂದ ಲಾಭವಾಗುತ್ತದೆ. ಸೌಹಾರ್ದಪೂರ್ಣ ಸಂಬಂಧದ ಮೂಲಕ ನಿಮ್ಮ ಕೆಲಸಗಳನ್ನು ಸುಗಮವಾಗಿಸಿಕೊಳ್ಳುತ್ತೀರಿ. ಉದ್ಯಮದಲ್ಲೂ ಇಂದು ಲಾಭದಾಯಕವಾದ ದಿನ. ಆರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ

ಮಾತು ಮತ್ತು ವ್ಯವಹಾರದಲ್ಲಿ ಸಂಯಮವಿರಲಿ. ಇತರರು ಅಥವಾ ಕುಟುಂಬದವರೊಂದಿಗೆ ತೀವ್ರ ವಾದ-ವಿವಾದ ನಡೆಯುವ ಸಾಧ್ಯತೆ ಇದೆ. ಪರೋಪಕಾರಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಖರ್ಚು ಹೆಚ್ಚಲಿದೆ, ಆರೋಗ್ಯದ ಬಗ್ಗೆ ಗಮನವಿರಲಿ.

ವೃಶ್ಚಿಕ ರಾಶಿ

ಗೃಹಸ್ಥ ಜೀವದಲ್ಲಿ ಸುಖ ಶಾಂತಿ ನೆಮ್ಮದಿ ಸಿಗಲಿದೆ. ಪತ್ನಿ ಮತ್ತು ಪುತ್ರರಿಂದ ಶುಭ ಸಮಾಚಾರ ದೊರೆಯಲಿದೆ. ಮಂಗಳ ಕಾರ್ಯದಲ್ಲಿ ತೊಡಗುತ್ತೀರಿ. ವಿವಾಹ ಯೋಗವಿದೆ. ನೌಕರಿಯಲ್ಲಿ ಉತ್ತಮ ಅವಕಾಶ ನಿಮ್ಮದಾಗಲಿದೆ, ಆದಾಯ ವೃದ್ಧಿಸಲಿದೆ.

ಧನು ರಾಶಿ

ಆರ್ಥಿಕ ಯೋಜನೆ ಮತ್ತು ವ್ಯಾಪಾರ ವಿಸ್ತರಣೆಗೆ ಶುಭ ದಿನ. ಅಂದುಕೊಂಡ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಪರೋಪಕಾರದ ಭಾವನೆ ಮೂಡಲಿದೆ. ಮನರಂಜನೆಯಲ್ಲಿ ಕಾಲ ಕಳೆಯಲಿದ್ದೀರಿ. ನೌಕರಿ ಹಾಗೂ ಉದ್ಯಮದಲ್ಲಿ ಪದೋನ್ನತಿಯ ಯೋಗವಿದೆ.

ಮಕರ ರಾಶಿ

ಇವತ್ತಿನ ದಿನ ನಿಮಗೆ ಮಿಶ್ರ ಫಲ ತಂದುಕೊಡಲಿದೆ. ಬೌದ್ಧಿಕ ಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತೀರಿ. ಲೇಖನ ಹಾಗೂ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಸೃಜನಾತ್ಮಕತೆ ನಿಮ್ಮಲ್ಲಿ ಮೂಡಲಿದೆ.

ಕುಂಭ ರಾಶಿ

ನಕಾರಾತ್ಮಕ ಯೋಚನೆಯಿಂದ ಮನಸ್ಸು ಹತಾಶವಾಗುತ್ತದೆ. ಮಾನಸಿಕ ಉದ್ವೇಗ ಮತ್ತು ಕೋಪ ಸಹ ಹೆಚ್ಚಾಗಲಿದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತವಿರಲಿ. ಮನೆಯಲ್ಲಿ ಜಗಳವಾಗದಂತೆ ಎಚ್ಚರ ವಹಿಸಿ.

ಮೀನ ರಾಶಿ

ಸುಖ-ಶಾಂತಿಯಿಂದ ಇವತ್ತಿನ ದಿನ ಕಳೆಯಲಿದೆ. ಉದ್ಯಮಿಗಳಿಗೆ ಪಾಲುದಾರಿಕೆ ಮಾಡಿಕೊಳ್ಳಲು ಸುಸಮಯ. ಪತಿ-ಪತ್ನಿಯ ಮಧ್ಯೆ ದಾಂಪತ್ಯ ಜೀವನದಲ್ಲಿ ನಿಕಟತೆ ಹೆಚ್ಚಾಗಲಿದೆ. ಮಿತ್ರರು ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...