alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇದೆ. ಪ್ರವಾಸಕ್ಕೆ ಯೋಗ್ಯ ಸಮಯವಲ್ಲ. ಮಕ್ಕಳಿಂದಾಗಿ ಚಿಂತೆ ಕಾಡಬಹುದು. ಸರಿಯಾಗಿ ಆಲೋಚಿಸದೆ ಯಾವುದೇ ಕಾರ್ಯವನ್ನು ಕೈಗೊಳ್ಳಬೇಡಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ವೃಷಭ ರಾಶಿ

ಮಕ್ಕಳಿಗಾಗಿ ಹಣ ಖರ್ಚು ಮಾಡುವಿರಿ. ಕಲಾವಿದರು ಮತ್ತು ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ಸಮಯ. ಆಸ್ತಿಗೆ ಸಂಬಂಧಿಸಿದ ಕಾನೂನು ದಸ್ತಾವೇಜು ಪ್ರಕ್ರಿಯೆಯನ್ನು ಇಂದು ಮಾಡಬೇಡಿ.

ಮಿಥುನ ರಾಶಿ

ಭಾಗ್ಯವೃದ್ಧಿಯ ಅವಕಾಶಗಳು ದೊರೆಯುತ್ತವೆ. ವಿಚಾರಗಳು ಬಹುಬೇಗನೆ ಬದಲಾಗುವುದರಿಂದ ಮನಸ್ಸು ಗೊಂದಲಮಯವಾಗಬಹುದು. ಹೊಸ ಕಾರ್ಯ ಆರಂಭಿಸಲಿದ್ದೀರಿ. ಮಿತ್ರರು, ಸಂಬಂಧಿಕರು ಮತ್ತು ನೆರೆಯವರೊಂದಿಗೆ ಸಂಬಂಧ ಉತ್ತಮವಾಗಿರಲಿದೆ.

ಕರ್ಕ ರಾಶಿ

ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಇರುವುದಿಲ್ಲ. ಅಧಿಕ ಹಣ ಖರ್ಚಾಗಲಿದೆ. ಅಸಂತೋಷದ ಭಾವನೆಯಿಂದ ಮನಸ್ಸು ಮುದುಡಲಿದೆ. ಅನೈತಿಕ ಪ್ರವೃತ್ತಿಗಳಲ್ಲಿ ಯಾವುದೇ ಕಾರಣಕ್ಕೂ ತೊಡಗಿಕೊಳ್ಳಬೇಡಿ.

ಸಿಂಹ ರಾಶಿ

ತಂದೆ ಅಥವಾ ಹಿರಿಯರಿಂದ ಲಾಭವಿದೆ. ಆರೋಗ್ಯ ಸ್ವಲ್ಪ ಹದಗೆಡುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಮಧುರತೆಯ ಅನುಭವವಾಗಲಿದೆ. ಸರ್ಕಾರಿ ಕೆಲಸ ಕಾರ್ಯಗಳು ಅತ್ಯಂತ ಶೀಘ್ರವಾಗಿ ಪೂರ್ಣಗೊಳ್ಳಲಿವೆ.

ಕನ್ಯಾ ರಾಶಿ

ವಿನಾಕಾರಣ ಜಗಳ ಮತ್ತು ವಾದ ವಿವಾದಕ್ಕೆ ಕಾರಣರಾಗಲಿದ್ದೀರಿ. ಆಕಸ್ಮಿಕ ಧನಹಾನಿಯಾಗಲಿದೆ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಹದಗೆಡುತ್ತದೆ.

ತುಲಾ ರಾಶಿ

ಗೃಹಸ್ಥ ಜೀವನದಲ್ಲಿ ಸುಖ ಶಾಂತಿಯ ಅನುಭವವಾಗಲಿದೆ. ಸ್ತ್ರೀ ಮಿತ್ರರನ್ನು ಭೇಟಿಯಾಗಲಿದ್ದೀರಿ. ವೈವಾಹಿಕ ಸುಖ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ವಿವಾಹದ ಯೋಗವಿದೆ.

ವೃಶ್ಚಿಕ ರಾಶಿ

ಧನಲಾಭ ಯೋಗವಿದೆ. ವ್ಯಾಪಾರಿಗಳಿಗೆ ಬಾಕಿ ಇರುವ ಹಣ ಸಂದಾಯವಾಗಲಿದೆ. ಮಕ್ಕಳ ಪ್ರಗತಿಯಿಂದ ಮನಸ್ಸು ಸಂತೋಷಗೊಳ್ಳುತ್ತದೆ. ಶಾರೀರಿಕ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ. ಸ್ನೇಹಿತರಿಂದ ಲಾಭವಿದೆ.

ಧನು ರಾಶಿ

ಹಾನಿಕಾರಕ ವಿಷಯಗಳಿಂದ ಆದಷ್ಟು ದೂರವಿರಿ. ಯಾವುದೇ ಕೆಲಸವನ್ನಾದ್ರೂ ಎಚ್ಚರಿಕೆಯಿಂದ ಮಾಡಿ. ಹಿರಿಯ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಪ್ರತಿಸ್ಪರ್ಧಿಗಳು ಮತ್ತು ವಿರೋಧಿಗಳೊಂದಿಗೆ ವಾದ ವಿವಾದ ಬೇಡ.

ಮಕರ ರಾಶಿ

ವ್ಯಾಪಾರಿ ಕೆಲಸಗಳಿಗಾಗಿ ಹಣ ಖರ್ಚಾಗುತ್ತದೆ. ನಕಾರಾತ್ಮಕ ವಿಚಾರ ಮತ್ತು ಕೋಪದಿಂದ ದೂರವಿದ್ರೆ ಅಪಾಯದಿಂದ ಪಾರಾಗುತ್ತೀರಿ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಮೂಡುತ್ತದೆ. ಕಚೇರಿಯಲ್ಲಿ ಪ್ರತಿಕೂಲ ವಾತಾವರಣವಿರಲಿದೆ.

ಕುಂಭ ರಾಶಿ

ಪ್ರವಾಸ, ಸುತ್ತಾಟ, ರುಚಿಕರ ಭೋಜನ, ಹೊಸ ಬಟ್ಟೆ ಕೊಳ್ಳುವ ಯೋಗವಿದ್ದು, ಸಂತೋಷ ದ್ವಿಗುಣಗೊಳ್ಳಲಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಲಿದೆ. ವೈವಾಹಿಕ ಸುಖ ದೊರೆಯಲಿದೆ. ಪಾಲುದಾರಿಕೆಯಲ್ಲಿ ಲಾಭವಿದೆ.

ಮೀನ ರಾಶಿ

ಮನೆಯಲ್ಲಿ ಸುಖ, ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ದೈನಿಕ ಕಾರ್ಯಗಳನ್ನೆಲ್ಲ ಆತ್ಮವಿಶ್ವಾಸದಿಂದ ಮಾಡಿ ಮುಗಿಸುತ್ತೀರಿ. ಆದ್ರೆ ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...