alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಸ್ಪೂರ್ತಿಯ ಅನುಭವವಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಉದ್ಯಮದಲ್ಲೂ ನಿರಾಳತೆಯ ಅನುಭವವಾಗುತ್ತದೆ.

ವೃಷಭ ರಾಶಿ

ಇವತ್ತು ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಓದು ಬರಹದಲ್ಲಿ ವಿಘ್ನ ಎದುರಾಗಬಹುದು. ಮನಸ್ಸು ಸ್ವಲ್ಪ ಆತಂಕಗೊಳ್ಳಲಿದೆ. ಮಧ್ಯಾಹ್ನದ ನಂತರ ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.

ಮಿಥುನ ರಾಶಿ

ಜಮೀನು, ಮನೆಯ ದಾಖಲೆಗಳ ವಿಷಯದಲ್ಲಿ ತುಂಬಾ ಜಾಗರೂಕವಾಗಿ ವರ್ತಿಸಿ. ವಿನಾಕಾರಣ ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಮಕ್ಕಳ ವಿಷಯದಲ್ಲಿ ಚಿಂತಿತರಾಗುತ್ತೀರಿ. ವಿದ್ಯಾಭ್ಯಾಸ ಮಾಡುವವರಿಗೂ ತೊಡಕು ಉಂಟಾಗುತ್ತದೆ.

ಕರ್ಕ ರಾಶಿ

ಆಧ್ಯಾತ್ಮಿಕ ಕೆಲಸಗಳನ್ನು ಮಾಡಲು ಇವತ್ತು ಶುಭದಿನ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ನಿಮಗೆ ಇಂದು ಹೆಚ್ಚು ಸಂವೇದನಶೀಲತೆಯ ಅನುಭವವಾಗಲಿದೆ.

ಸಿಂಹ ರಾಶಿ

ನಿಮ್ಮ ಮಧುರ ಮಾತುಗಳಿಂದ ಅಂದುಕೊಂಡ ಕಾರ್ಯದಲ್ಲಿ ಯಶಸ್ವಿಯಾಗುತ್ತೀರಿ. ಕುಟುಂಬದವರೊಂದಿಗೆ ಸಂತೋಷವಾಗಿ ಕಾಲ ಕಳೆಯಲಿದ್ದೀರಿ. ಆದ್ರೆ ಮಧ್ಯಾಹ್ನದ ನಂತರ ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ಬೇಡ, ಸ್ವಲ್ಪ ಯೋಚಿಸಿ ಮುಂದಡಿ ಇಡಿ.

ಕನ್ಯಾ ರಾಶಿ

ಇವತ್ತು ನಿಮಗೆ ಶುಭದಿನ. ನಿಮ್ಮ ಮಧುರ ಮಾತುಗಳಿಂದ್ಲೇ ಪ್ರೇಮಮಯ ಮತ್ತು ಆತ್ಮೀಯ ಸಂಬಂಧವನ್ನು ಹೊಂದಲಿದ್ದೀರಿ. ನಿಮ್ಮ ವೈಚಾರಿಕತೆ ಇತರರನ್ನು ಪ್ರಭಾವಿತಗೊಳಿಸಲಿದೆ. ಉದ್ಯಮದಲ್ಲೂ ಇವತ್ತು ಲಾಭವಾಗಲಿದೆ.

ತುಲಾ ರಾಶಿ

ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ, ಎಚ್ಚರಿಕೆಯಿಂದಿರಿ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ. ಇದೇ ಕಾರಣಕ್ಕೆ ಮಿತ್ರರ ಜೊತೆಗೆ ಉಗ್ರ ಚರ್ಚೆ ಮತ್ತು ಜಗಳ ಮಾಡುವ ಸಾಧ್ಯತೆಯೂ ಇದೆ. ಹಾಗಾಗಿ ಕೊಂಚ ಜಾಗರೂಕರಾಗಿರಿ.

ವೃಶ್ಚಿಕ ರಾಶಿ

ಅನೇಕ ಕ್ಷೇತ್ರಗಳಲ್ಲಿ ನಿಮಗೆ ಲಾಭ, ಯಶಸ್ಸು ಮತ್ತು ಕೀರ್ತಿ ದೊರೆಯಲಿದೆ. ಧನಪ್ರಾಪ್ತಿಯ ಯೋಗವೂ ಇದೆ. ಸ್ನೇಹಿತರಿಗಾಗಿ ಹಣ ಖರ್ಚಾಗಲಿದೆ. ಮಧ್ಯಾಹ್ನದ ನಂತರ ದೇಹ ಮತ್ತು ಮನಸ್ಸು ಸ್ವಲ್ಪ ಅಸ್ವಸ್ಥಗೊಳ್ಳಬಹುದು.

ಧನು ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಉದ್ಯಮದಲ್ಲೂ ಲಾಭವನ್ನು ನಿರೀಕ್ಷಿಸಬಹುದು. ಸರ್ಕಾರಿ ಕೆಲಸಗಳಲ್ಲೂ ಲಾಭವಿದೆ. ಅನೇಕ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಕೀರ್ತಿ ದೊರೆಯಲಿದೆ.

ಮಕರ ರಾಶಿ

ಇವತ್ತಿನ ದಿನ ನಿಮಗೆ ಸಂಪೂರ್ಣ ಲಾಭ ದೊರೆಯಲಿದೆ. ವಿದೇಶದಲ್ಲಿರುವ ಸಂಬಂಧಿಕರಿಂದ ದೊರೆಯುವ ಸಂದೇಶದಿಂದ ಮನಸ್ಸು ಪ್ರಫುಲ್ಲವಾಗಲಿದೆ. ಧಾರ್ಮಿಕ ಯಾತ್ರೆ ಕೈಗೊಳ್ಳಲಿದ್ದೀರಿ. ಕೈಗೊಂಡ ಕಾರ್ಯಗಳೆಲ್ಲ ಪೂರ್ಣಗೊಳ್ಳಲಿವೆ.

ಕುಂಭ ರಾಶಿ

ಇವತ್ತು ನಿಮಗೆ ಶುಭದಿನ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬದವರೊಂದಿಗೆ ವಾದ ವಿವಾದದಲ್ಲಿ ತೊಡಗಿಕೊಳ್ಳಬೇಡಿ. ಮಧ್ಯಾಹ್ನದ ನಂತರ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಆನಂದವಾಗಿ ಕಾಲ ಕಳೆಯುತ್ತೀರಿ.

ಮೀನ ರಾಶಿ

ಇವತ್ತಿನ ಕೆಲಸಗಳೆಲ್ಲ ಶಾಂತಿಪೂರ್ವಕವಾಗಿ ನೆರವೇರುತ್ತವೆ. ಮಿತ್ರರು ಮತ್ತು ಕುಟುಂಬದವರ ಜೊತೆ ಪ್ರವಾಸ ಮಾಡುವ ಸಾಧ್ಯತೆ ಇದೆ. ಉದ್ಯಮದಲ್ಲಿ ಪಾಲುದಾರರ ಜೊತೆಗಿನ ವ್ಯವಹಾರ ಉತ್ತಮವಾಗಿರಲಿದೆ. ಮಧ್ಯಾಹ್ನದ ನಂತರ ಆರೋಗ್ಯ ಏರುಪೇರಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...