alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮಗೆ ಆಯಾಸ, ಆಲಸ್ಯ ಮತ್ತು ವ್ಯಗ್ರತೆಯ ಅನುಭವವಾಗಲಿದೆ. ಸ್ಪೂರ್ತಿಯ ಅಭಾವ ಉಂಟಾಗಬಹುದು. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಕೋಪ ಮಾಡಿಕೊಳ್ಳುತ್ತೀರಿ.

ವೃಷಭ ರಾಶಿ

ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಬಹುದು. ಯಾವುದೇ ಹೊಸ ಕಾರ್ಯವನ್ನು ಆರಂಭಿಸದೇ ಇರುವುದು ಒಳಿತು. ಊಟ – ತಿಂಡಿ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಿ.

ಮಿಥುನ ರಾಶಿ

ಇವತ್ತು ನಿಮಗೆ ಭರಪೂರ ಮನರಂಜನೆ ದೊರೆಯುತ್ತದೆ. ಮನಸ್ಸಿಗೆ ಮುದ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಆನಂದವಾಗಿ ದಿನ ಕಳೆಯಲಿದ್ದೀರಿ.

ಕರ್ಕ ರಾಶಿ

ಇವತ್ತು ನಿಮಗೆ ಆನಂದದಾಯಕ ದಿನ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ. ಅವಶ್ಯಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ.

ಸಿಂಹ ರಾಶಿ

ಇವತ್ತು ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಅಂದುಕೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಕನ್ಯಾ ರಾಶಿ

ಇವತ್ತು ನಿಮಗೆ ಸಮಯ ಅನುಕೂಲಕರವಾಗಿಲ್ಲ. ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಚಿಂತೆ ಕಾಡಬಹುದು. ಇದರಿಂದ ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆಯ ಅನುಭವವಾಗುತ್ತದೆ.

ತುಲಾ ರಾಶಿ

ಇವತ್ತು ನಿಮಗೆ ಅದೃಷ್ಟ ಖುಲಾಯಿಸಲಿದೆ. ಒಡಹುಟ್ಟಿದವರೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ಧಾರ್ಮಿಕ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ಅನಾವಶ್ಯಕ ಖರ್ಚುಗಳಿಗೆ ಬ್ರೇಕ್ ಹಾಕಿ. ಮಾತಿನ ಮೇಲೆ ಸಂಯಮ ಇಟ್ಟುಕೊಂಡರೆ ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ.

ಧನು ರಾಶಿ

ಇಂದು ನಿಗದಿತ ಕಾರ್ಯಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಲಕ್ಷ್ಮಿದೇವಿಯ ಕೃಪೆ ನಿಮ್ಮ ಮೇಲಿರುತ್ತದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುವುದರಿಂದ ಮನಸ್ಸು ಪ್ರಸನ್ನವಾಗಿರುತ್ತದೆ.

ಮಕರ ರಾಶಿ

ಇಂದು ಮನಸ್ಸು ವ್ಯಾಕುಲಗೊಳ್ಳಬಹುದು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಜಗಳವಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ನಿಮ್ಮ ಸಂತಸ ದ್ವಿಗುಣಗೊಳ್ಳಲಿದೆ. ಹೊಸ ಕಾರ್ಯದ ಆಯೋಜನೆ, ಮತ್ತು ಆರಂಭ ಎರಡೂ ಯಶಸ್ವಿಯಾಗಿ ನೆರವೇರಲಿದೆ.

ಮೀನ ರಾಶಿ

ಇವತ್ತು ನಿಮಗೆ ಶುಭ ಫಲವಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಸನ್ನರಾಗುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...