alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಹಾನಿಕಾರಕ ವಿಚಾರ ಮತ್ತು ವ್ಯವಹಾರದಿಂದ ದೂರವಿರಿ. ಇಲ್ಲದೇ ಹೋದಲ್ಲಿ ಶಾರೀರಿಕ ಆಲಸ್ಯ ಮತ್ತು ವ್ಯಾಕುಲತೆ ಹೆಚ್ಚಲಿದೆ. ಆರೋಗ್ಯ ಕೊಂಚ ಏರುಪೇರಾಗುವ ಸಾಧ್ಯತೆ ಇದೆ.

ವೃಷಭ ರಾಶಿ

ಸರ್ಕಾರ ವಿರೋಧಿ ಧೋರಣೆ ಮತ್ತು ಕೆಲಸಗಳನ್ನು ಮಾಡಬೇಡಿ. ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ. ಆರೋಗ್ಯ ಹದಗೆಡಬಹುದು.

ಮಿಥುನ ರಾಶಿ

ಇಂದು ಸುಖ-ಶಾಂತಿಯಿಂದ ದಿನ ಕಳೆಯಲಿದ್ದೀರಿ. ದೈನಂದಿನ ಕಾರ್ಯಗಳಲ್ಲೇ ಸಿಕ್ಕಿಹಾಕಿಕೊಳ್ಳಬೇಡಿ. ಮನಸ್ಸನ್ನು ಹಗುರಗೊಳಿಸಲು ಮನರಂಜನೆಯ ಮೊರೆ ಹೋಗಬಹುದು.

ಕರ್ಕ ರಾಶಿ

ಬಹುದೊಡ್ಡ ಆರ್ಥಿಕ ಲಾಭ ನಿಮ್ಮನ್ನು ನಿರೀಕ್ಷಿಸುತ್ತಿದೆ. ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನ. ಪದೋನ್ನತಿ ಹಾಗೂ ಯಶಸ್ಸು ಪ್ರಾಪ್ತಿಯಾಗಲಿದೆ. ಕೆಲಸ ಕೂಡ ಪೂರ್ಣಗೊಳ್ಳುತ್ತದೆ.

ಸಿಂಹ ರಾಶಿ

ಸಾಹಿತ್ಯ ಮತ್ತು ಕಲೆಯ ಬಗ್ಗೆ ಆಸಕ್ತಿ ಹೆಚ್ಚಲಿದೆ. ಉದರ ಬಾಧೆಯಿಂದ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಬಹುದು. ಮಧ್ಯಾಹ್ನದ ನಂತರ ಆರ್ಥಿಕ ತೊಂದರೆ ನಿವಾರಣೆಯಾಗಲಿದೆ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಿ. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮನೆಯಲ್ಲಿ ಅಶಾಂತಿಯ ವಾತಾವರಣವಿರುತ್ತದೆ.

ತುಲಾ ರಾಶಿ

ಹೊಸ ಕಾರ್ಯ ಆರಂಭಿಸಲು ಇಂದು ಅನುಕೂಲಕರ ದಿನ. ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಸಂಕಷ್ಟ ಬಗೆಹರಿಯುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಕುಟುಂಬ ಸದಸ್ಯರೊಂದಿಗೆ ಜಗಳವಾಗಬಹುದು. ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ.

ಧನು ರಾಶಿ

ಇಂದು ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಸ್ನೇಹಿತರ ಮನೆಯಲ್ಲಿ ನಡೆಯುವ ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ಧಾರ್ಮಿಕ ಸ್ಥಳಕ್ಕೆ ತೆರಳುವ ಸಾಧ್ಯತೆ ಇದೆ.

ಮಕರ ರಾಶಿ

ಕೋರ್ಟು ಕಚೇರಿಯಲ್ಲಿ ಸಾಕ್ಷ್ಯ ಹೇಳಲು ತೆರಳಬೇಡಿ. ಮನಸ್ಸಿನ ವ್ಯಗ್ರತೆ ನಿಮ್ಮ ದೈಹಿಕ ಆರೋಗ್ಯದ ಮೇಲೂ ಪ್ರಭಾವ ಬೀರಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ.

ಕುಂಭ ರಾಶಿ

ಇಂದು ಲಾಭದಾಯಕ ದಿನ. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ. ವ್ಯಾಪಾರ ವೃದ್ಧಿಸುತ್ತದೆ. ಬಾಕಿ ಹಣ ಸಂದಾಯವಾಗಲಿದೆ.

ಮೀನ ರಾಶಿ

ನಿಮ್ಮ ವಿಚಾರಗಳಲ್ಲಿ ಇಂದು ದೃಢತೆ ಇರುವುದಿಲ್ಲ. ಹಿರಿಯ ಅಧಿಕಾರಿಗಳಿಂದ ಲಾಭವಾಗಲಿದೆ. ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...