alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳಿತು. ಇಂದು ಅಧಿಕ ಹಣ ಖರ್ಚಾಗಲಿದೆ. ಹಣಕಾಸಿನ ಕೊಡು ಕೊಳ್ಳುವಿಕೆಯಲ್ಲೂ ಎಚ್ಚರಿಕೆಯಿಂದಿರಿ. ಯಾರೊಂದಿಗೂ ವಾದ-ವಿವಾದಕ್ಕಿಳಿಯಬೇಡಿ.

ವೃಷಭ ರಾಶಿ

ಇಂದು ನಿಮಗೆ ಶುಭ ದಿನ. ನಿಮ್ಮ ರಚನಾತ್ಮಕ ಮತ್ತು ಕಲಾತ್ಮಕ ಶಕ್ತಿ ವೃದ್ಧಿಸಲಿದೆ. ವೈಚಾರಿಕ ಸ್ಥಿರತೆಯ ಅನುಭವವಾಗಲಿದೆ. ಅದರ ಪರಿಣಾಮವಾಗಿ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಮಿಥುನ ರಾಶಿ

ಇವತ್ತು ನಿಮಗೆ ಅತ್ಯಂತ ಕಷ್ಟದ ದಿನ. ಹಾಗಾಗಿ ಎಲ್ಲಾ ಕೆಲಸಗಳನ್ನೂ ಸಮಾಧಾನದಿಂದ ಮಾಡಿ. ಕುಟುಂಬಸ್ಥರು ಮತ್ತು ಮಕ್ಕಳೊಂದಿಗೆ ಜಗಳವಾಗಬಹುದು. ಕೋಪವನ್ನು ನಿಯಂತ್ರಿಸಿಕೊಳ್ಳಿ.

ಕರ್ಕ ರಾಶಿ

ಇವತ್ತು ಅತ್ಯಂತ ಲಾಭದಾಯಕ ದಿನ. ನಿಮ್ಮ ಆದಾಯ ವೃದ್ಧಿಸಲಿದೆ. ಇತರೆಡೆಗಳಿಂದ್ಲೂ ಆರ್ಥಿಕ ಲಾಭವಿದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸ್ನೇಹಿತೆಯರಿಂದ ವಿಶೇಷ ಲಾಭ ದೊರೆಯುತ್ತದೆ. ವ್ಯಾಪಾರದಲ್ಲಿ ಲಾಭವಾಗಲಿದೆ.

ಸಿಂಹ ರಾಶಿ

ಇಂದು ನಿಮ್ಮ ಪಾಲಿಗೆ ಅತ್ಯಂತ ಶ್ರೇಷ್ಠ ದಿನ. ಪ್ರತಿ ಕಾರ್ಯವೂ ಯಶಸ್ವಿಯಾಗಲಿದೆ. ನಿಮ್ಮ ಮೇಲೆ ಹಿರಿಯ ಅಧಿಕಾರಿಗಳ ಕೃಪಾದೃಷ್ಟಿ ಇರುತ್ತದೆ. ತಂದೆಯಿಂದ ಲಾಭ ದೊರೆಯುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಇಂದು ನಿಮಗೆ ಶುಭ ದಿನ. ಸಂಬಂಧಿಕರೊಂದಿಗೆ ಪ್ರವಾಸ ತೆರಳಲಿದ್ದೀರಿ. ಸ್ನೇಹಿತೆಯರಿಂದ ಲಾಭವಾಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯ ಅಥವಾ ಧಾರ್ಮಿಕ ಯಾತ್ರೆ ಕೈಗೊಳ್ಳಲಿದ್ದೀರಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ.

ತುಲಾ ರಾಶಿ

ಇಂದು ಹೊಸ ಕಾರ್ಯವನ್ನು ಆರಂಭಿಸಬಹುದು. ಭಾಷೆ ಮತ್ತು ವ್ಯವಹಾರದಲ್ಲಿ ಸಂಯಮ ಇರಲಿ. ಯಾರನ್ನೂ ದ್ವೇಷಿಸಬೇಡಿ, ಹಿತಶತ್ರುಗಳಿಂದ ದೂರವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ವೃಶ್ಚಿಕ ರಾಶಿ

ಇವತ್ತಿನ ದಿನ ಕೊಂಚ ವಿಭಿನ್ನವಾಗಿರಲಿದೆ. ನಿಮಗಾಗಿ ಬಿಡುವು ಮಾಡಿಕೊಳ್ಳಲಿದ್ದೀರಿ. ಸ್ನೇಹಿತರೊಂದಿಗೆ ಓಡಾಟ, ಮೋಜು ಮಸ್ತಿ, ಮನರಂಜನೆಯಲ್ಲಿ ತೊಡಗಲಿದ್ದೀರಿ. ಗೌರವ ಪ್ರತಿಷ್ಠೆ ಹೆಚ್ಚಲಿದೆ.

ಧನು ರಾಶಿ

ಬೌದ್ಧಿಕ, ತಾರ್ಕಿಕ ವಿಚಾರ-ವಿನಿಮಯ ಮತ್ತು ಬರವಣಿಗೆಗೆ ಸಮಯ ಉತ್ತಮವಾಗಿದೆ. ಮನರಂಜನೆ, ಪ್ರವಾಸ, ಮಿತ್ರರ ಭೇಟಿ ಮತ್ತು ಸ್ವಾದಿಷ್ಟ ಭೋಜನ ಯೋಗವಿದೆ. ಇವತ್ತು ಪ್ರೀತಿಪಾತ್ರರೊಂದಿಗೆ ರೋಮಾಂಚಕ ಕ್ಷಣಗಳನ್ನು ಕಳೆಯಲಿದ್ದೀರಿ.

ಮಕರ ರಾಶಿ

ಇವತ್ತು ನಿಮ್ಮ ಮನಸ್ಸು ಚಿಂತಾಗ್ರಸ್ಥವಾಗಿಯೂ, ಗೊಂದಲಮಯವಾಗಿಯೂ ಇರಲಿದೆ. ಯಾವುದೇ ಕಾರ್ಯದಲ್ಲಿ ದೃಢ ನಿಶ್ಚಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂದು ಯಾವುದೇ ಮಹತ್ವದ ಕಾರ್ಯ ಕೈಗೊಳ್ಳಬೇಡಿ.

ಕುಂಭ ರಾಶಿ

ನಿಮ್ಮ ಸ್ವಭಾವದಲ್ಲಿ ಬದಲಾವಣೆ ಆಗಲಿದೆ. ಮಾನಸಿಕವಾಗಿ ವ್ಯಗ್ರತೆಯ ಅನುಭವವಾಗಲಿದೆ. ಹಣ ಗಳಿಸಲು ಹೊಸ ಯೋಜನೆ ರೂಪಿಸಬಹುದು. ತಾಯಿಯಿಂದ ಲಾಭವಾಗುವ ಸಾಧ್ಯತೆ ಇದೆ.

ಮೀನ ರಾಶಿ

ಇವತ್ತು ನಿಮಗೆ ಶುಭ ಫಲವಿದೆ. ನಿಮ್ಮ ಸೃಜನಾತ್ಮಕ ಮತ್ತು ಕಲಾತ್ಮಕ ಶಕ್ತಿ ವೃದ್ಧಿಸಲಿದೆ. ವೈಚಾರಿಕ ಸ್ಥಿರತೆಯಿಂದಾಗಿ ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...