alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಿದೆಯಾ ಇಂದು ಅದೃಷ್ಟ…? ಯಾವ ರಾಶಿಯವರಿಗೆ ಕಾದಿದೆ ದುರಾದೃಷ್ಟ…?

ಮೇಷ ರಾಶಿ

ನಿಮ್ಮ ಆದಾಯ ಮತ್ತು ವ್ಯಾಪಾರ ವೃದ್ಧಿಯಾಗಲಿದೆ. ಮನಸ್ಸು ಚಂಚಲವಾಗಬಹುದು. ಮನಸ್ಸು ವಿಚಲಿತವಾಗದಂತೆ ಎಚ್ಚರ ವಹಿಸಿ. ಹೊಸ ಸ್ನೇಹಿತರನ್ನು ಸಂಪಾದಿಸಲಿದ್ದೀರಿ.

ವೃಷಭ ರಾಶಿ

ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆ ಕಾಡಲಿದೆ. ಶೀತ, ಕೆಮ್ಮು, ಜ್ವರ ಕಾಡುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಗಮನವಿಡಿ. ದಾನ ಧರ್ಮದ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ.

ಮಿಥುನ ರಾಶಿ

ನೌಕರಿ ಮತ್ತು ವ್ಯಾವಹಾರಿಕ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಉತ್ಸಾಹ ವೃದ್ಧಿಸಲಿದೆ. ವೇತನ ವೃದ್ಧಿ ಅಥವಾ ಪದೋನ್ನತಿ ಯೋಗವಿದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ನಿಕಟತೆ ಹೊಂದಲಿದ್ದೀರಿ.

ಕರ್ಕ ರಾಶಿ

ಸಂಯಮವೇ ಇಂದು ನಿಮ್ಮ ಮಂತ್ರವಾಗಲಿ. ನಿಮ್ಮ ಸ್ವಭಾವದಲ್ಲಿನ ಉಗ್ರತೆಯಿಂದ ಯಾರೊಂದಿಗಾದ್ರೂ ಜಗಳವಾಗಬಹುದು. ಹೊಸ ಕಾರ್ಯವನ್ನು ಆರಂಭಿಸಬೇಡಿ.

ಸಿಂಹ ರಾಶಿ

ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು ಉತ್ತಮ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಹಣ ಖರ್ಚು ಮಾಡಬೇಕಾಗುತ್ತದೆ. ಕೋಪ ಮತ್ತು ಮಾತನ್ನು ನಿಯಂತ್ರಣದಲ್ಲಿಡಿ.

ಕನ್ಯಾ ರಾಶಿ

ಇಂದು ದೃಢಚಿತ್ತದಿಂದ ಕೆಲಸ ಮಾಡಿ. ಒಳ್ಳೆಯ ಅವಕಾಶ ಒದಗಿ ಬರಬಹುದು. ಹಠಮಾರಿತನ ಬೇಡ, ಸಮಾಧಾನ ಚಿತ್ತದಿಂದಿರಿ. ಯಾತ್ರೆಯ ಆಯೋಜನೆ ಸಫಲವಾಗುವುದಿಲ್ಲ.

ತುಲಾ ರಾಶಿ

ಕೆಲಸದಲ್ಲಿ ಯಶಸ್ಸು ಹಾಗೂ ಪ್ರತಿಸ್ಪರ್ಧಿಗಳ ವಿರುದ್ಧ ವಿಜಯ ಪ್ರಾಪ್ತಿಯಾಗಲಿದೆ. ಮಿತ್ರರು ಮತ್ತು ಬಂಧುಗಳೊಂದಿಗೆ ರಮಣೀಯ ಕ್ಷೇತ್ರಕ್ಕೆ ತೆರಳಲಿದ್ದೀರಿ. ಸುತ್ತಾಟದಿಂದ ಆನಂದ ಪ್ರಾಪ್ತಿಯಾಗಲಿದೆ.

ವೃಶ್ಚಿಕ ರಾಶಿ

ಇಂದು ಶಾರೀರಿಕ ಮತ್ತು ಮಾನಸಿಕ ಉತ್ಸಾಹದ ಕೊರತೆ ಉಂಟಾಗಲಿದೆ. ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಸ್ವಭಾವದಲ್ಲಿ ಉಗ್ರತೆ ಹೆಚ್ಚಾಗಿರುತ್ತದೆ.

ಧನು ರಾಶಿ

ಸಾಮಾಜಿಕ ಕಾರ್ಯಗಳಿಂದ ನಿಮಗೆ ಲಾಭವಾಗಲಿದೆ. ಮಿತ್ರರು ಮತ್ತು ಸಂಬಂಧಿಕರೊಂದಿಗಿನ ಭೇಟಿ ಲಾಭದಾಯಕವಾಗಲಿದೆ. ವಿವಾಹ ಉತ್ಸುಕರಿಗೆ ಪ್ರಯತ್ನ ಫಲ ಕೊಡಲಿದೆ.

ಮಕರ ರಾಶಿ

ಇಂದು ಪ್ರತಿ ವಿಷಯದಲ್ಲೂ ಅನುಕೂಲತೆಯ ಅನುಭವವಾಗಲಿದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸುಖಮಯ ಘಟನೆಗಳು ಜರುಗುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ.

ಕುಂಭ ರಾಶಿ

ಮನಸ್ಸಿನ ಗೊಂದಲ ನಿಮ್ಮಲ್ಲಿ ನಿರ್ಣಯ ಶಕ್ತಿಯ ಅಭಾವ ಸೃಷ್ಟಿಸಲಿದೆ. ಆರೋಗ್ಯ ಕೊಂಚ ಏರುಪೇರಾಗಲಿದೆ. ಮಾತಿನ ಮೇಲೆ ಸಂಯಮವಿರಲಿ. ವಾದ-ವಿವಾದದಿಂದ ಭಿನ್ನಾಭಿಪ್ರಾಯ ಮೂಡಬಹುದು.

ಮೀನ ರಾಶಿ

ನಿಮ್ಮ ಮನಸ್ಸು ಶಾಂತವಾಗಿ, ಪ್ರಸನ್ನವಾಗಿ ಇರುತ್ತದೆ. ಒಡಹುಟ್ಟಿದವರನ್ನು ಭೇಟಿಯಾಗಲಿದ್ದೀರಿ. ಇಂದು ಹೊಸ ಕಾರ್ಯ ಆರಂಭಿಸಬಹುದು. ಸ್ನೇಹಿತರ ಭೇಟಿಯಿಂದ ಸಂತೋಷ ಮೂಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...