alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಕೊಂಚ ಅನಾರೋಗ್ಯ ಹಾಗೂ ಆತಂಕ ಕಾಡುತ್ತದೆ. ದೇಹದಲ್ಲಿ ಆಯಾಸ ಮತ್ತು ಆಲಸ್ಯ ಉಂಟಾಗಲಿದೆ. ಮನಸ್ಸು ಸಂಪೂರ್ಣ ಅಶಾಂತಗೊಳ್ಳಲಿದೆ.

ವೃಷಭ ರಾಶಿ

ಇವತ್ತು ಸಮಾಧಾನದಿಂದ ಇರುವುದು ಒಳಿತು. ಯಾವುದೇ ರೀತಿಯ ಹೊಸ ಕಾರ್ಯವನ್ನು ಆರಂಭಿಸಬೇಡಿ. ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಊಟ-ತಿಂಡಿ ಬಗ್ಗೆ ಹೆಚ್ಚಿನ ಗಮನವಹಿಸಿ.

ಮಿಥುನ ರಾಶಿ

ಇಂದು ಮೋಜು-ಮಸ್ತಿಯಲ್ಲಿ ದಿನ ಕಳೆಯಲಿದ್ದೀರಿ. ಪ್ರಿಯ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ಮಿತ್ರರು ಮತ್ತು ಆತ್ಮೀಯರೊಂದಿಗೆ ಮನರಂಜನಾತ್ಮಕ ಪ್ರವಾಸ ಕೈಗೊಳ್ಳಲಿದ್ದೀರಿ. ವಾಹನ ಸುಖ ಪ್ರಾಪ್ತಿಯಾಗಲಿದೆ.

ಕರ್ಕ ರಾಶಿ

ಇವತ್ತು ನಿಮಗೆ ಶುಭ ದಿನ. ಮನೆಯಲ್ಲಿ ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ಸುಖಮಯ ಘಟನೆಗಳು ನಡೆಯಲಿವೆ. ಕೈಗೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಲಿವೆ. ಆರೋಗ್ಯ ಉತ್ತಮವಾಗಿರುತ್ತದೆ.

ಸಿಂಹ ರಾಶಿ

ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಹೆಚ್ಚು ಕಲ್ಪನಾಶೀಲರಾಗಿರುತ್ತೀರಿ. ಪ್ರಿಯತಮನೊಂದಿಗಿನ ಭೇಟಿಯಿಂದ ಶುಭ ಫಲವಿದೆ. ದಿನವಿಡೀ ಪ್ರಸನ್ನರಾಗಿರುತ್ತೀರಿ. ಮಕ್ಕಳ ಪ್ರಗತಿಯ ಬಗ್ಗೆ ಸಮಾಚಾರ ಸಿಗಲಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಶುಭ ಸಮಯ.

ಕನ್ಯಾ ರಾಶಿ

ಇವತ್ತು ನಿಮಗೆ ಸಮಯ ಅನುಕೂಲಕರವಾಗಿಲ್ಲ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಹದಗೆಡಬಹುದು. ಹತ್ತಾರು ಸಮಸ್ಯೆಗಳಿಂದಾಗಿ ಮನಸ್ಸು ವ್ಯಾಕುಲಗೊಳ್ಳುತ್ತದೆ. ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು.

ತುಲಾ ರಾಶಿ

ಇವತ್ತು ನಿಮಗೆ ಶುಭದಿನ. ಧನಲಾಭ ಯೋಗವಿದೆ. ವಿದೇಶದಿಂದ ಒಳ್ಳೆ ಸಮಾಚಾರ ಬರುತ್ತದೆ. ವ್ಯಾವಹಾರಿಕ ಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ಹೊಸ ಕಾರ್ಯವನ್ನು ಆರಂಭಿಸಬಹುದು.

ವೃಶ್ಚಿಕ ರಾಶಿ

ಇಂದು ಮಿಶ್ರ ಫಲವಿದೆ. ವ್ಯರ್ಥ ಖರ್ಚನ್ನು ನಿಯಂತ್ರಿಸಿ. ಕುಟುಂಬದಲ್ಲಿ ಜಗಳವಾಗದಂತೆ ನೋಡಿಕೊಳ್ಳಿ. ಕುಟುಂಬ ಸದಸ್ಯರ ನಡುವಣ ತಪ್ಪು ತಿಳುವಳಿಕೆಯನ್ನು ದೂರ ಮಾಡಿ.

ಧನು ರಾಶಿ

ಇಂದು ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ. ನಿರ್ಧಾರಿತ ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಆರ್ಥಿಕ ಲಾಭ ದೊರೆಯಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ

ಇಂದು ನೀವು ಅತ್ಯಂತ ಸಮಾಧಾನಚಿತ್ತರಾಗಿರುವುದು ಒಳಿತು. ವೃತ್ತಿಪರ ಕಾರ್ಯಗಳಲ್ಲಿ ಸಹಕಾರ ದೊರೆಯಲಿದೆ. ಖರ್ಚು ಸಾಮಾನ್ಯಕ್ಕಿಂತಲೂ ಹೆಚ್ಚಾಗಿರುತ್ತದೆ.

ಕುಂಭ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭ ದಿನ. ನೌಕರಿ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಲಕ್ಷ್ಮಿಯ ಕೃಪೆ ಇವತ್ತು ನಿಮ್ಮ ಮೇಲಿರುತ್ತದೆ.

ಮೀನ ರಾಶಿ

ಇವತ್ತು ನಿಮಗೆ ಶುಭ ಫಲವಿದೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರುತ್ತದೆ. ದಿನವಿಡೀ ಪ್ರಸನ್ನರಾಗಿರುತ್ತೀರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...