alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ದೊರೆಯುತ್ತದೆ. ಆದಾಯ ವೃದ್ಧಿಸಲಿದೆ. ದಿನವಿಡೀ ಮೋಜು-ಮಸ್ತಿ ಮನರಂಜನೆಯಲ್ಲಿ ತೊಡಗಲಿದ್ದೀರಿ.

ವೃಷಭ ರಾಶಿ

ವ್ಯಾಪಾರ ವೃದ್ಧಿ ಬಗ್ಗೆ ಹೆಚ್ಚಿನ ಗಮನಹರಿಸಲಿದ್ದೀರಿ. ಹೊಸ ಯೋಜನೆಗಳಿಂದಾಗಿ ವ್ಯಾಪಾರ ಇನ್ನಷ್ಟು ಲಾಭ ತಂದುಕೊಡಲಿದೆ. ಆದ್ರೆ ನಿರೀಕ್ಷಿತ ಯಶಸ್ಸು ಸಿಗಲು ಕೊಂಚ ವಿಳಂಬವಾಗಬಹುದು.

ಮಿಥುನ ರಾಶಿ

ಊಟ-ತಿಂಡಿ ಬಗ್ಗೆ ಇಂದು ವಿಶೇಷ ಗಮನ ಹರಿಸಿ. ನಕಾರಾತ್ಮಕ ವಿಚಾರಗಳನ್ನು ಮನಸ್ಸಿನಿಂದ ತೆಗೆದು ಹಾಕಿ. ಇಲ್ಲದೇ ಹೋದಲ್ಲಿ ಹತಾಶೆ ಉಂಟಾಗಬಹುದು. ಆಕಸ್ಮಿಕ ಪ್ರವಾಸ ಯೋಗವಿದೆ.

ಕರ್ಕ ರಾಶಿ

ಯಾರೊಂದಿಗಾದ್ರೂ ಇಂದು ಭಾವನಾತ್ಮಕ ಸಂಬಂಧ ಬೆಸೆಯಲಿದೆ. ಅದರಲ್ಲಿ ಹೆಚ್ಚು ಭಾವುಕರಾಗಲಿದ್ದೀರಿ. ಮೋಜು ಮಸ್ತಿ ಮತ್ತು ಮನರಂಜನೆಯಿಂದ ಮನಸ್ಸು ಪ್ರಫುಲ್ಲವಾಗುತ್ತದೆ.

ಸಿಂಹ ರಾಶಿ

ವ್ಯಾಪಾರ ವೃದ್ಧಿಗಾಗಿ ಹಣಕಾಸಿನ ನೆರವು ದೊರೆಯಲಿದೆ. ಧನಪ್ರಾಪ್ತಿಯ ಯೋಗವಿದೆ. ಆದಾಯದಲ್ಲಿ ವೃದ್ಧಿಯಾಗುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತವೆ.

ಕನ್ಯಾ ರಾಶಿ

ವಸ್ತ್ರಾಭರಣಗಳ ಖರೀದಿ ನಿಮಗೆ ರೋಮಾಂಚಕ ಹಾಗೂ ಆನಂದದಾಯಕವಾಗಿರುತ್ತದೆ. ಕಲೆಯ ಬಗ್ಗೆ ವಿಶೇಷ ಆಸಕ್ತಿ ಮೂಡಲಿದೆ. ವ್ಯಾಪಾರ ವೃದ್ಧಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ತುಲಾ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗರೂಕರಾಗಿರಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಮನೆಯಲ್ಲಿ ಜಗಳವಾಗದಂತೆ ಎಚ್ಚರ ವಹಿಸಿ.

ವೃಶ್ಚಿಕ ರಾಶಿ

ಉದ್ಯೋಗಿಗಳಿಗೆ ಇಂದು ಅನುಕೂಲಕರ ದಿನ. ಒಡಹುಟ್ಟಿದವರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಮಧ್ಯಾಹ್ನದ ನಂತರ ಕೆಲಸದಲ್ಲಿ ಪ್ರತಿಕೂಲತೆ ಉಂಟಾಗಬಹುದು. ಧನಹಾನಿಯಾಗುವ ಸಾಧ್ಯತೆಯೂ ಇದೆ.

ಧನು ರಾಶಿ

ಇಂದು ಆಧ್ಯಾತ್ಮಿಕತೆಯ ಬಗ್ಗೆ ವಿಶೇಷ ಒಲವು ಮೂಡಲಿದೆ. ವಿದ್ಯಾರ್ಥಿಗಳು ಓದು ಬರಹದಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಬೇಕು. ಮಧ್ಯಾಹ್ನದ ನಂತರ ಚಿಂತೆಗಳೆಲ್ಲ ದೂರವಾಗಲಿವೆ.

ಮಕರ ರಾಶಿ

ಆಧ್ಮಾತ್ಮಿಕತೆ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲಿದೆ. ಕಚೇರಿಯಲ್ಲಿ ಹೆಚ್ಚಿನ ಪ್ರಭಾವ ಬೀರಲಿದ್ದೀರಿ. ನಕಾರಾತ್ಮಕ ವಿಚಾರಗಳಿಂದಾಗಿ ಮನಸ್ಸು ಹತಾಶವಾಗಬಹುದು. ಕೌಟುಂಬಿಕ ಕೆಲಸಗಳಿಗೆ ಹಣ ಖರ್ಚಾಗಲಿದೆ.

ಕುಂಭ ರಾಶಿ

ಧಾರ್ಮಿಕ ಭಾವನೆಗಳು ಅಧಿಕವಾಗಿರುತ್ತವೆ. ಧಾರ್ಮಿಕ ಕೆಲಸ ಅಥವಾ ಯಾತ್ರೆಗಾಗಿ ಹೆಚ್ಚು ಹಣ ಖರ್ಚಾಗಲಿದೆ. ಕೋರ್ಟ್ ಕಚೇರಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ.

ಮೀನ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಲಾಭವಾಗಲಿದೆ. ಕುಟುಂಬದಲ್ಲೂ ಸುಖ-ಶಾಂತಿ ನೆಲೆಸುತ್ತದೆ. ಧಾರ್ಮಿಕ ಕಾರ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗಲಿದೆ. ಆದಾಯಕ್ಕಿಂತ ಖರ್ಚು ಅಧಿಕವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...