alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮ್ಮ ಮೇಲೆ ಲಕ್ಷ್ಮಿಯ ಕೃಪೆ ಇರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು ಮತ್ತು ಕೀರ್ತಿ ವೃದ್ಧಿಸುತ್ತದೆ. ವ್ಯಾಪಾರದಲ್ಲಿ ಕೂಡ ಅಧಿಕ ಲಾಭ ಸಿಗುವ ಸಾಧ್ಯತೆ ಇದೆ.

ವೃಷಭ ರಾಶಿ

ಇವತ್ತು ನಿಮಗೆ ಶುಭ ದಿನ. ವ್ಯಾಪಾರದಲ್ಲಿ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ. ನಿಮ್ಮ ಕಾರ್ಯಕ್ಕೆ ತಕ್ಕ ಪ್ರಶಂಸೆ ಕೂಡ ದೊರೆಯುತ್ತದೆ.

ಮಿಥುನ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಅತಿಯಾದ ಮಾತು ಜಗಳಕ್ಕೆ ಕಾರಣವಾಗಬಹುದು. ಪ್ರತಿಸ್ಪರ್ಧಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಾದ-ವಿವಾದ ಅಥವಾ ಚರ್ಚೆಯಲ್ಲಿ ತೊಡಗಬೇಡಿ.

ಕರ್ಕ ರಾಶಿ

ಅನೈತಿಕ ಕಾರ್ಯಗಳಿಂದ ದೂರವಿರಿ. ನಿಷೇಧಾತ್ಮಕ ವಿಚಾರ ಮನಸ್ಸಿನಲ್ಲಿ ಬರದಂತೆ ಎಚ್ಚರ ವಹಿಸಿ. ಮಾತಿನ ಮೇಲೆ ಸಂಯಮ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ.

ಸಿಂಹ ರಾಶಿ

ಸಾಹಿತ್ಯದ ದೃಷ್ಟಿಯಿಂದ ಇಂದು ಅತ್ಯಂತ ಪ್ರಸನ್ನರಾಗಿ, ಆನಂದದಿಂದ ಇರುತ್ತೀರಿ. ಮಿತ್ರರು ಮತ್ತು ಸಂಬಂಧಿಕರೊಂದಿಗೆ ಸುತ್ತಾಡುವ ಅವಕಾಶ ಸಿಗಲಿದೆ. ಆನಂದದಾಯಕ ಪ್ರವಾಸವನ್ನೂ ಆಯೋಜನೆ ಮಾಡಲಿದ್ದೀರಿ.

ಕನ್ಯಾ ರಾಶಿ

ನಿಮ್ಮ ಸ್ವಭಾವ ಹೆಚ್ಚು ಸಂವೇದನಾಶೀಲತೆಯಿಂದ ಕೂಡಿರುತ್ತದೆ. ಕೆಲಸದ ಯಶಸ್ಸಿನಿಂದ ಮನಸ್ಸು ಪ್ರಫುಲ್ಲಿತವಾಗಿರುತ್ತದೆ. ಯಶಸ್ಸು ಮತ್ತು ಕೀರ್ತಿ ವೃದ್ಧಿಸಲಿದೆ.

ತುಲಾ ರಾಶಿ

ಬೌದ್ಧಿಕ ಶಕ್ತಿಯಿಂದಾಗಿ ಬರವಣಿಗೆ ಮತ್ತು ಇತರ ಸೃಜನಾತ್ಮಕ ಕಾರ್ಯಗಳಲ್ಲಿ ಮುಂದುವರಿಯಲಿದ್ದೀರಿ. ಆದ್ರೆ ಮಾನಸಿಕವಾಗಿ ಚಿಂತೆ ಹೆಚ್ಚಾಗಿರುತ್ತದೆ, ಮಾನಸಿಕ ಆರೋಗ್ಯ ಏರುಪೇರಾಗಬಹುದು.

ವೃಶ್ಚಿಕ ರಾಶಿ

ಇಂದು ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಹಠಮಾರಿತನವನ್ನು ತ್ಯಜಿಸಿ ಮುಂದುವರಿಯಲಿದ್ದೀರಿ. ಅನೇಕ ಸಮಸ್ಯೆಗಳು ಕೂಡ ಎದುರಾಗಲಿವೆ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಲಿದ್ದೀರಿ. ಮಿತ್ರರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ.

ಮಕರ ರಾಶಿ

ಇಂದು ಹೆಚ್ಚು ವಾದ-ವಿವಾದದಲ್ಲಿ ತೊಡಗಬೇಡಿ. ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚಾಗಲಿದೆ. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ, ಇಲ್ಲದಿದ್ದರೆ ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು.

ಕುಂಭ ರಾಶಿ

ಇಂದು ಆಧ್ಯಾತ್ಮಿಕ ಕಾರ್ಯಗಳತ್ತ ಒಲವು ಮೂಡಲಿದೆ. ನಕಾರಾತ್ಮಕ ವಿಷಯಗಳಿಗೆ ಮಹತ್ವ ನೀಡಬೇಡಿ. ಮಾನಸಿಕವಾಗಿ ಆರೋಗ್ಯವಾಗಿರಲು ಪ್ರಯತ್ನಿಸಿ. ದೇಹದ ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ

ಹಣಕಾಸಿನ ಕೊಡು-ಕೊಳ್ಳುವಿಕೆ, ಆಸ್ತಿ ಅಥವಾ ಮನೆ ಖರೀದಿಯಲ್ಲಿ ಅತ್ಯಂತ ಜಾಗರೂಕರಾಗಿರಿ. ಯಾವುದೇ ಕಾರ್ಯಗಳಲ್ಲಿ ವಿಘ್ನ ಎದುರಾಗಬಹುದು, ಎಚ್ಚರಿಕೆಯಿಂದ ಮುಂದಡಿ ಇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...