alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಮನಸ್ಸು ವ್ಯಗ್ರವಾಗಿರುತ್ತದೆ. ಅಧಿಕ ಸಂವೇದನಾಶೀಲರಾಗಿರುತ್ತೀರಾ. ಯಾರೊಂದಿಗೂ ವಾದ-ವಿವಾದದಲ್ಲಿ ತೊಡಗಬೇಡಿ. ಸ್ನೇಹಿತರೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಇದೇ ವಿಚಾರಕ್ಕೆ ದುಃಖಿತರಾಗಲಿದ್ದೀರಿ.

ವೃಷಭ ರಾಶಿ

ಆರ್ಥಿಕ ಆಯೋಜನೆಯಲ್ಲಿ ಸ್ವಲ್ಪ ಅಡೆತಡೆ ಉಂಟಾಗಬಹುದು. ಮಿತ್ರರನ್ನು ಭೇಟಿಯಾಗಲಿದ್ದೀರಿ. ವ್ಯಾಪಾರ ಕ್ಷೇತ್ರದಲ್ಲಿ ಸಹಯೋಗದ ವಾತಾವರಣವಿರುತ್ತದೆ. ಮಾನಸಿಕ ಸ್ವಾಸ್ಥ್ಯ ಚೆನ್ನಾಗಿರುತ್ತದೆ.

ಮಿಥುನ ರಾಶಿ

ದಿನದ ಆರಂಭದಲ್ಲಿ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬಸ್ಥರು ಮತ್ತು ಮಿತ್ರರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಖರ್ಚು ಹೆಚ್ಚಾಗದಂತೆ ಎಚ್ಚರ ವಹಿಸಿ.

ಕರ್ಕ ರಾಶಿ

ಇವತ್ತು ನಿಮ್ಮ ಆದಾಯ ಕಡಿಮೆ ಮತ್ತು ಖರ್ಚು ಹೆಚ್ಚಾಗಲಿದೆ. ಕಣ್ಣು ನೋವು ಕಾಣಿಸಿಕೊಳ್ಳಲಿದೆ. ಮಾತು ಮತ್ತು ವರ್ತನೆ ಮೇಲೆ ನಿಯಂತ್ರಣ ಇರಲಿ. ಮಧ್ಯಾಹ್ನದ ನಂತರ ಮನಸ್ಸು ಪರಿವರ್ತನೆಯಾಗಲಿದೆ.

ಸಿಂಹ ರಾಶಿ

ಇವತ್ತು ನಿಮ್ಮಲ್ಲಿ ಕೋಪ ಮತ್ತು ಆವೇಶ ಹೆಚ್ಚಾಗಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೂ ಕೇಡುಂಟು ಮಾಡಬಹುದು. ಕುಟುಂಬದವರೊಂದಿಗೂ ಕೋಪದಿಂದ ವರ್ತಿಸುತ್ತೀರಿ. ಮಧ್ಯಾಹ್ನದ ನಂತರ ಆರೋಗ್ಯ ಸುಧಾರಿಸಲಿದೆ.

ಕನ್ಯಾ ರಾಶಿ

ಬೆಳಗಿನ ಸಮಯ ಶುಭದಾಯಕವಾಗಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ. ಬಾಕಿ ವಸೂಲಿಯಾಗಲಿದೆ. ಕುಟುಂಬದಲ್ಲೂ ಆನಂದದ ವಾತಾವರಣವಿರಲಿದೆ. ಮಧ್ಯಾಹ್ನದ ನಂತರ ಪ್ರತಿಕೂಲ ಪರಿಸ್ಥಿತಿ ಎದುರಾಗಲಿದೆ.

ತುಲಾ ರಾಶಿ

ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಉತ್ಸಾಹದಿಂದ ಕೆಲಸ ಮಾಡಲಿದ್ದೀರಿ. ಪದೋನ್ನತಿ ದೊರೆಯಲಿದೆ. ಸರ್ಕಾರಿ ಕಾರ್ಯ ಸರಳವಾಗಿ ಮುಕ್ತಾಯವಾಗಲಿದೆ.

ವೃಶ್ಚಿಕ ರಾಶಿ

ಇಂದು ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳೊಂದಿಗೆ ವಾದ-ವಿವಾದಕ್ಕಿಳಿಯಬೇಡಿ. ವ್ಯಾಪಾರದಲ್ಲೂ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು.

ಧನು ರಾಶಿ

ಇಂದು ಸಮಾಧಾನದಿಂದಿರುವುದು ಒಳಿತು. ಕೋಪದಿಂದ ಹಾನಿಯಾಗಲಿದೆ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ವ್ಯಗ್ರರಾಗುತ್ತೀರಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ವರ್ತನೆ ನಕಾರಾತ್ಮಕವಾಗಿರುತ್ತದೆ.

ಮಕರ ರಾಶಿ

ಸಂಬಂಧಿಕರೊಂದಿಗೆ ಸುತ್ತಾಟ, ಭೋಜನ ಮಾಡಲಿದ್ದೀರಿ. ವಾಹನ ಸುಖ ದೊರೆಯಲಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ನಿಮ್ಮದಾಗುತ್ತದೆ. ಮಧ್ಯಾಹ್ನದ ನಂತರ ಅಧಿಕ ಹಣ ಖರ್ಚಾಗಲಿದೆ.

ಕುಂಭ ರಾಶಿ

ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸಾಮಾಜಿಕ ಗೌರವ, ಪ್ರತಿಷ್ಠೆ ಹೆಚ್ಚುತ್ತದೆ. ಮಧ್ಯಾಹ್ನದ ನಂತರ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದೀರಿ.

ಮೀನ ರಾಶಿ

ಕಲೆಯ ಬಗ್ಗೆ ಅಭಿರುಚಿ ಹೆಚ್ಚಲಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಪ್ರೀತಿಪಾತ್ರರ ಭೇಟಿ ಆನಂದದಾಯಕವಾಗಿರುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...