alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಾಪಾರದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ

ವ್ಯಾಪರದಲ್ಲಿ ಯಶಸ್ಸು ಸಿಗಬೇಕಾದ್ರೆ ಕೆಲಸದ ಜೊತೆ ಗ್ರಹಗಳು ಬಲವಾಗಿರಬೇಕು. ಕಠಿಣ ಕೆಲಸದ ಜೊತೆ ಅದೃಷ್ಟ ಕೂಡಿ ಬಂದ್ರೆ ಯಶಸ್ಸು ಲಭಿಸುತ್ತದೆ.

ವ್ಯಾಪರದ ಸ್ಥಳದಲ್ಲಿ ಗುಲಾಬಿ ಸುವಾಸನೆಯುಳ್ಳ ಅಗರಬತ್ತಿಯನ್ನು ಹಚ್ಚಬೇಕು. ಪ್ರತಿಯೊಂದು ವ್ಯವಹಾರದ ಹಿಂದೆ ಗ್ರಹದ ಪಾತ್ರ ಮಹತ್ವದ ಪಾತ್ರ ವಹಿಸುತ್ತದೆ. ಗ್ರಹ ಒಳ್ಳೆಯ ಸ್ಥಾನದಲ್ಲಿದ್ದರೆ ವ್ಯಾಪಾರದಲ್ಲಿ ಏಳಿಗೆಯಾಗುತ್ತದೆ.

ಗ್ರಹ ದುರ್ಬಲವಾಗಿದ್ದರೆ ವ್ಯವಹಾರದ ಬಾಗಿಲೆಲ್ಲ ಮುಚ್ಚಲ್ಪಡುತ್ತದೆ. ಲಾಭದ ಬದಲು ನಷ್ಟವುಂಟಾಗುತ್ತದೆ.

ಜವಳಿ ಉದ್ಯಮದಲ್ಲಿರುವವರಿಗೆ ಶುಕ್ರ ಗ್ರಹ ಬಲವಾಗಿರಬೇಕು. ಈ ಗ್ರಹವನ್ನು ಬಲಪಡಿಸಲು ಬೆಳಿಗ್ಗೆ ಹಾಗೂ ರಾತ್ರಿ ಶುಕ್ರನ ಮಂತ್ರವನ್ನು ಪಠಿಸಿ.

ಸ್ಪಟಿಕದ ಮಾಲೆಯನ್ನು ಕೊರಳಿಗೆ ಧರಿಸಿ. ಪ್ರತಿ ಶುಕ್ರವಾರ ಬೆಳ್ಳಗಿನ ಮಿಠಾಯಿಯನ್ನು ತಾಯಿ ಲಕ್ಷ್ಮಿಗೆ ಅರ್ಪಿಸಿ. ಸಾಧ್ಯವಾದಷ್ಟು ಕಪ್ಪು ಬಣ್ಣದಿಂದ ದೂರವಿರಿ.

ಆಹಾರದ ವ್ಯಾಪಾರ ಮಾಡುತ್ತಿರುವವರಿಗೆ ಗುರು ಬಲವಾಗಿರಬೇಕು. ಬೇಯಿಸಿದ ಆಹಾರದ ಹಿಂದೆ ಶುಕ್ರನಿರುತ್ತಾನೆ. ಜಲವಾಸಿ ಆಹಾರದ ಹಿಂದೆ ಚಂದ್ರನಿರುತ್ತಾನೆ. ಎಲ್ಲ ರೀತಿಯ ಆಹಾರದ ವ್ಯಾಪಾರ ನಡೆಸುವವರು ಶ್ರೀಕೃಷ್ಣನ ಆರಾಧನೆ ಮಾಡಬೇಕು.

ಶಿಕ್ಷೆ, ವಿದ್ಯೆ ವ್ಯವಹಾರ ನಡೆಸುವ ಜನರಿಗೆ ಗುರು, ಶುಕ್ರ, ಬುಧ ಗ್ರಹಗಳು ಮಹತ್ವದ ಪಾತ್ರ ವಹಿಸುತ್ತವೆ. ಇದ್ರಲ್ಲಿ ಯಶಸ್ಸು ಗಳಿಸಲು ಶಿವನ ಆರಾಧನೆ ಮಾಡಬೇಕು. ಕಾರ್ಯ ಸ್ಥಳದಲ್ಲಿ ಹಳದಿ ಹಾಗೂ ಬಿಳಿ ಬಣ್ಣಕ್ಕೆ ಆದ್ಯತೆ ನೀಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...