alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಸಂಬಂಧಿಕರು ಹಾಗೂ ಮಿತ್ರರೊಂದಿಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆನಂದವಾಗಿ ಸಮಯ ಕಳೆಯಲಿದ್ದೀರಿ. ಮಿತ್ರರಿಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಅವರಿಂದ ಲಾಭವೂ ಇದೆ.

ವೃಷಭ ರಾಶಿ

ಹೊಸ ಕಾರ್ಯವನ್ನು ಆಯೋಜಿಸುವ ಇಚ್ಛೆ ಹೊಂದಿರುವವರಿಗೆ ಇವತ್ತಿನ ದಿನ ಅನುಕೂಲಕರವಾಗಿದೆ. ಉದ್ಯೋಗ, ಉದ್ಯಮ ಮತ್ತು ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಲಾಭವಿದೆ.

ಮಿಥುನ ರಾಶಿ

ಪ್ರತಿಕೂಲ ಪರಿಸ್ಥಿತಿಯಿಂದಾಗಿ ಅಂದುಕೊಂಡ ಕಾರ್ಯದಲ್ಲಿ ವಿಳಂಬವಾಗಲಿದೆ. ಶರೀರದಲ್ಲಿ ಸ್ಪೂರ್ತಿ ಮತ್ತು ಮನಸ್ಸಿನಲ್ಲಿ ಉತ್ಸಾಹದ ಅಭಾವ ಇರುತ್ತದೆ. ಉದರ ಸಂಬಂಧಿ ರೋಗಗಳು ಕಾಣಿಸಿಕೊಳ್ಳಬಹುದು.

ಕರ್ಕ ರಾಶಿ

ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಮೂಡಲಿವೆ, ಇದರಿಂದ ಹತಾಶರಾಗಲಿದ್ದೀರಿ. ಹೊರಗಡೆ ಊಟ-ತಿಂಡಿ ಮಾಡುವುದರಿಂದ ಆರೋಗ್ಯ ಹದಗೆಡಲಿದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ.

ಸಿಂಹ ರಾಶಿ

ಪತಿ-ಪತ್ನಿ ಮಧ್ಯೆ ಸಣ್ಣ ಪುಟ್ಟ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಸಂಗಾತಿಯ ಸ್ವಾಸ್ಥ್ಯದ ಬಗ್ಗೆ ಚಿಂತಿತರಾಗಲಿದ್ದೀರಿ. ಸಾಂಸಾರಿಕ ವಿಷಯಗಳಲ್ಲಿ ಉದಾಸೀನತೆ ತೋರಲಿದ್ದೀರಿ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಮನೆಯಲ್ಲೂ ಸುಖ ಶಾಂತಿಯ ವಾತಾವರಣವಿರುತ್ತದೆ. ಆರ್ಥಿಕ ಲಾಭ ಮತ್ತು ಕೆಲಸದಲ್ಲಿ ಯಶಸ್ಸು ಸಿಗಲಿದೆ.

ತುಲಾ ರಾಶಿ

ನಿಮ್ಮ ಕಲ್ಪನೆ ಮತ್ತು ಸೃಜನಶಕ್ತಿಯ ಉತ್ತಮ ಉಪಯೋಗ ಪಡೆಯಲಿದ್ದೀರಿ. ಮಕ್ಕಳ ಪ್ರಗತಿಗೆ ಯಾವುದೇ ಅಡ್ಡಿಯಿಲ್ಲ. ಪ್ರಿಯ ವ್ಯಕ್ತಿಗಳೊಂದಿಗಿನ ಭೇಟಿ ರೋಮಾಂಚನಕಾರಿಯಾಗಿರಲಿದೆ.

ವೃಶ್ಚಿಕ ರಾಶಿ

ಇಂದು ಶಾರೀರಿಕ ಮತ್ತು ಮಾನಸಿಕವಾಗಿ ಭಯದ ಭಾವನೆ ಮೂಡಲಿದೆ. ಸಣ್ಣ ಪುಟ್ಟ ವಿಚಾರಕ್ಕೂ ಆತಂಕಗೊಳ್ಳುತ್ತೀರಿ. ಅತಿಯಾಗಿ ಭಾವುಕರಾಗುತ್ತೀರಿ.

ಧನು ರಾಶಿ

ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಮೂಡಲಿದೆ. ಹೊಸ ಕಾರ್ಯ ಆರಂಭಿಸಲು ಶುಭ ಸಮಯ. ಮಿತ್ರರು ಮತ್ತು ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.

ಮಕರ ರಾಶಿ

ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇರಲಿ. ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರ ವಹಿಸಿ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಇಂದು ಶಾರೀರಿಕ ಮತ್ತು ಮಾನಸಿಕವಾಗಿ ಪ್ರಫುಲ್ಲರಾಗಿರುತ್ತೀರಾ. ಸಂಬಂಧಿಕರು, ಮಿತ್ರರು ಮತ್ತು ಕುಟುಂಬ ಸದಸ್ಯರೊಂದಿಗೆ ಒಟ್ಟಾಗಿ ಕಾಲ ಕಳೆಯಲಿದ್ದೀರಿ. ಮನೆಯಲ್ಲಿ ಉತ್ಸಾಹದ ವಾತಾವರಣವಿರುತ್ತದೆ.

ಮೀನ ರಾಶಿ

ಆರ್ಥಿಕ ವಹಿವಾಟಿನಲ್ಲಿ ಜಾಗರೂಕರಾಗಿರಿ. ಏಕಾಗ್ರತೆಯ ಕೊರತೆಯಿಂದ ಆತಂಕ ಕಾಡಬಹುದು. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...