alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ಎಚ್ಚರಿಕೆಯಿಂದ ದಿನ ಕಳೆಯಿರಿ. ಶೀತ, ಕಫ ಮತ್ತು ಜ್ವರದಿಂದಾಗಿ ಆರೋಗ್ಯ ಹದಗೆಡಬಹುದು. ಆತ್ಮೀಯರು ದೂರವಾಗಲಿದ್ದಾರೆ. ದಾನ ಮಾಡಲು ಹಣ ಲೂಟಿ ಮಾಡಬೇಕಾದಂತಹ ಪರಿಸ್ಥಿತಿ ಬರಬಹುದು.

ವೃಷಭ ರಾಶಿ

ಇವತ್ತು ನಿಮ್ಮ ಮೇಲೆ ಗಣಪತಿಯ ಕೃಪೆ ಇರುತ್ತದೆ. ಪರಿವಾರದಲ್ಲಿ ಸುಖ ಶಾಂತಿ ನೆಲೆಸಲಿದೆ. ಸ್ನೇಹಿತರು ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ನಿಮ್ಮ ಆದಾಯ ಮತ್ತು ವ್ಯಾಪಾರದಲ್ಲಿ ವೃದ್ಧಿಯಾಗಲಿದೆ.

ಮಿಥುನ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ. ಉದ್ಯೋಗ ಮತ್ತು ಉದ್ಯಮದಲ್ಲಿ ನಿಮ್ಮ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತದೆ. ನಿಮ್ಮ ಕೆಲಸಕ್ಕೆ ಸಮಾಜದಲ್ಲಿ ಮನ್ನಣೆ ಸಿಗಲಿದೆ.

ಕರ್ಕ ರಾಶಿ

ಇಂದು ಭಗವಂತನ ಆರಾಧನೆಯಲ್ಲಿ ಸಮಯ ಕಳೆಯಲಿದ್ದೀರಿ. ಆಧ್ಯಾತ್ಮಿಕತೆಯತ್ತ ಒಲವು ಮೂಡಲಿದೆ. ತೀರ್ಥಕ್ಷೇತ್ರಕ್ಕೆ ತೆರಳುವ ಅವಕಾಶ ಕೂಡಿ ಬರಬಹುದು. ಶಾರೀರಿಕ ಮತ್ತು ಮಾನಸಿಕವಾಗಿ ಉತ್ಸಾಹದಿಂದಿರುತ್ತೀರಿ.

ಸಿಂಹ ರಾಶಿ

ಇವತ್ತಿನ ದಿನ ಪ್ರತಿಕೂಲತೆಯಿಂದ ಕೂಡಿರುತ್ತದೆ. ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಿ. ಹೋಟೆಲ್ ನಲ್ಲಿ ಊಟ ತಿಂಡಿ ತಿನ್ನಬೇಡಿ. ಖಾಯಿಲೆಗಳ ಚಿಕಿತ್ಸೆಗಾಗಿ ಹಣ ಖರ್ಚಾಗಲಿದೆ.

ಕನ್ಯಾ ರಾಶಿ

ಇವತ್ತಿನ ದಿನ ಅನುಕೂಲಕರವಾಗಿರಲಿದೆ. ಸಂಗಾತಿಯೊಂದಿಗಿನ ನಿಕಟ ಕ್ಷಣಗಳನ್ನು ಆನಂದಿಸಲಿದ್ದೀರಿ. ದಾಂಪತ್ಯ ಜೀವನ ಮಧುರತೆಯಿಂದ ಕೂಡಿರುತ್ತದೆ.

ತುಲಾ ರಾಶಿ

ಮನೆಯಲ್ಲಿ ನೆಮ್ಮದಿ ಮತ್ತು ಸಂತೋಷದ ವಾತಾವರಣವಿರುತ್ತದೆ. ಸುಖಕರ ಘಟನೆಗಳು ನಡೆಯಲಿವೆ. ಕೆಲಸದಲ್ಲಿ ಸಫಲತೆ ಮತ್ತು ಯಶಸ್ಸು ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಅವಶ್ಯಕ ಕೆಲಸಗಳಿಗಾಗಿ ಹಣ ಖರ್ಚಾಗಲಿದೆ.

ವೃಶ್ಚಿಕ ರಾಶಿ

ಆರೋಗ್ಯ ಕೊಂಚ ಏರುಪೇರಾಗಬಹುದು. ಮಕ್ಕಳ ಸಮಸ್ಯೆ ನಿಮ್ಮನ್ನು ಚಿಂತಿತರನ್ನಾಗಿ ಮಾಡುತ್ತದೆ. ಮಾನಹಾನಿಯಾಗುವ ಸಾಧ್ಯತೆ ಇದೆ. ಷೇರು ವ್ಯವಹಾರ ಮಾಡಬೇಡಿ.

ಧನು ರಾಶಿ

ತನು-ಮನದಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ. ಮನಸ್ಸಿನಲ್ಲಿ ಚಿಂತೆಯ ಭಾರ ಹೆಚ್ಚಾಗುತ್ತದೆ. ತಾಯಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕುಟುಂಬದ ವಾತಾವರಣ ಹದಗೆಡಲಿದೆ.

ಮಕರ ರಾಶಿ

ದಿನದ ಕೆಲಸಗಳಲ್ಲಿ ಅನುಕೂಲಕರದ ಪರಿಸ್ಥಿತಿ ನಿರ್ಮಾಣವಾಗಲಿದೆ. ಗೃಹಸ್ಥ ಜೀವನದ ಸಮಸ್ಯೆಗಳು ಪರಿಹಾರವಾಗಲಿವೆ. ಸಂಪತ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ನಿವಾರಣೆಯಾಗಲಿವೆ. ವ್ಯಾಪಾರದಲ್ಲಿ ಆರ್ಥಿಕ ಲಾಭವಾಗಲಿದೆ.

ಕುಂಭ ರಾಶಿ

ಮಾತಿನ ಮೇಲೆ ಸಂಯಮ ಇರಿಸಿಕೊಂಡಲ್ಲಿ ಹಲವು ಸಮಸ್ಯೆಗಳಿಂದ ಪಾರಾಗಬಹುದು. ವಾದ ವಿವಾದಗಳಲ್ಲಿ ತೊಡಗಿಕೊಳ್ಳಬೇಡಿ. ಅನಾವಶ್ಯಕ ಖರ್ಚುಗಳ ಬಗ್ಗೆ ನಿಗಾ ವಹಿಸಿ. ಕೆಲಸದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ.

ಮೀನ ರಾಶಿ

ಇವತ್ತಿನ ದಿನವನ್ನು ಆನಂದ ಮತ್ತು ಉತ್ಸಾಹದಿಂದ ಕಳೆಯಲಿದ್ದೀರಿ. ಮನೆಯಲ್ಲಿ ಮಂಗಳ ಕಾರ್ಯ ಆಯೋಜನೆ ಮಾಡುವ ಸಾಧ್ಯತೆ ಇದೆ. ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...