alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ

ಆರ್ಥಿಕ ಮತ್ತು ವಾಣಿಜ್ಯ ದೃಷ್ಟಿಯಿಂದ ಇಂದು ಲಾಭದಾಯಕ ದಿನ. ದೀರ್ಘಕಾಲದ ಆರ್ಥಿಕ ಯೋಜನೆ ಪೂರ್ಣಗೊಳಿಸಲಿದ್ದೀರಿ. ಉದ್ಯಮದಲ್ಲೂ ಹೊಸ ಯೋಜನೆ ಹಮ್ಮಿಕೊಳ್ಳಲಿದ್ದೀರಿ. ಪರೋಪಕಾರಿ ಕೆಲಸದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ವೃಷಭ ರಾಶಿ

ಈ ದಿನ ನೀವು ಆಡುವ ಮಾತು ವಿರಸಕ್ಕೆ ಕಾರಣವಾಗಬಹುದು. ಮಾತು ಕಡಿಮೆ ಮಾಡಿ, ಧ್ಯಾನ ಯೋಗದಲ್ಲಿ ಮನಸ್ಸು ಕೇಂದ್ರೀಕರಿಸಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಮಿಥುನ ರಾಶಿ

ಅಧಿಕ ಪರಿಶ್ರಮಪಟ್ಟರೂ ಅಲ್ಪ ಫಲಿತಾಂಶ ಸಿಕ್ಕರೂ ಕೆಲಸವನ್ನು ಮುಂದುವರಿಸುತ್ತೀರಿ. ನಿಮ್ಮ ಕಾರ್ಯವೈಖರಿ ಹಾಗೂ ಮಧುರ ಮಾತುಗಳಿಂದ ಇತರರ ಮೇಲೆ ಪ್ರಭಾವ ಬೀರಲಿದ್ದೀರಿ. ಇದರಿಂದ ಲಾಭ ದೊರೆಯಲಿದೆ.

ಕರ್ಕ ರಾಶಿ

ಅಧಿಕ ಭಾವುಕತೆಯಿಂದ ಹೆಚ್ಚು ಸಂವೇದನಾಶೀಲರಾಗಿರುತ್ತೀರಿ. ಜಲಾಶಯ ಮತ್ತು ಸ್ತ್ರೀಯರಿಂದ ದೂರವಿರಿ. ಮನಸ್ಸು ಗೊಂದಲಮಯವಾಗುವುದರಿಂದ ನಿರ್ಣಯ ತೆಗೆದುಕೊಳ್ಳುವುದು ಕಷ್ಟವಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡುತ್ತದೆ.

ಸಿಂಹ ರಾಶಿ

ಕೆಲಸ ಕಾರ್ಯಗಳೆಲ್ಲ ಯಶಸ್ವಿಯಾಗಲಿವೆ. ಇದರಿಂದ ನಿಮ್ಮ ಆನಂದ ಉತ್ಸಾಹ ಹೆಚ್ಚಲಿದೆ. ತಾಜಾತನ ಮತ್ತು ಸಂತೋಷದ ಅನುಭವವಾಗಲಿದೆ. ಮಿತ್ರರು, ಸಂಬಂಧಿಕರ ಭೇಟಿ ಹಾಗೂ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಇವತ್ತಿನ ದಿನ ನಿಮಗೆ ಮಿಶ್ರಫಲವಿದೆ. ದೀರ್ಘಕಾಲದ ಸಂದಿಗ್ಧತೆ ನಿಮ್ಮನ್ನು ಕಾಡಲಿದೆ. ಕೆಲಸಗಳಲ್ಲಿ ಅಂದುಕೊಂಡ ಯಶಸ್ಸು ಸಿಗುವುದಿಲ್ಲ. ಕುಟುಂಬದಲ್ಲಿ ಹಬ್ಬದ ವಾತಾವರಣವಿರುತ್ತದೆ.

ತುಲಾ ರಾಶಿ

ನಿಮ್ಮ ಮಧುರ ಮಾತಿನಿಂದ್ಲೇ ಹೊಸ ಸೌಹಾರ್ದಪೂರ್ಣ ಸಂಬಂಧ ಸೃಷ್ಟಿಯಾಗಲಿದೆ. ವೈಚಾರಿಕ ಸಮೃದ್ಧಿ ಹೆಚ್ಚಲಿದೆ. ವ್ಯಾಪಾರದಲ್ಲಿ ಲಾಭ ಮತ್ತು ಯಶಸ್ಸು ಸಿಗಲಿದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ

ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಿ. ಮಾನಸಿಕ ಸ್ವಾಸ್ಥ್ಯ ಅಷ್ಟು ಉತ್ತಮವಾಗಿರುವುದಿಲ್ಲ. ವಿಚಾರಹೀನತೆ ನಿಮ್ಮನ್ನು ಆತಂಕಕ್ಕೆ ದೂಡಬಹುದು. ಮಾತಿನ ಮೇಲೆ ಸಂಯಮ ಇಟ್ಟುಕೊಳ್ಳುವುದು ಉತ್ತಮ.

ಧನು ರಾಶಿ

ನೌಕರಿ, ವ್ಯಾಪಾರ ಮತ್ತು ಉದ್ಯಮದಲ್ಲಿ ಹೆಚ್ಚು ಲಾಭವಾಗಲಿದೆ. ಮಿತ್ರರು, ಸಂಬಂಧಿಕರು ಹಾಗೂ ಒಡ ಹುಟ್ಟಿದವರಿಂದ ಲಾಭ ಮತ್ತು ಸಹಕಾರ ದೊರೆಯಲಿದೆ. ನಿಮ್ಮ ಪಾಲಿಗೆ ಇಂದು ಶುಭದಿನ.

ಮಕರ ರಾಶಿ

ನಿಮ್ಮ ಯಶಸ್ಸು, ಕೀರ್ತಿ ಮತ್ತು ಪ್ರತಿಷ್ಠೆ ವೃದ್ಧಿಸಲಿದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಪ್ರಸನ್ನರಾಗುತ್ತಾರೆ. ನಿಮಗೆ ಪದೋನ್ನತಿ ಯೋಗವಿದೆ. ಆರೋಗ್ಯ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಆನಂದದ ವಾತಾವರಣವಿರುತ್ತದೆ.

ಕುಂಭ ರಾಶಿ

ಬೌದ್ಧಿಕ ಕಾರ್ಯಗಳು, ಸಾಹಿತ್ಯ, ಕಲೆಗೆ ಸಂಬಂಧಿಸಿದ ಕೆಲಸಗಳಿಗೆ ಇಂದು ದಿನ ಅನುಕೂಲಕರವಾಗಿದೆ. ಹೊಸ ಹೊಸ ಆಲೋಚನೆಗಳಿಂದ ಯೋಜನೆಗಳಿಗೆ ಹೊಸ ಸ್ವರೂಪ ಸಿಗಲಿದೆ. ಉದ್ಯಮದಲ್ಲಿನ ಪ್ರತಿಕೂಲ ವಾತಾವರಣ ನಿಮ್ಮ ಮನಸ್ಸನ್ನು ಅಸ್ವಸ್ಥಗೊಳಿಸಬಹುದು.

ಮೀನ ರಾಶಿ

ನಿಷೇಧಾತ್ಮಕ ಕೆಲಸ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಜಗಳ ಮತ್ತು ವಿವಾದ ಬೇಡ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿನ ವಾತಾವರಣ ಹದಗೆಡಬಹುದು. ಆರ್ಥಿಕ ತೊಂದರೆ ಎದುರಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...