alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ತಾಯಿಯ ಆರೋಗ್ಯದ ಬಗ್ಗೆ ಆತಂಕ ಕಾಡಬಹುದು. ಆಸ್ತಿ, ಹಣಕಾಸಿಗೆ ಸಂಬಂಧಿಸಿದ ಯಾವುದೇ ಕಾರ್ಯವನ್ನು ಮಾಡಲು ಇವತ್ತಿನ ದಿನ ಅನುಕೂಲಕರವಾಗಿಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು, ಎಚ್ಚರವಿರಲಿ.

ವೃಷಭ ರಾಶಿ

ಇಂದು ರುಚಿಕರ ಭೋಜನ ದೊರೆಯುತ್ತದೆ. ತಾಯಿಯ ಜೊತೆಗಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ. ಕೌಟುಂಬಿಕ ಮತ್ತು ಆರ್ಥಿಕ ವಿಷಯಗಳ ಕಡೆಗೆ ಗಮನ ಕೊಡಿ.

ಮಿಥುನ ರಾಶಿ

ನೀವು ಕೈಗೊಂಡ ಯೋಜನೆಗಳಿಂದ ಆರಂಭದಲ್ಲಿ ನಷ್ಟವಾದ್ರೂ ನಂತರ ಯಶಸ್ಸು ದೊರೆಯುತ್ತದೆ. ಶುಭ ಚಿಂತಕರು ಮತ್ತು ಮಿತ್ರರನ್ನು ಭೇಟಿಯಾಗಲಿದ್ದೀರಿ. ವ್ಯಾಪಾರದಲ್ಲಿ ಉತ್ಸಾಹ ಮತ್ತು ಪ್ರಸನ್ನತೆಯ ಅನುಭವವಾಗಲಿದೆ.

ಕರ್ಕ ರಾಶಿ

ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ತನು ಮನ ಪ್ರಫುಲ್ಲವಾಗಿರಲಿದೆ. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಮಿತ್ರರಿಂದ ಸಂತೋಷ ದೊರೆಯುತ್ತದೆ. ಉಪಹಾರದ ಯೋಗವೂ ಇದೆ.

ಸಿಂಹ ರಾಶಿ

ನಿಮ್ಮ ಸಂವೇದನಶೀಲತೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಚಿಂತೆ ಕಾಡಬಹುದು. ಇದರಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹದಗೆಡಬಹುದು. ವ್ಯರ್ಥ ವಾದ ವಿವಾದದಿಂದ ದೂರವಿರಿ.

ಕನ್ಯಾ ರಾಶಿ

ಇಂದು ನಿಮಗೆ ಶುಭದಿನ. ಆರ್ಥಿಕ ಲಾಭದ ಯೋಗವೂ ಇದೆ. ಧನಪ್ರಾಪ್ತಿಯಾಗಬಹುದು. ಸ್ತ್ರೀ ಮಿತ್ರರಿಂದ ಲಾಭವಾಗುವ ಸಾಧ್ಯತೆ ಇದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಆದಾಯ ವೃದ್ಧಿಸಲಿದೆ.

ತುಲಾ ರಾಶಿ

ಇವತ್ತು ನಿಮಗೆ ಶುಭದಿನ. ಮನೆ ಮತ್ತು ಕಚೇರಿಯಲ್ಲಿ ಅನುಕೂಲಕರ ವಾತಾವರಣವಿರಲಿದೆ. ಉದ್ಯೋಗಿಗಳಿಗೆ ಪದೋನ್ನತಿಯ ಯೋಗವಿದೆ. ಕುಟುಂಬದಲ್ಲಿ ಹರ್ಷೋಲ್ಲಾಸ ತುಂಬಿರುತ್ತದೆ. ಗೃಹಸ್ಥ ಜೀವನವೂ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ

ನಿಮಗೆ ಇಂದು ಆಯಾಸ, ಆಲಸ್ಯ ಮತ್ತು ಮಾನಸಿಕ ಚಿಂತೆಯ ಅನುಭವವಾಗಲಿದೆ. ವ್ಯಾಪಾರದಲ್ಲಿ ವಿಘ್ನ ಎದುರಾಗಬಹುದು. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಅವರ ಆರೋಗ್ಯದ ಬಗ್ಗೆಯೂ ಆತಂಕ ಕಾಡುತ್ತದೆ. ಪ್ರತಿಸ್ಪರ್ಧಿಗಳೊಂದಿಗೆ ವಾದ ವಿವಾದ ಬೇಡ.

ಧನು ರಾಶಿ

ಇಂದು ನೀವು ಅತ್ಯಂತ ಸಮಾಧಾನದಿಂದ ಇರುವುದು ಒಳಿತು. ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಆರೋಗ್ಯ ಸಮಸ್ಯೆಗೆ ಹೊಸ ಚಿಕಿತ್ಸೆ ಆರಂಭಕ್ಕೂ ಉಚಿತ ಸಮಯವಲ್ಲ. ಅತಿಯಾದ ಸಂವೇದನಶೀಲತೆಯಿಂದ ಮನಸ್ಸು ವ್ಯಾಕುಲಗೊಳ್ಳಲಿದೆ.

ಮಕರ ರಾಶಿ

ಧನಲಾಭದ ಯೋಗವಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿತರಾಗುತ್ತೀರಿ. ಮನಸ್ಸು ಗೊಂದಲಮಯವಾಗಲಿದೆ. ಅಸ್ಥಿರತೆ ಕೂಡ ಉಂಟಾಗಬಹುದು. ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಕುಂಭ ರಾಶಿ

ಕೆಲಸದ ಯಶಸ್ಸಿಗೆ ಇಂದು ಅನುಕೂಲಕರ ದಿನ. ಇವತ್ತು ಮಾಡಿದ ಕಾರ್ಯಗಳಿಂದ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಗೌರವ ಕೂಡ ಹೆಚ್ಚಾಗಲಿದೆ. ಕುಟುಂಬದವರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ.

ಮೀನ ರಾಶಿ

ಇಂದು ಕಾಲ್ಪನಿಕ ಜಗತ್ತಿನಲ್ಲಿ ವಿಹರಿಸುತ್ತೀರಿ. ವಿದ್ಯಾರ್ಥಿಗಳಿಗೆ ಶುಭ ಸಮಯ. ಪ್ರಯಾಣಕ್ಕೆ ದಿನ ಅನುಕೂಲಕರವಾಗಿದೆ. ವರ್ತನೆಯಲ್ಲಿ ಸಂಯಮ ಕಾಪಾಡಿಕೊಳ್ಳುವುದು ಉತ್ತಮ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...