alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಉತ್ಸಾಹದಿಂದ ದಿನ ಆರಂಭಿಸಲಿದ್ದೀರಿ. ಮಿತ್ರರು ಮತ್ತು ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂತಸ ಮೂಡಲಿದೆ. ಆಕಸ್ಮಿಕ ಆಗಮನ ನಿಮಗೆ ಖುಷಿ ಕೊಡಲಿದೆ.

ವೃಷಭ ರಾಶಿ

ಯಾವುದೇ ನಿರ್ಣಯ ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಯೋಚಿಸಿ. ಯಾರೊಂದಿಗಾದ್ರೂ ಭಿನ್ನಾಭಿಪ್ರಾಯ ಮೂಡಬಹುದು. ಹದಗೆಟ್ಟ ಆರೋಗ್ಯದಿಂದಾಗಿ ಮನಸ್ಸು ಕೂಡ ಉದಾಸೀನವಾಗಿರುತ್ತದೆ.

ಮಿಥುನ ರಾಶಿ

ಸಾಮಾಜಿಕ, ಆರ್ಥಿಕ ಮತ್ತು ಕೌಟುಂಬಿಕ ಕ್ಷೇತ್ರದಲ್ಲಿ ಲಾಭವಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ಮಿತ್ರರಿಂದ ಲಾಭವಿದೆ. ಜೊತೆಗ ಸ್ನೇಹಿತರಿಗಾಗಿಯೇ ಹಣ ಕೂಡ ಖರ್ಚಾಗುವ ಸಾಧ್ಯತೆ ಇದೆ.

ಕರ್ಕ ರಾಶಿ

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ. ಇದರಿಂದ ಕೆಲಸದಲ್ಲಿ ನಿಮ್ಮ ಉತ್ಸಾಹ ಕೂಡ ದುಪ್ಪಟ್ಟಾಗುತ್ತದೆ. ವೇತನ ವೃದ್ಧಿ ಅಥವಾ    ಪದೋನ್ನತಿಯ ಸಮಾಚಾರ ಸಿಗಬಹುದು.

ಸಿಂಹ ರಾಶಿ

ಆಲಸ್ಯ ಮತ್ತು ಆಯಾಸದಿಂದ ನಿಮ್ಮ ಕೆಲಸದ ವೇಗ ಕಡಿಮೆಯಾಗಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಉದ್ಯೋಗದಲ್ಲಿ ಸಮಸ್ಯೆಗಳು ಎದುರಾಗಬಹುದು. ಹಿರಿಯ ಅಧಿಕಾರಿಗಳಿಂದ ದೂರವೇ ಇರಿ.

ಕನ್ಯಾ ರಾಶಿ

ಇಂದು ಅತ್ಯಂತ ಸಂಯಮದಿಂದಿರಿ. ಯಾಕಂದ್ರೆ ಅತಿಯಾದ ಕೋಪದಿಂದ ಯಾರೊಂದಿಗಾದ್ರೂ ಜಗಳವಾಗುವ ಸಾಧ್ಯತೆ ಇದೆ. ಹಿತಶತ್ರುಗಳಿಂದಲೇ ನಿಮಗೆ ತೊಂದರೆಯಾಗಬಹುದು.

ತುಲಾ ರಾಶಿ

ನಿತ್ಯದ ಕೆಲಸದ ಒತ್ತಡದಿಂದ ಪಾರಾಗಲು ಇಂದು ಮೋಜು, ಮಸ್ತಿ, ಪಾರ್ಟಿ ಅಂತಾ ಮನರಂಜನೆಯಲ್ಲಿ ತೊಡಗಿಕೊಳ್ಳಲಿದ್ದೀರಿ. ಸಿನೆಮಾ ಅಥವಾ ನಾಟಕ ನೋಡಲಿದ್ದೀರಿ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ.

ವೃಶ್ಚಿಕ ರಾಶಿ

ಇಂದು ಕೆಲವೊಂದು ಆಕಸ್ಮಿಕ ಘಟನೆಗಳು ನಡೆಯಲಿವೆ. ಪೂರ್ವನಿಗದಿತ ಭೇಟಿ ಸಾಧ್ಯವಾಗದೇ ಇರುವುದರಿಂದ ಕೋಪ ಮತ್ತು ಹತಾಶೆ ಆವರಿಸುತ್ತದೆ. ನಿಮ್ಮ ಕೈಗೆ ಬಂದ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ.

ಧನು ರಾಶಿ

ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಆತಂಕ ಕಾಡುತ್ತದೆ. ಉದರ ಸಂಬಂಧಿ ಸಮಸ್ಯೆಗಳು ಎದುರಾಗುತ್ತದೆ. ಕೆಲಸದಲ್ಲಿನ ಅಸಫಲತೆ ನಿಮ್ಮಲ್ಲಿ ಹತಾಶೆ ಉಂಟುಮಾಡುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ.

ಮಕರ ರಾಶಿ

ಸ್ಪೂರ್ತಿಯ ಅಭಾವದಿಂದ ಒಂದು ರೀತಿಯ ಅಸ್ವಸ್ಥತೆ ಉಂಟಾಗಲಿದೆ. ಕುಟುಂಬ ಸದಸ್ಯರ ಜೊತೆಗಿನ ಭಿನ್ನಾಭಿಪ್ರಾಯದಿಂದ ಖಿನ್ನತೆಯ ಭಾವನೆ ಮೂಡುತ್ತದೆ. ಸಮಯಕ್ಕೆ ಸರಿಯಾಗಿ ಊಟ ದೊರೆಯುವುದಿಲ್ಲ. ನಿದ್ರೆಯ ಅಭಾವ ಉಂಟಾಗಲಿದೆ.

ಕುಂಭ ರಾಶಿ

ನಿಮ್ಮ ಮನಸ್ಸು ಚಿಂತೆಯಿಂದ ಮುಕ್ತವಾಗಲಿದೆ. ಉತ್ಸಾಹ ವೃದ್ಧಿಸಲಿದೆ. ಹಿರಿಯರು ಮತ್ತು ಮಿತ್ರರಿಂದ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ಮೀನ ರಾಶಿ

ಆರ್ಥಿಕ ಆಯೋಜನೆಗೆ ಇಂದು ಶುಭ ದಿನ. ನಿಗದಿತ ಕಾರ್ಯ ಪೂರ್ಣಗೊಳಿಸಲಿದ್ದೀರಿ. ಆದಾಯ ವೃದ್ಧಿಸಲಿದೆ. ಕುಟುಂಬದಲ್ಲಿ ಸುಖ-ಶಾಂತಿಯ ವಾತಾವರಣವಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...