alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ನಿಮ್ಮ ತೀವ್ರವಾದಿ ಸ್ವಭಾವದ ಮೇಲೆ ಸಂಯಮ ಇಟ್ಟುಕೊಳ್ಳಿ. ಶಾರೀರಿಕ ಮತ್ತು ಮಾನಸಿಕ ಶಿಥಿಲತೆಯ ಅನುಭವವಾಗುತ್ತದೆ. ಅಧಿಕ ಪರಿಶ್ರಮದ ಹೊರತಾಗಿಯೂ ಅಲ್ಪ ಯಶಸ್ಸು ದೊರೆಯುತ್ತದೆ.

ವೃಷಭ ರಾಶಿ

ಇಂದು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದ ಕೊರತೆಯಾಗುವುದಿಲ್ಲ. ನಿಮ್ಮ ಅಪೇಕ್ಷೆಗೆ ತಕ್ಕಂತಹ ಪ್ರತಿಫಲ ದೊರೆಯುತ್ತದೆ. ತಂದೆಯಿಂದ ಲಾಭದಾಯಕ ಸಮಾಚಾರ ದೊರೆಯಬಹುದು.

ಮಿಥುನ ರಾಶಿ

ಹೊಸ ಯೋಜನೆಯನ್ನು ಆರಂಭಿಸಲು ಇಂದು ಶುಭ ದಿನ. ಸರ್ಕಾರದಿಂದ ಲಾಭ ದೊರೆಯುವ ಸಾಧ್ಯತೆ ಇದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಹಯೋಗ ದೊರೆಯುತ್ತದೆ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ಕರ್ಕ ರಾಶಿ

ನಕಾರಾತ್ಮಕ ಆಲೋಚನೆಗಳೊಂದಿಗೆ ಕೆಲಸ ಮಾಡಬೇಡಿ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ. ಮನಸ್ಸಿನಲ್ಲಿ ದುಖಃ ಮತ್ತು ಅಸಂತೋಷದ ಭಾವನೆಗಳು ಕಾಡಬಹುದು. ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸಿಂಹ ರಾಶಿ

ಇವತ್ತು ಹೆಚ್ಚು ಆತ್ಮವಿಶ್ವಾಸದಿಂದಿರುತ್ತೀರಿ. ಯಾವುದೇ ಕಾರ್ಯಕ್ಕಾದರೂ ತ್ವರಿತ ನಿರ್ಣಯ ತೆಗೆದುಕೊಳ್ಳಿ. ತಂದೆ ಮತ್ತು ಹಿರಿಯರಿಂದ ಲಾಭವಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚುತ್ತದೆ.

ಕನ್ಯಾ ರಾಶಿ

ನಿಮ್ಮ ಅಹಂಗೆ ಪೆಟ್ಟು ಬೀಳದಂತೆ, ಯಾರೊಂದಿಗೂ ಜಗಳವಾಗದಂತೆ ಎಚ್ಚರ ವಹಿಸಿ. ಶಾರೀರಿಕ ಶಿಥಿಲತೆ ಮತ್ತು ಮಾನಸಿಕ ಚಿಂತೆ ಹೆಚ್ಚಲಿದೆ. ಮಿತ್ರರು ಮತ್ತು ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.

ತುಲಾ ರಾಶಿ

ಇವತ್ತು ನಿಮಗೆ ಶುಭ ದಿನ. ವಿವಿಧ ಕ್ಷೇತ್ರಗಳಲ್ಲಾದ ಲಾಭದಿಂದ ಪ್ರಸನ್ನರಾಗುತ್ತೀರಿ. ಆದಾಯ ವೃದ್ಧಿಸಲಿದೆ. ಮಿತ್ರರಿಂದ ಲಾಭವಿದೆ. ಅವರಿಗಾಗಿಯೇ ಹಣವನ್ನೂ ಖರ್ಚು ಮಾಡಬೇಕಾಗಿ ಬರುತ್ತದೆ.

ವೃಶ್ಚಿಕ ರಾಶಿ

ಇಂದು ನಿಮಗೆ ಶುಭ ದಿನ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವಿದೆ. ನಿಮ್ಮ ಕೆಲಸದಿಂದ ಉಚ್ಛ ಅಧಿಕಾರಿಗಳು ಪ್ರಸನ್ನರಾಗುತ್ತಾರೆ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಧನು ರಾಶಿ

ಯಾವುದೇ ಯಾತ್ರೆ ಅಥವಾ ಪ್ರವಾಸ ಕೈಗೊಳ್ಳದೇ ಇರುವುದು ಒಳಿತು. ಶರೀರದಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ. ಆರೋಗ್ಯ ಕೊಂಚ ಏರುಪೇರಾಗಬಹುದು. ಮನಸ್ಸಿನಲ್ಲಿ ಚಿಂತೆ ಮತ್ತು ವ್ಯಾಕುಲತೆ ಉಂಟಾಗುತ್ತದೆ.

ಮಕರ ರಾಶಿ

ಇಂದು ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ವ್ಯಾವಹಾರಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ಊಟ ತಿಂಡಿ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ನಕಾರಾತ್ಮಕ ಭಾವನೆಗಳನ್ನು ಹೊಡೆದೋಡಿಸಿ.

ಕುಂಭ ರಾಶಿ

ಪ್ರೇಮ ಪ್ರಣಯಕ್ಕೆ ಇಂದು ಅನುಕೂಲಕರ ದಿನ. ಇವತ್ತು ಎಲ್ಲಾ ಕಾರ್ಯಗಳನ್ನೂ ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಪೂರ್ಣಗೊಳಿಸಲಿದ್ದೀರಿ. ಪ್ರವಾಸ ಮತ್ತು ಪರ್ಯಟನೆ ಕೈಗೊಳ್ಳುವ ಸಾಧ್ಯತೆ ಇದೆ.

ಮೀನ ರಾಶಿ

ಇವತ್ತು ನಿಮಗೆ ಶುಭ ದಿನ. ಆತ್ಮವಿಶ್ವಾಸ ಹೆಚ್ಚಲಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...