alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಸಾಹಿತ್ಯ ಮತ್ತು ಕಲೆಯ ಕ್ಷೇತ್ರದಲ್ಲಿ ಮುಂದಡಿ ಇಡಲು ಇಂದು ಶುಭ ದಿನ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಮನೆಯಲ್ಲೂ ಸಂತೋಷ ಮತ್ತು ನೆಮ್ಮದಿ ತುಂಬಿರುತ್ತದೆ.

ವೃಷಭ ರಾಶಿ

ಇಂದು ನಿಮ್ಮ ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇಟ್ಟುಕೊಳ್ಳುವ ಅವಶ್ಯಕತೆ ಇದೆ. ಜಲಾಶಯಗಳಿಂದ ದೂರವಿರಿ. ಜಮೀನು ಮತ್ತು ಆಸ್ತಿ ದಾಖಲೆಗೆ ಸಹಿ ಮಾಡುವ ಮುನ್ನ ಎಚ್ಚರ ವಹಿಸಿ.

ಮಿಥುನ ರಾಶಿ

ಇಂದು ಸುಖ-ಶಾಂತಿಯಿಂದ ದಿನ ಕಳೆಯಲಿದ್ದೀರಿ. ಮಿತ್ರರು ಮತ್ತು ಸಂಬಂಧಿಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಆದ್ರೆ ಮಧ್ಯಾಹ್ನದ ನಂತರ ನಕಾರಾತ್ಮಕ ವಿಚಾರಗಳಿಂದ ಮನಸ್ಸು ವ್ಯಗ್ರವಾಗುತ್ತದೆ.

ಕರ್ಕ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಕುಟುಂಬಸ್ಥರ ಸಂಪೂರ್ಣ ಸಹಕಾರ ದೊರೆಯಲಿದೆ. ಆರೋಗ್ಯದಲ್ಲೂ ಯಾವುದೇ ಸಮಸ್ಯೆ ಇರುವುದಿಲ್ಲ.

ಸಿಂಹ ರಾಶಿ

ದೃಢ ಮನೋಬಲದಿಂದಾಗಿ ಕಾರ್ಯ ಸಿದ್ಧಿ ನಿಶ್ಚಿತ. ಹಿರಿಯರಿಂದ ಲಾಭವಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಕೂಡ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಹೊಂದಾಣಿಕೆ ಇರುತ್ತದೆ.

ಕನ್ಯಾ ರಾಶಿ

ಮನಸ್ಸು ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ಎಚ್ಚರ ವಹಿಸಿ. ಭ್ರಮೆಯನ್ನು ಹೊಡೆದೋಡಿಸುವುದು ಅತ್ಯಂತ ಅವಶ್ಯಕ. ಯಾರೊಂದಿಗಾದರೂ ತೀವ್ರ ಚರ್ಚೆ ಅಥವಾ ಜಗಳದಲ್ಲಿ ತೊಡಗಬೇಡಿ.

ತುಲಾ ರಾಶಿ

ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ. ನಿಮ್ಮ ಮನಸ್ಸು ವೈಚಾರಿಕತೆಗೆ ಮಾತ್ರ ಒಗ್ಗಿಕೊಂಡಿರುತ್ತದೆ. ಇದರಿಂದ ಆತ್ಮವಿಶ್ವಾಸ ಕುಗ್ಗಬಹುದು. ಸ್ನೇಹಿತರಿಂದ ಲಾಭವಾಗಲಿದೆ.

ವೃಶ್ಚಿಕ ರಾಶಿ

ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತವಾಗಲಿದೆ. ಅತ್ಯಂತ ಸರಳವಾಗಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಆಸ್ತಿಗೆ ಸಂಬಂಧಪಟ್ಟ ದಸ್ತಾವೇಜು ತಯಾರಿಸಲು ದಿನ ಸೂಕ್ತವಾಗಿದೆ.

ಧನು ರಾಶಿ

ಇಂದು ನಿಮ್ಮ ಸ್ವಭಾವದಲ್ಲಿ ಉಗ್ರತೆ ಇರುತ್ತದೆ. ಆರೋಗ್ಯ ಕೂಡ ಏರುಪೇರಾಗಬಹುದು. ಧಾರ್ಮಿಕ ಯಾತ್ರೆ ಅಥವಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ

ಅನಾರೋಗ್ಯದಿಂದಾಗಿ ಹಣ ಖರ್ಚಾಗಲಿದೆ. ಆಕಸ್ಮಿಕ ಧನ ಹಾನಿಯ ಸಾಧ್ಯತೆಯೂ ಇದೆ. ಕುಟುಂಬ ಸದಸ್ಯರ ಜೊತೆಗೆ ಕಲಹ ಉಂಟಾಗದಂತೆ ಎಚ್ಚರ ವಹಿಸಿ.

ಕುಂಭ ರಾಶಿ

ಇಂದು ವ್ಯಾಪಾರಿವರ್ಗ ಮತ್ತು ಪಾಲುದಾರರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ. ಅಭ್ಯಾಸದಲ್ಲಿ ಯಶಸ್ಸು ಸಿಗಲಿದೆ.

ಮೀನ ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ಕುಟುಂಬ ಸದಸ್ಯರೊಂದಿಗೆ ಹೊಂದಾಣಿಕೆಯಿಂದ ಇರುತ್ತೀರಿ. ನಿತ್ಯದ ಕೆಲಸಗಳಲ್ಲಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...