alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಿದೆಯಾ ಇಂದು ಅದೃಷ್ಟ…? ಯಾರಿಗೆ ಕಾದಿದೆ ದುರಾದೃಷ್ಟ…?

ಮೇಷ ರಾಶಿ

ಆನಂದ ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗ ಕೂಡಿ ಬರಲಿದೆ.

ವೃಷಭ ರಾಶಿ

ವ್ಯಾಪಾರಿ ವರ್ಗಕ್ಕೆ ಇಂದು ಶುಭ ದಿನ. ಆದಾಯ ವೃದ್ಧಿ ಜೊತೆಗೆ ಯಶಸ್ಸು ಕೂಡ ಸಿಗಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ತಂದೆ ಮತ್ತು ಹಿರಿಯರಿಂದ ಲಾಭವಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.

ಮಿಥುನ ರಾಶಿ

ಕುಟುಂಬ ಸದಸ್ಯರೊಂದಿಗೆ ಮನೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಮನೆಯ ರೂಪು ರೇಷೆ ಬದಲಾವಣೆ ಬಗ್ಗೆ ವಿಚಾರ-ವಿಮರ್ಷೆ ನಡೆಯಲಿದೆ.

ಕರ್ಕ ರಾಶಿ

ದಿನ ಅನುಕೂಲಕರವಾಗಿದೆ ಮತ್ತು ಲಾಭದಾಯಕವೂ ಹೌದು. ಹಿರಿಯ ಅಧಿಕಾರಿಗಳ ಕೃಪೆ ನಿಮ್ಮ ಮೇಲಿರುತ್ತದೆ. ಇದರಿಂದ ನಿಮ್ಮ ಪ್ರಗತಿಯ ಮಾರ್ಗ ನಿರ್ವಿಘ್ನವಾಗಿರಲಿದೆ.

ಸಿಂಹ ರಾಶಿ

ಇಂದು ಹೊಸ ಕಾರ್ಯವನ್ನು ಆರಂಭಿಸಲು ಶುಭ ದಿನ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊರಗಡೆ ಊಟ-ತಿಂಡಿ ಮಾಡಬೇಡಿ. ಇಂದು ನಿಮ್ಮಲ್ಲಿ ಕೋಪ ಮತ್ತು ವ್ಯಗ್ರತೆ ಹೆಚ್ಚಾಗಿರುತ್ತದೆ.

ಕನ್ಯಾ ರಾಶಿ

ಇಂದು ನಿಮ್ಮ ದಿನ ಮೋಜು-ಮಸ್ತಿಯಲ್ಲಿ ಕಳೆಯಲಿದೆ. ಮನೆಯಲ್ಲಿ ಶಾಂತವಾದ ವಾತಾವರಣವಿರುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುವುದಿಲ್ಲ.

ತುಲಾ ರಾಶಿ

ವ್ಯಾವಹಾರಿಕ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಪ್ರತಿಸ್ಪರ್ಧಿಗಳಿಗೂ ಹೆಚ್ಚು ಲಾಭವಾಗುತ್ತದೆ. ಪಾಲುದಾರರಿಂದ ಲಾಭವಿದೆ. ವಿದೇಶದಿಂದ ಶುಭ ಸಮಾಚಾರ ಬರಲಿದೆ.

ವೃಶ್ಚಿಕ ರಾಶಿ

ಇಂದು ಕೆಲಸದಲ್ಲಿ ಯಶಸ್ಸು ಸಿಗದೇ ಇರುವುದರಿಂದ ಹತಾಶೆ ನಿಮ್ಮನ್ನು ಆವರಿಸುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಸಂತಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ಚಿಂತಿತರಾಗಲಿದ್ದೀರಿ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಪ್ರತಿಕೂಲತೆಯ ಅನುಭವವಾಗಲಿದೆ. ನಿದ್ದೆಯ ಕೊರತೆಯಿಂದ ಆಲಸ್ಯ ಉಂಟಾಗುತ್ತದೆ. ಸ್ವಾದಿಷ್ಟ ಭೋಜನ ಹಾಗೂ ವಸ್ತ್ರಾಭರಣ ಯೋಗವಿದೆ.

ಮಕರ ರಾಶಿ

ಚಿಂತೆಯ ಕಾರ್ಮೋಡ ಸರಿಯಲಿದೆ, ಮನಸ್ಸು ಹಗುರವಾಗಲಿದೆ. ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ. ಯಶಸ್ಸು, ಕೀರ್ತಿ ಮತ್ತು ಆನಂದ ದೊರೆಯುತ್ತದೆ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಕುಂಭ ರಾಶಿ

ಮಾತಿನ ಮೇಲೆ ನಿಯಂತ್ರಣವಿರಲಿ. ಜಗಳ, ವಿವಾದದಲ್ಲಿ ತೊಡಗಬೇಡಿ. ಖರ್ಚನ್ನು ಕೂಡ ನಿಯಂತ್ರಿಸಿಕೊಳ್ಳಿ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಒಡಹುಟ್ಟಿದವರ ಸಹಕಾರ ಸಿಗುತ್ತದೆ.

ಮೀನ ರಾಶಿ

ಇಂದು ಪ್ರತಿ ವಿಷಯದಲ್ಲೂ ಅನುಕೂಲತೆಯ ಅನುಭವವಾಗಲಿದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸುಖಮಯ ಘಟನೆಗಳು ಜರುಗುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...