alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಟ್ಟ ಸಮಯವನ್ನು ಬದಲಿಸುತ್ತೆ ಪಾತ್ರೆಯಲ್ಲಿ ಹಾಕುವ ಈ ಒಂದು ವಸ್ತುವಿನ ಹೊಗೆ

ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಧೂಪ ಹಚ್ಚುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮನೆಯಲ್ಲಿ ಧೂಪ ದ್ರವ್ಯಗಳನ್ನು ಹಚ್ಚುವುದ್ರಿಂದ ಹಿರಿಯರ ಕೃಪೆ ಸಿಗಲಿದೆ. ಮನೆಯಲ್ಲಿ ಧೂಪ ಹಚ್ಚುವುದ್ರಿಂದ ಶಾಂತಿ, ಸಂತೋಷ ಪ್ರಾಪ್ತಿಯಾಗುತ್ತದೆ. ಯಾವ ಧೂಪ ಶಾಂತಿ, ಸಮೃದ್ಧಿಗೆ ಸಹಕಾರಿ ಎಂಬುದನ್ನೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಬೆಳಿಗ್ಗೆ ಮತ್ತು ಸಂಜೆ ಪೂಜೆ ನಂತ್ರ ಬಟ್ಟಲಿನಲ್ಲಿ ಅಥವಾ ಮಣ್ಣಿನ ದೊಡ್ಡ ದೀಪದಲ್ಲಿ ಕರ್ಪೂರದ ಜೊತೆ ಲವಂಗವನ್ನು ಸುಡಬೇಕು. ಕರ್ಪೂರದ ಹೊಗೆ ಮನೆಯ ವಾಸ್ತು ದೋಷವನ್ನು ಕಡಿಮೆ ಮಾಡುತ್ತದೆ. ದೇವಾನುದೇವತೆಗಳು ಪ್ರಸನ್ನರಾಗುವ ಜೊತೆಗೆ ಹಣದ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ಹಳದಿ ಸಾಸಿವೆ, ಸಾಂಬ್ರಾಣಿ, ಹಸುವಿನ ತುಪ್ಪವನ್ನು ಸೂರ್ಯಾಸ್ತದ ವೇಳೆ ಧೂಪದ ಜೊತೆ ಬೆರೆಸಿ ಹೊಗೆ ಹಾಕಿದ್ರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಮನೆಯಲ್ಲಿ ಹಣದ ಅಭಾವ ಕಾಡ್ತಿದೆ ಎನ್ನುವವರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ತುಪ್ಪದ ದೀಪವನ್ನು ದೇವರ ಮುಂದೆ ಹಚ್ಚಬೇಕು. ಶುಕ್ರವಾರ ಮಹಾಕಾಳಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬೇಕು.

ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಬೇವಿನ ಎಲೆಯ ಹೊಗೆಯನ್ನು ಮನೆಗೆ ತೋರಿ. ಇದ್ರಿಂದ ಸೂಕ್ಷ್ಮ ಕೀಟಗಳು ನಾಶವಾಗಿ ಸಕಾರಾತ್ಮಕ ಶಕ್ತಿ ಮನೆ ಮಾಡುತ್ತದೆ.

ಪ್ರತಿದಿನ ಚಂದನ, ಏಲಕ್ಕಿ, ಕರ್ಪೂರದ ಹೊಗೆಯನ್ನು ಮನೆಗೆ ತೋರುವುದ್ರಿಂದ ದೇವಾನುದೇವತೆಗಳು ಆಕರ್ಷಿತರಾಗ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...